ಭುವನೇಶ್ವರ್,ಆ. 31 (ಪಿಟಿಐ) ಹಲವಾರು ದೇಶಗಳಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮತ್ತಷ್ಟು ಬೆಳೆಯಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಒಡಿಸಾಕ್ಕೆ ಐದು ದಿನಗಳ ಭೇಟಿಯಲ್ಲಿರುವ ದಾಸ್ ಅವರು, ಕ್ಯೂಆರ್ ಕೋಡ್‌ಗಳು ಮತ್ತು ವೇಗದ ಪಾವತಿ ವ್ಯವಸ್ಥೆಗಳ ಸಂಪರ್ಕದ ಮೂಲಕ ಯುಪಿಐ ಈಗಾಗಲೇ ಅನೇಕ ದೇಶಗಳಲ್ಲಿ ಪ್ರಸ್ತುತವಾಗಿದೆ ಮತ್ತು ಹಲವಾರು ಇತರ ರಾಷ್ಟ್ರಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.
ಇದು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬೆಳೆಯುತ್ತದೆ ಮತ್ತು ಭವಿಷ್ಯದಲ್ಲಿ ಅಂತರಾಷ್ಟ್ರೀಯೀಕರಣಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮುಂಬೈನಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ದಾಸ್, ಭೂತಾನ್, ನೇಪಾಳ, ಶ್ರೀಲಂಕಾ, ಸಿಂಗಾಪುರ್, ಯುಎಇ, ಮಾರಿಷಸ್, ನಮೀಬಿಯಾ, ಪೆರು, ಫ್ರಾನ್ಸ್ ಮತ್ತು ಇತರ ಕೆಲವು ದೇಶಗಳೊಂದಿಗೆ ಈಗಾಗಲೇ ಈ ದಿಕ್ಕಿನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಹೇಳೀದ್ದರು.
ರುಪೇ ಕಾರ್ಡ್‌ಗಳು ಮತ್ತು ಯುಪಿಐ ನೆಟ್‌ವರ್ಕ್ ಮೂಲಕ ಪಾವತಿಗಳು ಹೆಚ್ಚು ಪ್ರಚಲಿತಗೊಳಿಸಲಾಗುವುದು ಎಂದು ತಿಳಿಸಿದ್ದರು.ಈ ಪ್ರಯತ್ನಗಳು, ಜಗತ್ತಿನಾದ್ಯಂತ ಭಾರತದ ಉಪಕ್ರಮಗಳನ್ನು ಅಳವಡಿಸಿಕೊಳ್ಳಲು ಸಹಕಾರಿ ಪ್ರಯತ್ನಗಳನ್ನು ಒತ್ತಿಹೇಳುತ್ತವೆ ಎಂದು ಅವರು ಹೇಳಿದರು.