ಭಾರತ ಕ್ರಿಕೆಟ್ ತಂಡವು 2024ರಲ್ಲಿ ಹಲವು ಸರಣಿಗಳ ಗೆಲುವುಗಳ ಜೊತೆಗೆ ಚುಟುಕು ವಿಶ್ವಕಪ್ ಗೆದ್ದುಕೊಟ್ಟ ಸಂಭ್ರಮವನ್ನು ಅಭಿಮಾನಿಗಳಿಗೆ ನೀಡಿದರೂ ಕೂಡ, ತವರು ನೆಲದಲ್ಲಿ 12 ವರ್ಷಗಳ ಸೋಲು ಹಾಗೂ 24 ವರ್ಷಗಳ ನಂತರ ವೈಟ್ ವಾಷ್ ಅನುಭವಿಸಿತು. ಟೆಸ್ಟ್ ದಾಖಲೆ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ದಶಕಗಳ ಕಾಲ ನಿರ್ಮಿಸಿದ್ದ ಟೆಸ್ಟ್ ದಾಖಲೆಗಳನ್ನು ಕಳೆದುಕೊಂಡಿಲ್ಲದೆ, ಈ ವರ್ಷದಲ್ಲಿ ಒಂದೇ ಒಂದು ಏಕದಿನ ಪಂದ್ಯ ಗೆಲ್ಲದೆ ಹತಾಶೆ ಮೂಡಿಸಿದೆ.
ಘಟಾನುಘಟಿಗಳ ನಿವೃತ್ತಿ:
ಇಲ್ಲದೆ 2024ರಲ್ಲಿ ಕನ್ನಡಿಗ , ಭಾರತದ ಮಹಾಗೋಡೆ ರಾಹುಲ್ ದ್ರಾವಿಡ್ ಅವರು ಭಾರತಕ್ಕೆ 12 ವರ್ಷಗಳ ನಂತರ ಐಸಿಸಿ ವಿಶ್ವಕಪ್ ಗೆದ್ದುಕೊಟ್ಟ ನಂತರ ತಮ ಕೋಚ್ ಹುದ್ದೆಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ , ರವೀಂದ್ರ ಜಡೇಜಾ ಅವರು ನಿವೃತ್ತಿ ಘೋಷಿಸಿದ್ದು, ಅಲ್ಲದೆ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಬೆನ್ನಲ್ಲೇ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಹೊಸ ಸಾರಥಿಗಳು:
2024ರ ಐಪಿಎಲ್ ವಿಜೇತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ಹೆಡ್ ಕೋಚ್ ಹಾಗೂ ಸೂರ್ಯ ಕುಮಾರ್ ಯಾದವ್ ಟಿ20 ಸ್ವರೂಪದ ಪೂರ್ಣ ನಾಯಕರಾಗಿ ಆಯ್ಕೆಯಾದರು. ಇದೇ ಅಲ್ಲದೆ ಹಲವು ದಾಖಲೆಗಳನ್ನು ಕೂಡ ಟೀಮ್ ಇಂಡಿಯಾ ನಿರ್ಮಿಸಿದೆ.
ಟೆಸ್ಟ್ ನಲ್ಲಿ ನಿರಾಸೆ:
ಐಸಿಸಿ ಆಯೋಜನೆಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಎರಡೂ ಆವೃತ್ತಿಗಳಲ್ಲೂ ಫೈನಲ್ ತಲುಪಿದ್ದ ಭಾರತ ತಂಡವು ಈ ಬಾರಿ ಪ್ರಶಸ್ತಿ ಸುತ್ತಿಗೆ ತಲುಪುವಲ್ಲಿ ಎಡವಿದೆ. ಬಾಂಗ್ಲಾದೇಶ ವಿರುದ್ಧದ 2-0 ಅಂತರದಿಂದ ಸರಣಿ ಜಯಿಸಿದ ಟೀಮ್ ಇಂಡಿಯಾ ನಂತರ ನ್ಯೂಜಿಲೆಂಡ್ ವಿರುದ್ಧ 3-0 ಯಿಂದ ಕ್ಲೀನ್ ಸ್ವೀಪ್ ಹೀನಾಯ ಸೋಲು ಕಂಡು 24 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಸೋಲು ಕಂಡಿತು. ಅಲ್ಲದೆ ಆಸ್ಟ್ರೇಲಿಯಾದ ಪ್ರವಾಸದಲ್ಲಿ ಕಳೆದೆರಡು ಬಾರಿ ಸರಣಿ ಜಯಿಸಿದ್ದ ಭಾರ ತಂಡ ಈ ಬಾರಿ ಸರಣಿ ಸೋಲುವ ಭೀತಿಯಲ್ಲಿದೆ. ಜಸ್ ಪ್ರೀತ್ ಬೂಮ್ರಾ ಸಾರಥ್ಯದಲ್ಲಿ ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ ಗಳ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ ನಂತರ ಗಬ್ಬಾದಲ್ಲಿ ಡ್ರಾ ಸಾಧಿಸಿದ ನಂತರ ಅಡಿಲೇಡ್ ಹಾಗೂ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಸೋಲು ಕಂಡು ವರ್ಷವನ್ನು ಮುಗಿಸಿದೆ. ಅಲ್ಲದೆ ಸರಣಿಯಲ್ಲಿ 2-1 ಹಿನ್ನಡೆ ಅನುಭವಿಸಿದೆ.
2024ರಲ್ಲಿ ಟೀಮ್ ಇಂಡಿಯಾ 15 ಟೆಸ್ಟ್ ಪಂದ್ಯಗಳಲ್ಲಿ 8 ಗೆಲುವು , 6 ಸೋಲು ಹಾಗೂ 1ರಲ್ಲಿ ಟೈ ಸಾಧಿಸಿದೆ.
ಗರಿಷ್ಠ ರನ್: ಯಶಸ್ವಿ ಜೈಸ್ವಾಲ್- 1478 ರನ್- 29 ಇನಿಂಗ್‌್ಸ- 3 ಶತಕ
ಗರಿಷ್ಠ ವಿಕೆಟ್: ಜಸ್ ಪ್ರೀತ್ ಬೂಮ್ರಾ- 71 ವಿಕೆಟ್, 21 ಇನಿಂಗ್‌್ಸ- 5 ಬಾರಿ 5 ವಿಕೆಟ್ ಸಾಧನೆ
ಚುಟುಕು ಚಾಂಪಿಯನ್ ಪಟ್ಟ:
ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು 6 ರನ್ ಗಳಿಂದ ಮಣಿಸಿ 2007ರ ನಂತರ ಮತ್ತೊಮೆ ಚುಟುಕು ಚಾಂಪಿಯನ್ ಪಟ್ಟ ಹಾಗೂ 2013ರ ನಂತರ ಐಸಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾ, 2024ರಲ್ಲಿ ಆಡಿದ 26 ಪಂದ್ಯಗಳಲ್ಲಿ ಎರಡು ಸೂಪರ್ ಓವರ್ ಗೆಲುವು ಸೇರಿದಂತೆ 24 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದರೆ, ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
ಗರಿಷ್ಠ ರನ್: ಸಂಜು ಸ್ಯಾಮ್ಸನ್: 436 ರನ್,12 ಪಂದ್ಯ, 3 ಶತಕ
ಗರಿಷ್ಠ ವಿಕೆಟ್: ಅರ್ಷದೀಪ್ ಸಿಂಗ್: 36 ವಿಕೆಟ್, 18 ಪಂದ್ಯ, 2 ಬಾರಿ 4 ವಿಕೆಟ್ ಸಾಧನೆ.
ಏಕದಿನದಲ್ಲಿ ಶೂನ್ಯ ಸಾಧನೆ:
ಟ್ವೆಂಟಿ-20 ವಿಶ್ವಕಪ್ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದ ಬಿಸಿಸಿಐ 2024ರಲ್ಲಿ ಕೇವಲ 3 ಏಕದಿನ ಪಂದ್ಯಗಳನ್ನು ಮಾತ್ರ ಆಯೋಜಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ಈ ಸರಣಿಯಲ್ಲಿ ಟೀಮ್ ಇಂಡಿಯಾ 2ರಲ್ಲಿ ಸೋಲು ಹಾಗೂ 1ರಲ್ಲಿ ಟೈ ಸಾಧಿಸಿದೆ.
ಗರಿಷ್ಠ ರನ್: ರೋಹಿತ್ ಶರ್ಮಾ: 157 ರನ್, 2 ಅರ್ಧಶತಕ
ಗರಿಷ್ಠ ವಿಕೆಟ್: ವಾಷಿಂಗ್ಟನ್ ಸುಂದರ್: 5 ವಿಕೆಟ್
ಅಂತಾರಾಷ್ಟ್ರೀಯ ಕ್ರಿಕೆಟ್ ನ ಒಟ್ಟು ಸಾಧನೆ:
ಪಂದ್ಯ: 44
ಗೆಲುವು: 31 (2 ಸೂಪರ್ ಓವರ್ ಗೆಲುವು)
ಸೋಲು: 10
ಡ್ರಾ:1
ಗರಿಷ್ಠ ರನ್: ಯಶಸ್ವಿ ಜೈಸ್ವಾಲ್ (1771 ರನ್)
ಗರಿಷ್ಠ ವಿಕೆಟ್: ಜಸ್ಪ್ರೀತ್ ಬೂಮ್ರಾ (86 ವಿಕೆಟ್).