Wednesday, November 5, 2025
Homeಅಂತಾರಾಷ್ಟ್ರೀಯ | Internationalಅಮೆರಿಕದ ಕೆಂಟಕಿಯ ಲೂಯಿಸ್‌‍ವಿಲ್ಲೆಯಲ್ಲಿ ಸರಕು ಸಾಗಣೆ ವಿಮಾನ ಪತನ, ಮೂವರ ಸಾವು

ಅಮೆರಿಕದ ಕೆಂಟಕಿಯ ಲೂಯಿಸ್‌‍ವಿಲ್ಲೆಯಲ್ಲಿ ಸರಕು ಸಾಗಣೆ ವಿಮಾನ ಪತನ, ಮೂವರ ಸಾವು

UPS plane crashes while taking off from Louisville's airport, killing at least 4 people

ವಾಷಿಂಗ್ಟನ್‌,ನ. 5– ಅಮೆರಿಕದ ಕೆಂಟಕಿಯ ಲೂಯಿಸ್‌‍ವಿಲ್ಲೆಯಲ್ಲಿ ಸರಕು ಸಾಗಣೆ ವಿಮಾನವೊಂದು ಅಪಘಾತಕ್ಕಿಡಾಗಿ ಮೂವರು ಸಾವನ್ನಪ್ಪಿದ್ದಾರೆ. ಏರ್‌ಪೋರ್ಟ್‌ನಿಂದ ಹೊರಟಿದ್ದ ಮೂವರಿದ್ದ ಸರಕು ಸಾಗಣೆ ವಿಮಾನವೊಂದು ಹಾರುವಾಗಲೇ ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ.

ದುರಂತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ವಿಮಾನಪತನಗೊಂಡ ಪ್ರದೇಶದ ಸುತ್ತ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದೆ. ದುರಂತದಲ್ಲಿ ಹಲವಾರು ಮನೆಗಳು ನಾಶವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

- Advertisement -

ಘಟನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ವಿಮಾನ ನಿಲ್ದಾಣವನ್ನ ಮುಚ್ಚಿದ್ದು, ಸುತ್ತಮುತ್ತ ಮನೆ ಕಳೆದುಕೊಂಡವರಿಗೆ ಆಶ್ರಯ ನೀಡುವಂತೆ ಸೂಚಿಸಿದ್ದಾರೆ.ಹೊನೊಲುಲುಗೆ ತೆರಳುತ್ತಿದ್ದ ಮೆಕ್‌ಡೊನೆಲ್‌‍ ಡೌಗ್ಲಾಸ್‌‍ ಎಂಡಿ-11ಎಫ್‌ ವಿಮಾನ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ ಎಂದು ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ (ಎಫ್‌ಎಎ) ವರದಿ ಮಾಡಿದೆ.

ದುರಂತದ ವಿಡಿಯೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಮೊದಲು ಎಡ ರೆಕ್ಕೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ನಂತರ ಇಡೀ ವಿಮಾನಕ್ಕೆ ಬೆಂಕಿ ವ್ಯಾಪಿಸಿದ್ದು, ನೆಲಕ್ಕಪ್ಪಳಿಸಿದೆ, ರನ್‌ವೇನಲ್ಲೇ ಉಜ್ಜಿಕೊಂಡು ಸ್ವಲ್ಪದೂರ ಮುಂದಕ್ಕೆ ಹೋಗಿದೆ. ಇದರಿಂದ ರನ್‌ವೇಯಿಂದಾಚೆಗಿದ್ದ ಕಟ್ಟಗಳಿಗೂ ಭಾರೀ ಹಾನಿಯಾಗಿದೆ.

ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಲೂಯಿಸ್‌‍ವಿಲ್ಲೆಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಕೆಂಟುಕಿ ಗವರ್ನರ್‌ ಆಂಡಿ ಬೆಶಿಯರ್‌ ತಿಳಿಸಿದ್ದಾರೆ. ಇದು ತಕ್ಷಣದ ಮಾಹಿತಿಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಸ್ಫೋಟಗೊಂಡ ವೇಳೆ ವಿಮಾನದಲ್ಲಿ ಸುಮಾರು 2,80,000 ಗ್ಯಾಲನ್‌ನಷ್ಟು (10 ಲಕ್ಷ ಲೀಟರ್‌ಗೂ ಅಧಿಕ) ಇಂಧನ ಇತ್ತು. ಇದರಿಂದಾಗಿ ಬೆಂಕಿ ಭಾರೀ ಪ್ರಮಾಣದಲ್ಲಿ ವ್ಯಾಪಿಸಿದೆ ಎಂದು ವಿವರಿಸಿದ್ದಾರೆ.ರಕ್ಷಣಾ ಕಾರ್ಯಾಚರಣೆ ಚುರುಕುವಿಮಾನ ದುರಂತ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ.

- Advertisement -
RELATED ARTICLES

Latest News