Sunday, January 19, 2025
Homeಇದೀಗ ಬಂದ ಸುದ್ದಿಮುಂಬೈ ಅಮೆರಿಕ ಕಾನ್ಸುಲೇಟ್ ಕಚೇರಿ ಸ್ಫೋಟದ ಬೆದರಿಕೆ

ಮುಂಬೈ ಅಮೆರಿಕ ಕಾನ್ಸುಲೇಟ್ ಕಚೇರಿ ಸ್ಫೋಟದ ಬೆದರಿಕೆ

ಮುಂಬೈ,ಫೆ.11- ಮುಂಬೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಸ್ಪೋಟಿಸುವ ಬೆದರಿಕೆ ಬಂದಿದೆ. ಅನಾಮಧೇಯ ವ್ಯಕ್ತಿಯೊಬ್ಬ ಕಚೇರಿ ಸ್ಪೋಟಿಸುವ ಬೆದರಿಕೆ ಇಮೇಲ್ ಕಳುಹಿಸಿದ್ದು ಬಾಂದ್ರಾ ಕುರ್ಲಾ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರ್‍ಕೆಜಿಟ್ರೆಡಿಂಗ್777ಆಟ್‍ಜಿಮೇಲ್ ಎಂಬ ವಿಳಾಸದಿಂದ ಇಮೇಲ್ ಸ್ವೀಕರಿಸಲಾಗಿದ್ದು ಆರೋಪಿ ಬಂಧನಕ್ಕೆ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 505 (1) (ಬಿ) ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಾಂದ್ರಾ-ಕುರ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ.

ಚರಣ್‍ಸಿಂಗ್ ಭಾರತರತ್ನ ಲಭಿಸಿರುವುದು ದೇಶದ 90 ಕೋಟಿ ರೈತರಿಗೆ ಸಂದ ಗೌರವ : ಚೌಧರಿ

ಇಮೇಲ್‍ನಲ್ಲಿ, ಅಪರಿಚಿತ ವ್ಯಕ್ತಿ ತನ್ನನ್ನು ಯುಎಸ್ ಪ್ರಜೆ ಎಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ, ಆರೋಪಿ ಅಮೆರಿಕನ್ ದೂತಾವಾಸವನ್ನು ಸ್ಪೋಟಿಸುವುದಾಗಿ ಮತ್ತು ಅಲ್ಲಿ ಕೆಲಸ ಮಾಡುವ ಎಲ್ಲಾ ಅಮೆರಿಕನ್ ನಾಗರಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

RELATED ARTICLES

Latest News