Sunday, September 8, 2024
Homeಅಂತಾರಾಷ್ಟ್ರೀಯ | Internationalಧರ್ಮ ಸ್ವಾತಂತ್ರ್ಯದ ರಕ್ಷಣೆಗೆ ಭಾರತ-ಅಮೆರಿಕ ಬದ್ಧ

ಧರ್ಮ ಸ್ವಾತಂತ್ರ್ಯದ ರಕ್ಷಣೆಗೆ ಭಾರತ-ಅಮೆರಿಕ ಬದ್ಧ

ವಾಷಿಂಗ್ಟನ್‌, ಮೇ 21 (ಪಿಟಿಐ) ಬಿಡೆನ್‌ ಆಡಳಿತವು ಧರ್ಮದ ಸ್ವಾತಂತ್ರ್ಯದ ಹಕ್ಕಿಗಾಗಿ ಸಾರ್ವತ್ರಿಕ ಗೌರವವನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಆಳವಾಗಿ ಬದ್ಧವಾಗಿದೆ ಮತ್ತು ಎಲ್ಲಾ ಧಾರ್ಮಿಕ ಸಮುದಾಯಗಳ ಸದಸ್ಯರಿಗೆ ಸಮಾನ ಗೌರವದ ಮಹತ್ವದ ಕುರಿತು ಭಾರತ ಸೇರಿದಂತೆ ಹಲವು ದೇಶಗಳನ್ನು ತೊಡಗಿಸಿಕೊಂಡಿದೆ ಎಂದು ಅಮೆರಿಕ ಹೇಳಿದೆ.

ಎಲ್ಲಾ ಧಾರ್ಮಿಕ ಸಮುದಾಯಗಳ ಸದಸ್ಯರಿಗೆ ಸಮಾನತೆಯ ಪ್ರಾಮುಖ್ಯತೆಯ ಕುರಿತು ನಾವು ಭಾರತ ಸೇರಿದಂತೆ ಹಲವು ದೇಶಗಳನ್ನು ತೊಡಗಿಸಿಕೊಂಡಿದ್ದೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವ್ಯಾಥ್ಯೂ ಮಿಲ್ಲರ್‌ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಭಾರತದಲ್ಲಿ ವಿಶ್ವದ ಅತಿ ದೊಡ್ಡ ಮುಸ್ಲಿಂ ಸಮುದಾಯವು ತಮ್ಮ ಕುಟುಂಬ ಮತ್ತು ಮಕ್ಕಳನ್ನು ಭಯ ಮತ್ತು ಅನಿಶ್ಚಿತತೆಯಿಂದ ಸಾಕುತ್ತಿದ್ದಾರೆ ಎಂದು ಆರೋಪಿಸಿರುವ ಸೆ್ಟ್ರೕಂಜರ್ಸ್‌ ಇನ್‌ ದೇರ್‌ ಓನ್‌ ಲ್ಯಾಂಡ್‌. ಬೀಯಿಂಗ್‌ ಮುಸ್ಲಿಮ್‌ ಇನ್‌ ದೇರ್‌ ಓನ್‌ ಲ್ಯಾಂಡ್‌; ಬೀಯಿಂಗ್‌ ಮುಸ್ಲಿಮ್‌‍ ಎಂಬ ಶೀರ್ಷಿಕೆಯ ನ್ಯೂಯಾರ್ಕ್‌ ಟೈಮ್ಸ್‌‍ ಕಥೆಯ ಪ್ರಶ್ನೆಗೆ ಮಿಲ್ಲರ್‌ ಈ ರೀತಿ ಪ್ರತಿಕ್ರಿಯಿಸಿದರು.

ನೀವು ಈ ಸಮಸ್ಯೆ ಬಗ್ಗೆ ಭಾರತೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೀರಾ ಎಂದು ಮಿಲ್ಲರ್‌ ಅವರನ್ನು ಕೇಳಲಾಯಿತು. ನಾನು ಖಾಸಗಿ ರಾಜತಾಂತ್ರಿಕ ಸಂಭಾಷಣೆಗಳೊಂದಿಗೆ ಮಾತನಾಡುವುದಿಲ್ಲ ಆದರೆ ಪ್ರಪಂಚದಾದ್ಯಂತ ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯದ ಹಕ್ಕಿಗಾಗಿ ಸಾರ್ವತ್ರಿಕ ಗೌರವವನ್ನು ಉತ್ತೇಜಿಸಲು ಮತ್ತು ರಕ್ಷಿಸಲು ನಾವು ಆಳವಾಗಿ ಬದ್ಧರಾಗಿದ್ದೇವೆ ಎಂದು ಮಿಲ್ಲರ್‌ ಹೇಳಿದರು.

ವಾರಾಂತ್ಯದಲ್ಲಿ ಪ್ರಕಟವಾದ ಲೇಖನವು ಪ್ರಧಾನಿ ನರೇಂದ್ರ ಮೋದಿಯವರು ಅದಿಕಾರ ವಹಿಸಿಕೊಂಡ ನಂತರ ಜಾತ್ಯತೀತ ಚೌಕಟ್ಟು ಮತ್ತು ದೃಢವಾದ ಪ್ರಜಾಪ್ರಭುತ್ವವನ್ನು ದೂರವಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಭಾರತವು ದೇಶದ ತಪ್ಪು ಮಾಹಿತಿ ಮತ್ತು ದೋಷಪೂರಿತ ತಿಳುವಳಿಕೆಯ ಆಧಾರದ ಮೇಲೆ ಇಂತಹ ಆರೋಪಗಳನ್ನು ಕಸದ ಬುಟ್ಟಿಗೆ ಹಾಕಿದೆ.

ಪ್ರಧಾನಿ ಮೋದಿ ಅವರು ಅಲ್ಪಸಂಖ್ಯಾತರ ವಿರುದ್ಧ ಯಾವತ್ತೂ ಒಂದು ಮಾತನ್ನೂ ಆಡಿಲ್ಲ ಮತ್ತು ಬಿಜೆಪಿ ಅವರ ವಿರುದ್ಧ ಇಂದು ಮಾತ್ರವಲ್ಲ, ಎಂದಿಗೂ ಅವರನು ದ್ವೇಷಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

RELATED ARTICLES

Latest News