Friday, April 4, 2025
Homeಅಂತಾರಾಷ್ಟ್ರೀಯ | Internationalಟ್ರಂಪ್‌ ವಿಮಾನದಲ್ಲಿ ತಾಂತ್ರಿಕ ದೋಷ

ಟ್ರಂಪ್‌ ವಿಮಾನದಲ್ಲಿ ತಾಂತ್ರಿಕ ದೋಷ

ಬೋಝೆಮನ್‌,ಆ.10- ವೆಂಟಾನಾದ ಡೆಮಾಕ್ರೆಟಿಕ್‌ ಸೆನೆಟರ್‌ ಜಾನ್‌ ಸೆನೆಟರ್‌ ಅವರ ವಾಗ್ದಂಡನೆಗೆ ಬೆಂಬಲ ಗಳಿಸಲು ಉದ್ದೇಶಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ವಿಮಾನ ಯಾಂತ್ರಿಕ ದೋಷದಿಂದಾಗಿ ಗುಡ್ಡಗಾಡು ಪ್ರದೇಶದಲ್ಲಿ ಬೇರೆಡೆಗೆ ನಿರ್ದೇಶಿತವಾಗಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಎಂದು ವಿಮಾನನಿಲ್ದಾಣದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಟ್ರಂಪ್‌ ಅವರಿದ್ದ ವಿಮಾನ ಬೋಝೆಮನ್‌ಗೆ ಸಂಚರಿಸುತ್ತಿದ್ದಾಗ ಶುಕ್ರವಾದ ಮಧ್ಯಾಹ್ನ ಪೂರ್ವಕ್ಕೆ 142 ಮೈಲುಗಳನ್ನು ದೂರವಿರುವ ಬಿಲ್ಲಿಂಗ್ಸ್ ಗೆ ಪಲ್ಲಟಗೊಂಡಿತು. ವಿಮಾನ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದ ಬಳಿಕ ಟ್ರಂಪ್‌ ಖಾಸಗಿ ವಿಮಾನದಲ್ಲಿ ಬಿಲ್ಲಿಂಗ್ಸ್ ಲೋಗನ್‌ ಅಂತಾರಾಷ್ಟ್ರೀಯ ನಿಲ್ದಾಣದಿಂದ ಬೋಝೆಮನ್‌ಗೆ ಪ್ರಯಾಣ ಮುಂದುವರೆಸಿದರು ಎಂದು ವರದಿಯಾಗಿದೆ.

RELATED ARTICLES

Latest News