ನವದೆಹಲಿ, ಏ.25- ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನರು ಸಾವನ್ನಪ್ಪಿದ ವರದಿಯನ್ನು ಲಘುವಾಗಿ ಪರಿಗಣಿಸಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು ಅಮೆರಿಕ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ.
ಭಯೋತ್ಪಾದಕರು ಎಂಬ ಪದದ ಬದಲು ಉಗ್ರಗಾಮಿಗಳು ಮತ್ತು ಬಂದೂಕುಧಾರಿಗಳು ಎಂಬ ಪದಗಳನ್ನು ಬಳಸುವ ಮೂಲಕ ಘಟನೆಯ ಗಂಭೀರತೆಯನ್ನು ಕಡಿಮೆ ಮಾಡಲಾಗಿದೆ ಎಂದು ಯುಎಸ್ ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿ ಆರೋಪಿಸಿದೆ.
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಮಿತಿಯು ಪತ್ರಿಕೆಯ ಪದಗಳ ಆಯ್ಕೆಯನ್ನು ತೀವ್ರವಾಗಿ ಖಂಡಿಸಿದೆ. ಕಾಶ್ಮೀರದಲ್ಲಿ ಕನಿಷ್ಠ 24 ಪ್ರವಾಸಿಗರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಉಗ್ರಗಾಮಿಗಳು ಎಂಬ ಪದವನ್ನು ತೆಗೆದುಹಾಕಿ ದಪ್ಪ ಕೆಂಪು ಬಣ್ಣದಲ್ಲಿ ಭಯೋತ್ಪಾದಕರು ಎಂದು ಸಮಿತಿ ಬದಲಾಯಿಸಿ ಪೋಸ್ಟ್ ಹಾಕಿದೆ.