ವಾಷಿಂಗ್ಟನ್, ಜೂ.6 (ಪಿಟಿಐ) ಉನ್ನತ ನಾಯಕರು ದ್ವಿಪಕ್ಷೀಯ ಪಾಲುದಾರಿಕೆಯನ್ನು ಗಾಢವಾಗಿಸಿಕೊಳ್ಳುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತತ್ವದ ಹೊಸ ಸರ್ಕಾರದೊಂದಿಗೆ ವಿಶ್ವಾಸಾರ್ಹ, ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಸೇರಿದಂತೆ ಹಂಚಿಕೆಯ ಆದ್ಯತೆಗಳ ಕುರಿತು ಮಾತುಕತೆ ನಡೆಸಲು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಐತಿಹಾಸಿಕ ಮೂರನೇ ಅವಧಿಗೆ ಪುನರಾಯ್ಕೆಯಾಗಿರುವ ಅವರನ್ನು ಅಭಿನಂದಿಸಲು ಅಧ್ಯಕ್ಷ ಬಿಡೆನ್ ಅವರು ಬುಧವಾರ ಪ್ರಧಾನಿ ಮೋದಿ ಅವರಿಗೆ ಮಾಡಿದ ದೂರವಾಣಿ ಕರೆಯಲ್ಲಿ ಸುಲ್ಲಿವಾನ್ ಅವರ ಭೇಟಿಯ ಬಗ್ಗೆ ಚರ್ಚಿಸಲಾಗಿದೆ.ಸುಮಾರು 650 ಮಿಲಿಯನ್ ಜನರು ಮತದಾನ ಮಾಡಲು ಮತಗಟ್ಟೆಗೆ ಹೋಗುವುದರೊಂದಿಗೆ, ಚುನಾವಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತದ ಜನತೆಯನ್ನು ಬಿಡೆನ್ ಇದೆ ಸಂದರ್ಭದಲ್ಲಿ ಶ್ಲಾಘಿಸಿದರು ಎನ್ನಲಾಗಿದೆ.
ಉಭಯ ನಾಯಕರು ಯುಎಸ್-ಭಾರತ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸಲು ಮತ್ತು ಮುಕ್ತ ಮತ್ತು ಸಮದ್ಧ ಇಂಡೋ-ಪೆಸಿಫಿಕ್ ಪ್ರದೇಶದ ತಮ ಹಂಚಿಕೆಯ ದಷ್ಟಿಯನ್ನು ಮುನ್ನಡೆಸಲು ತಮ ಬದ್ಧತೆಯನ್ನು ಒತ್ತಿ ಹೇಳಿದರು ಎನ್ನಲಾಗಿದೆ.
ವಿಶ್ವಾಸಾರ್ಹ, ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಸೇರಿದಂತೆ ಹಂಚಿಕೆಯ ಅಮೆರಿಕ-ಭಾರತದ ಆದ್ಯತೆಗಳಲ್ಲಿ ಹೊಸ ಸರ್ಕಾರವನ್ನು ತೊಡಗಿಸಿಕೊಳ್ಳಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರ ಮುಂಬರುವ ಹೊಸ ದೆಹಲಿ ಪ್ರಯಾಣದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು ಎಂದು ಶ್ವೇತಭವನ ತಿಳಿಸಿದೆ.
ಬಿಡೆನ್ ಅವರ ಅಭಿನಂದನಾ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ನನ್ನ ಸ್ನೇಹಿತರಿಂದ ಕರೆ ಸ್ವೀಕರಿಸಲು ನನಗೆ ಸಂತೋಷವಾಗಿದೆ. ಅವರ ಅಭಿನಂದನೆಯ ಮಾತುಗಳು ಮತ್ತು ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಅವರ ಮೆಚ್ಚುಗೆಯನ್ನು ಆಳವಾಗಿ ಗೌರವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಭಾರತ-ಯುಎಸ್ ಸಮಗ್ರ ಜಾಗತಿಕ ಸಹಭಾಗಿತ್ವವು ಮುಂಬರುವ ವರ್ಷಗಳಲ್ಲಿ ಅನೇಕ ಹೊಸ ಹೆಗ್ಗುರುತುಗಳಿಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿದರು. ನಮ ಪಾಲುದಾರಿಕೆಯು ಮಾನವೀಯತೆಯ ಪ್ರಯೋಜನಕ್ಕಾಗಿ ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಮುಂದುವರಿಯುತ್ತದೆ ಎಂದು ಮೋದಿ ಎಕ್‌್ಸನಲ್ಲಿ ಬರೆದಿದ್ದಾರೆ.