Wednesday, April 30, 2025
Homeಅಂತಾರಾಷ್ಟ್ರೀಯ | Internationalಸಂಘರ್ಷ ಹೆಚ್ಚಿಸದಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ಅಮೆರಿಕ ಕರೆ

ಸಂಘರ್ಷ ಹೆಚ್ಚಿಸದಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ಅಮೆರಿಕ ಕರೆ

US urges India, Pakistan to avoid escalation amid rising tensions after Pahalgam terror attack

ನ್ಯೂಯಾರ್ಕ್, ಏ.30-ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಂಘರ್ಷವನ್ನು ಹೆಚ್ಚಿಸದಂತೆ ಅಮೆರಿಕ ಎರಡೂ ದೇಶಗಳಿಗೆ ಕರೆ ನೀಡಿದೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಇಂದು ಅಥವಾ ನಾಳೆ ಬೇಗನೆ ಎರಡೂ ದೇಶಗಳ ವಿದೇಶಾಂಗ ಮಂತ್ರಿಗಳೊಂದಿಗೆ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್, ಕಾಶ್ಮೀರ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ವೈಮನಸ್ಯ ಉಂಟಾಗಿದ್ದು ಸದ್ಯ ಪರಿಸ್ಥಿತಿಯನ್ನು ಉಲ್ಬಣಗೊಳಿಸಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಇಂದು ಅಥವಾ ನಾಳೆ ಬೇಗನೆ ಪಾಕಿಸ್ತಾನ ಮತ್ತು ಭಾರತದ ವಿದೇಶಾಂಗ ಮಂತ್ರಿಗಳೊಂದಿಗೆ ಮಾತನಾಡುವ ನಿರೀಕ್ಷೆಯಿದೆ ಎಂದು ಬ್ರೂಸ್ ಹೇಳಿದರು.

ಅಧ್ಯಕ್ಷ ಟ್ರಂಪ್‌ ಅವರ ನಾಯಕತ್ವದ ಮೇಲೆ ಅವರು ಹೊಂದಿರುವ ಪ್ರಭಾವವನ್ನು ನಾವು ಖಂಡಿತವಾಗಿಯೂ ನಿರೀಕ್ಷಿಸುತ್ತೇವೆ, ಭಾರತ ಮತ್ತು ಪಾಕಿಸ್ತಾನದ ಜೊತೆ ಸಂಭಾಷಣೆಗಳನ್ನು ನಡೆಸುತ್ತಿವೆ. ಇದು ಅವರಿಗೆ ಬಹಳ ಮುಖ್ಯವಾಗಿದೆ. ಎಂದು ಬ್ರೂಸ್ ಹೇಳಿದರು.

RELATED ARTICLES

Latest News