ನ್ಯೂಯಾರ್ಕ್, ಫೆ. 7 (ಪಿಟಿಐ) ಮುಂಬರುವ ಆರ್ಥಿಕ ವರ್ಷದಲ್ಲಿ ಭಾರತೀಯ ಐಟಿ ವತ್ತಿಪರರು ಹೆಚ್ಚು ಬೇಡಿಕೆಯಿರುವ ಎಚ್-1ಬಿ ವೀಸಾಗಳ ಆರಂಭಿಕ ನೋಂದಣಿ ಅವಧಿಯು ಮಾರ್ಚ್ 7 ರಂದು ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 24 ರಂದು ಮುಕ್ತಾಯಗೊಳ್ಳುತ್ತದೆ ಎಂದು ಫೆಡರಲ್ ಏಜೆನ್ಸಿ ತಿಳಿಸಿದೆ.
ಎಚ್-1ಬಿ ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಯುಎಸ್ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.
2026 ರ ಹಣಕಾಸು ವರ್ಷದಲ್ಲಿ ವಿದೇಶಿ ಅತಿಥಿ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆಯಿರುವ ಎಚ್-1ಬಿ ವೀಸಾಗಳ ಆರಂಭಿಕ ನೋಂದಣಿ ಅವಧಿಯು ಮಾರ್ಚ್ 7 ರಂದು ಪೂರ್ವದ ಸಮಯ ಮಧ್ಯಾಹ್ನ ತೆರೆದುಕೊಳ್ಳುತ್ತದೆ ಮತ್ತು ಮಾರ್ಚ್ 24 ರಂದು ಮಧ್ಯಾಹ್ನ ಪೂರ್ವ ಸಮಯದವರೆಗೆ ನಡೆಯುತ್ತದೆ ಎಂದು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ತಿಳಿಸಿದೆ.
ಈ ಅವಧಿಯಲ್ಲಿ, ನಿರೀಕ್ಷಿತ ಅರ್ಜಿದಾರರು ಮತ್ತು ಪ್ರತಿನಿಧಿಗಳು ಪ್ರತಿ ಫಲಾನುಭವಿಯನ್ನು ಆಯ್ಕೆ ಪ್ರಕ್ರಿಯೆಗಾಗಿ ವಿದ್ಯುನಾನವಾಗಿ ನೋಂದಾಯಿಸಲು ಯುಎಸ್‌ಸಿಐಎಸ್ ಆನ್‌ಲೈನ್ ಖಾತೆಯನ್ನು ಬಳಸಬೇಕು ಮತ್ತು ಪ್ರತಿ ಫಲಾನುಭವಿಗೆ ಸಂಬಂಧಿಸಿದ ನೋಂದಣಿ ಶುಲ್ಕವನ್ನು ಪಾವತಿಸಬೇಕು ಎಂದು ಅದು ಹೇಳಿದೆ. ನೋಂದಣಿ ಶುಲ್ಕ 215 ಡಾಲರ್ ಆಗಿದೆ.
ಎಚ್-1ಬಿ ವೀಸಾಗಳ ಮುಖ್ಯ ಫಲಾನುಭವಿಗಳು ಭಾರತೀಯರು, ಇದು ಪ್ರಪಂಚದಾದ್ಯಂತದ ಅತ್ಯುತ್ತಮ ಪ್ರತಿಭೆ ಮತ್ತು ಮಿದುಳುಗಳನ್ನು ತರುತ್ತದೆ. ಭಾರತದಿಂದ ಹೆಚ್ಚು ನುರಿತ ವತ್ತಿಪರರು ಈ ವೀಸಾಗಳೊಂದಿಗೆ ಅಮೆರಿಕಕಕ್ಕೆ ತೆರಳುತ್ತಾರೆ.