Sunday, September 7, 2025
Homeಆರೋಗ್ಯ / ಜೀವನಶೈಲಿಅನಾರೋಗ್ಯಕ್ಕೆ ದಾರಿಮಾಡಿಕೊಡಲಿದೆ ಶೌಚಾಲಯದಲ್ಲಿ ಮೊಬೈಲ್‌ ಬಳಕೆ

ಅನಾರೋಗ್ಯಕ್ಕೆ ದಾರಿಮಾಡಿಕೊಡಲಿದೆ ಶೌಚಾಲಯದಲ್ಲಿ ಮೊಬೈಲ್‌ ಬಳಕೆ

Using a mobile phone in the toilet can lead to illness

ಸಂಪರ್ಕ ಕ್ರಾಂತಿಯಿಂದಾಗಿ ಹಳ್ಳಿ, ಪಟ್ಟಣ, ನಗರ, ಹೊಲ, ಗದ್ದೆ, ತೋಟ ಎಂಬ ಯಾವ ವ್ಯತ್ಯಾಸವೂ ಇಲ್ಲದೆ, ಬಹಳಷ್ಟು ಅನುಕೂಲಗಳಾಗಿವೆ. ಇದರಿಂದ ಮಾನವನ ದೈನಂದಿನ ಕೆಲಸ ಕಾರ್ಯಗಳು ಸುಗಮ, ಸುಲಲಿತ, ಸರಳ, ತ್ವರಿತವಾಗಿ ನಡೆಯುತ್ತವೆ. ಜೀವನಕ್ರಮದ ಕಾರ್ಯವೈಖರಿಯೇ ಬದಲಾಗಿ ಹೊಸ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಮೊಬೈಲ್‌!

ಸಾರ್ಟ್‌ ಪೋನ್‌ ಬಳಕೆ ಆರಂಭವಾದ ಮೇಲೆ ಜೀವನದ ಅವಿಭಾಜ್ಯ ಅಂಗ ಎಂಬಷ್ಟರ ಮಟ್ಟಿಗೆ ಅದು ಅನಿವಾರ್ಯವೆನಿಸಿದೆ. ಆದರೆ, ಅತಿಯಾದ ಬಳಕೆ ಅನುಕೂಲದ ಜತೆಗೆ ಅನಾನುಕೂಲ ಉಂಟು ಮಾಡುವುದಷ್ಟೇ ಅಲ್ಲ; ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶೌಚಾಲಯದಲ್ಲಿ ಸಾರ್ಟ್‌ ಪೋನ್‌ ಬಳಕೆ ಮಾಡುವುದರಿಂದ ಮೂಲವ್ಯಾಧಿ, ಕರುಳು ಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂಬುದು ತಜ್ಞ ವೈದ್ಯರ ಅಭಿಮತ.

ಸಾರ್ಟ್‌ಪೋನ್‌ ಬಳಕೆ ಬಹಳಷ್ಟು ಮಂದಿಗೆ ಅತಿಯಾದ ಅಭ್ಯಾಸವಷ್ಟೇ ಅಲ್ಲ; ದುರಭ್ಯಾಸವೂ ಆಗಿದೆ. ಅದರಿಂದ ಹೊರಬರಲಾರದೇ ಪರಿತಪಿಸುತ್ತಿರುವುದು ಉಂಟು. ಎಷ್ಟರಮಟ್ಟಿಗೆ ಸಾರ್ಟ್‌ಪೋನ್‌ ಬಳಕೆಯಾಗುತ್ತಿದೆ ಎಂದರೆ, ಮಕ್ಕಳಿಗೆ ಊಟ, ತಿಂಡಿ ತಿನ್ನಿಸುವುದರಿಂದ ಹಿಡಿದು, ಸಂದೇಶ ರವಾನೆ, ಗೇಮ್‌, ಬ್ಯುಸಿನೆಸ್‌‍, ಫೋಟೋ, ವಿಡಿಯೋ, ಡಿಜಿಟಲ್‌ ವ್ಯವಹಾರದವರೆಗೂ ಹಲವು ರೀತಿಯ ಕಾರ್ಯವನ್ನು ಮಾಡಲಾಗುತ್ತದೆ. ಅಂದರೆ, ಅಂಗೈನಲ್ಲಿರುವ ಸಾರ್ಟ್‌ಪೋನ್‌ನಿಂದ ನಿರೀಕ್ಷೆಗೂ ಮೀರಿದ ಸೇವೆ ಪಡೆಯಬಹುದು.

ಇದು ಇತಿಮಿತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಇದ್ದರೆ ತೊಂದರೆ ಇಲ್ಲ. ಮಿತಿ ಮೀರಿದರೆ, ದೀರ್ಘಾವಧಿ ಬಳಕೆ ಮಾಡಿದರೆ, ನಿರಂತರವಾಗಿ ಹೊರಸೂಸುವ ಕಾಂತೀಯ ತರಂಗಗಳಿಂದ ಅಡ್ಡ ಪರಿಣಾಮ ಉಂಟಾಗುತ್ತದೆ. ದೈಹಿಕವಾಗಿಯೂ ಸಮಸ್ಯೆ ಎದುರಿಸಬೇಕಾಗಬಹುದು. ಸಾರ್ಟ್‌ ಪೋನ್‌ಗಳನ್ನು ಕೆಲವರು ವಂಚನೆ, ಬ್ಲಾಕ್‌ಮೇಲ್‌ನಂತಹ ದುರ್ಬಳಕೆಗೂ ಬಳಸಿಕೊಂಡಿರುವ ಸಾಧ್ಯತೆಗಳು ಇಲ್ಲದಿಲ್ಲ.

ಸಾರ್ಟ್‌ಬಳಕೆ ನಿತ್ಯವೂ ಮನೆ, ಕಚೇರಿ, ಪಾರ್ಕ್‌, ಬಸ್‌‍, ಕಾರು ಹೀಗೆ ಎಲ್ಲಾ ಸ್ಥಳಗಳಲ್ಲೂ ಬಳಕೆಯಾಗುತ್ತದೆ. ಆದರೆ, ಶೌಚಾಲಯದಲ್ಲೂ ಬಳಸುವ ಕೆಟ್ಟ ಅಭ್ಯಾಸವೂ ಕೆಲವರಿಗೆ ಇರಬಹುದು. ಈ ರೀತಿ ಬಳಕೆಯಿಂದ ಉಪಯೋಗಕ್ಕಿಂತ ಮಾರಕ ಪರಿಣಾಮವೇ ಹೆಚ್ಚು. ಹೇಳಿ ಕೇಳಿ ಶೌಚಾಲಯವು ಬ್ಯಾಕ್ಟೀರಿಯಾಗಳ ಆಗರ. ಶೌಚಾಲಯದಲ್ಲಿ ಕುಳಿತು ಹೆಚ್ಚು ಕಾಲ ಗೇಮ್‌ ಆಡುವುದೋ, ವಿಡಿಯೋ ನೋಡುವುದೋ, ಇಲ್ಲವೇ ಇನ್ಯಾವುದೋ ಚಟುವಟಿಕೆಯಲ್ಲಿ ತೊಡಗುವುದು ಒಳ್ಳೆಯದಲ್ಲ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ.

ದೀರ್ಘಕಾಲ ಒಂದೆಡೆ ಕುಳಿತೋ, ನಿಂತೋ ಸಾರ್ಟ್‌ಪೋನ್‌ ಬಳಸುವುದರಿಂದ ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಶೌಚಾಲಯದಲ್ಲಿ ಹೆಚ್ಚು ಕಾಲ ಕುಳಿತು ಪೋನ್‌ ಬಳಕೆ ಮಾಡುವುದರಿಂದ ಮೂಲವ್ಯಾಧಿ, ಕರುಳು ಸಂಬಂಧಿತ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಸಂಧಿವಾತ, ಭುಜ, ಬೆನ್ನು ಹಾಗೂ ಕುತ್ತಿಗೆ ನೋವುಗಳು ಉಂಟಾಗಲು ಕಾರಣವಾಗುತ್ತದೆ ಎಂಬುದನ್ನು ಅಧ್ಯಯನಗಳ ಮೂಲಕ ಪತ್ತೆ ಹಚ್ಚಲಾಗಿದೆ.

ಹದಿಹರೆಯದ ಯುವ ಸಮುದಾಯ ತಂದೆ, ತಾಯಿ, ಪೋಷಕರ ಯಾವ ಕಿವಿ ಮಾತನ್ನೂ ಕೇಳದಷ್ಟರ ಮಟ್ಟಿಗೆ ಮೊಬೈಲ್‌ ಜಾಡ್ಯಕ್ಕೆ ಅಂಟಿಕೊಂಡು ಅದರ ಲೋಕದಲ್ಲೇ ನಿರತರಾಗಿರುತ್ತಾರೆ. ಇದು ಬಹುತೇಕರ ಮನೆಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಬಹಳಷ್ಟು ಮಂದಿ ಆನ್‌ಲೈನ್‌ಗೇಮ್‌ಗಳ ದಾಸರಾಗಿದ್ದಾರೆ. ಇಂಥವರಿಗೆ ಸಮಯದ ಪರಿಜ್ಞಾನವೇ ಇರುವುದಿಲ್ಲ. ಹಗಲಿರುಳು ಎನ್ನದೇ ಪೋನಿನಲ್ಲಿ ಮಗ್ನರಾಗಿರುತ್ತಾರೆ. ದೈಹಿಕ ಹಾಗೂ ಆರೋಗ್ಯದ ಮೇಲೆ ಉಂಟಾಗುವ ಮಾರಕ ಪರಿಣಾಮದ ಅರಿವೇ ಇರುವುದಿಲ್ಲ. ಇದರಿಂದ ದೈಹಿಕ ಚಟುವಟಿಕೆ ಇಲ್ಲದಂತಾಗಿ ಶಾರೀರಿಕ ಸಮಸ್ಯೆ, ಮಾನಸಿಕ ಸಮಸ್ಯೆಗಳಿಗೂ ಆಹ್ವಾನ ಕಲ್ಪಿಸಿದಂತಾಗುವುದು.

ಶೌಚಾಲಯದಲ್ಲಿ ಸಾರ್ಟ್‌ಫೋನ್‌ಗಳ ಬಳಕೆಯ ಕೆಟ್ಟ ಅಭ್ಯಾಸವು ಮಾನಸಿಕ ಮತ್ತು ದೈಹಿಕ ಚಲನೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹೆಚ್ಚು ಕಾಲ ಕುಳಿತುಕೊಳ್ಳುವಿಕೆ ಮತ್ತು ರಕ್ತ ಪರಿಚಲನೆಗೆ ಅಡ್ಡಿಯಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕರುಳಿನ ಸ್ವಾಭಾವಿಕ ಪ್ರಕ್ರಿಯೆಗೆ ಅಡ್ಡಿಯಾಗಿ ಮಲಬದ್ಧತೆಗೂ ಎಡೆಮಾಡಿಕೊಡಬಹುದು.
ಫೋನ್‌ ಬಳಸುವಾಗ ಮುಖದ ಬಳಿ ತರುತ್ತೇವೆ, ಕೈಯಿಂದ ಮುಟ್ಟುತ್ತೇವೆ, ಕಿವಿಯಲ್ಲಿ ಇರಿಸಿಕೊಳ್ಳುತ್ತವೆ. ಪೋನಿನಲ್ಲಿ ಬ್ಯಾಕ್ಟೀರಿಯಾಅಥವಾ ಸೋಂಕು ಅಂಟಿದ್ದರೆ, ನಮಗೆ ಅರಿವಿಲ್ಲದಂತೆ ನೇರವಾಗಿ ನಮ ದೇಹದ ಸಂಪರ್ಕಕ್ಕೆ ಬರುತ್ತವೆ. ಅಲ್ಲದೆ, ವೈಯಕ್ತಿಕ ಆರೋಗ್ಯ, ಸ್ವಚ್ಛತೆಗೆ ಅಪಾಯವಾಗಬಹುದು.

ಕೆಲವು ವರ್ಷಗಳಿಂದ ನಡೆದಿರುವ ಹಲವು ಅಧ್ಯಯನಗಳು ಆರೋಗ್ಯದ ವೇಲೆ ಮಿತಿ ಮೀರಿದ ಸಾರ್ಟ್‌ಫೋನ್‌ನ ಹಾನಿಕಾರಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ಸಂದೇಶ ನೀಡಿವೆ. ಅತಿಯಾದ ಮೊಬೈಲ್‌ ಫೋನ್‌ ಬಳಕೆಯು ನಿದ್ದೆ, ಸರಣ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಕುತ್ತಿಗೆಯನ್ನು ಮುಂದೆ ಚಾಚಿಕೊಂಡೇ ಕುಳಿತುಕೊಂಡಿರುವ ಭಂಗಿಯು ಗರ್ಭಕಂಠ ಹಾಗೂ ಸೊಂಟದ ಸುತ್ತಲಿನ ಬೆನ್ನುಮೂಳೆಯ ನೋವಿಗೆ ಕಾರಣವಾಗಬಹುದು. ಈ ಎಲ್ಲಾ ಕಾರಣಗಳಿಂದಾಗಿ ಮಕ್ಕಳು, ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಅತಿ ಬಳಕೆ ತಪ್ಪಿಸಿ ಎಂಬ ಜಾಗೃತಿ ಮೂಡಿಸುವ ಅನಿವಾರ್ಯ ಇದೆ.

RELATED ARTICLES

Latest News