ಬಲಿಯಾ, ಅ. 4 (ಪಿಟಿಐ) ಸಾಮಾಜಿಕ ಮಾಧ್ಯಮದಲ್ಲಿ ಲಾರ್ಡ್ ಶಿವನ ಆಕ್ಷೇಪಾರ್ಹ ಚಿತ್ರ ಪ್ರಸಾರ ಮಾಡಿದ ವ್ಯಕ್ತಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.ಬಲಿಯಾ ಜಿಲ್ಲೆಯ ಪಕಾಡಿ ಪ್ರದೇಶದ ಮೇಯುಲಿ ಗ್ರಾಮದ ನಿವಾಸಿ ಸಂದೀಪ್ ಗೌತಮ್ ಅಲಿಯಾಸ್ ರಂಜನ್ ಬಂಧಿತ ಆರೋಪಿಯಾಗಿದ್ದಾನೆ.
ಈತ ಹಿಂದೂಗಳ ಪರಮ ದೈವವಾದ ಶಿವನ ಆಕ್ಷೇಪಾರ್ಹ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ.ಈ ಕುರಿತಂತೆ ಸ್‌ಬ್-ಇನ್‌ಸ್ಪೆಕ್ಟರ್ ಮುಖೇಶ್ ಯಾದವ್ ಅವರ ದೂರಿನ ಆಧಾರದ ಮೇಲೆ, ಗೌತಮ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 353 (2) (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.