ಹರ್ದೋಯ್,ಅ.19- ಕಳೆದ ರಾತ್ರಿ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಬೇಗಮ್ಗಂಜ್ ಫ್ಲೈಓವರ್ ಮೇಲೆ ಟ್ರಕ್ವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ 3 ಮಕ್ಕಳು ಸಾವನ್ನಪ್ಪಿದ್ದಾರೆ. ಕರಣ್,ಕಾಜಲ್ (10) ಮತ್ತು ಅಂಶಿಕಾ (11) ಮೃತ ದುದೈವಿಗಳು.
ಉನ್ನಾವ್ ಜಿಲ್ಲೆಯ ಪ್ರದೀಪ್ ಕುಮಾರ್ ತಮ ಪತ್ನಿ ಜಿತೆ ತರಳುತ್ತಿದ್ದರೆ, ಹಾರ್ದೋಯ್ನ ಪಲ್ಹರೈ ಗ್ರಾಮದ ನಿವಾಸಿ ಅವರ ಅವರ ಸೋದರಳಿಯ ಕರಣ್ ಅವರು ಪ್ರದೀಪ್ ಅವರ ಪುತ್ರಿಯರಾದ ಕಾಜಲ್ ಮತ್ತು ಅಂಶಿಕಾ ಅವರೊಂದಿಗೆ ಮತ್ತೊಂದು ಬೈಕ್ನಲ್ಲಿ ಬರುತ್ತಿದ್ದರು.
ಬೇಗಮ್ಗಂಜ್ ಫ್ಲೈಓವರ್ ಬಳಿ, ವಿರುದ್ಧ ದಿಕ್ಕಿನಿಂದ ಬಂದ ಟ್ರಕ್ ಕರಣ್ ಅವರ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಿದೆ ಈ ವೇಳೆ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ಹತ್ತಿರದ ಸಂದಿಲಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಆದರೆ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಟ್ರಕ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಮತ್ತು ತನಿಖೆ ನಡೆಯುಯ್ತಿದೆ ಎಂದು ಅವರು ತಿಳಿಸಿದ್ದಾರೆ.