ಫಿರೋಜಾಬಾದ್ (ಯುಪಿ), ಅ.13 – ಸುಮಾರು 50 ವರ್ಷದ ಹಿಂದೆ ದಾಖಲಾದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯವು 80 ವರ್ಷದ ಜೀವಾವಧಿ ಶಿಕ್ಷೆ ವಿಧಿಸಿದ ಘಟನೆ ಇಲ್ಲಿ ನಡೆದಿದೆ.ಅಪರಾಧಿ ಮಹೇಂದ್ರ ಸಿಂಗ್‍ಗೆ ಜೈಲು ಶಿಕ್ಷೆ ಜೊತೆಗೆ 20,000 ರೂಪಾಯಿ ದಂಡವನ್ನೂ ವಿಧಿಸಿದೆ.
ಸೆಪ್ಟೆಂಬರ್ 14, 1974 ರಂದು ನಾರ್ಖಿ ಗ್ರಾಮದಲ್ಲಿ ತಾಯಿ ಮೀರಾ ದೇವಿಉನ್ನು ಮಗ ಮಹೇಂದ್ರ ಸಿಂಗ್ ಗುಂಡಿಕ್ಕಿ ಕೊಂದಿದ್ದ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆಗ ಆತ ಅಲ್ಲಿಂದ ಪರಾರರಿಯಾಗಿದ್ದ ಇತ್ತೀಚೆಗೆ ಗ್ರಮಕ್ಕೆ ಬಂದಿದ್ದಾಗ ಕೆಲವರು ಆತನನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನೆಯ ನಡೆಸಾಗ ನಾರ್ಖಿಗ್ರಾಮ ಆಗ್ರಾ ಜಿಲ್ಲೆಯ ಭಾಗವಾಗಿತ್ತು.ಈಗ ಅದು ಫಿರೋಜಾಬಾದ್ ಜಿಲ್ಲೆ ವ್ಯಪ್ತಿಗೆ ಸೇರಿದೆ. ಪೊಲೀಸರು ಘಟನೆಯ ಪೈಲ್, ದಾಖಲೆ ಮತ್ತೆ ನೋಡಿ ಮಹೇಂದ್ರ ಸಿಂಗ್‍ನನ್ನು ಬಂಪೊಸಿದ್ದರು ಆಗ ಆತನಿಗೆ 79 ವರ್ಷ.
ಯುಎಇ ಆಭರಣ, ರತ್ನಗಳು ಆಮದಿನಲ್ಲಿ ಶೇ.30 ರಷ್ಟು ಭಾರತ ಪಾಲು
ಪೊಲೀಸರೆ ಅಚ್ಚರಿಗೊಂಡು ಕಾನೂನು ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾೀಧಿಶ ಜಿತೇಂದ್ರ ಗುಪ್ತಾ ಅವರು ಅಪರಾಧ ಸಾಭೀತಾದ ಕಾರಣ ಮಹೇಂದ್ರಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಮತ್ತು ದಂಡವನ್ನು ಪಾವತಿಸದಿದ್ದಲ್ಲಿ, ಅಪರಾಧಿ ಹೆಚ್ಚುವರಿ ವರ್ಷ ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ಆದೇಶಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ನಾರಾಯಣ್ ಸಕ್ಸೇನಾ ಮಾತನಾಡಿ ಕಾನೂನಿಗೆ ಎಲ್ಲಾ ಸಮಾನರು ಎಂದು ಹೇಳಿದ್ದಾರೆ.