ಅಯೋಧ್ಯೆ, ಮಾ. 21: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಅಯೋಧ್ಯೆಯ ಹನುಮಾನ್ ಗರ್ಹಿ ದೇವಾಲಯ ಮತ್ತು ರಾಮ ಮಂದಿರದಲ್ಲಿ ವೈದಿಕ ಸ್ತೋತ್ರಗಳ ಪಠಣದ ನಡುವೆ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದ ಅರ್ಚಕರು ರಾಮ ಮಂದಿರದಲ್ಲಿ ತಿಲಕ ಹಚ್ಚುವ ಮೂಲಕ ಮತ್ತು ಶಾಲು ನೀಡುವ ಮೂಲಕ ಮುಖ್ಯಮಂತ್ರಿಯನ್ನು ಸ್ವಾಗತಿಸಿದರು ಎಂದು ದೇವಾಲಯಗಳ ಆಡಳಿವ ಮಂಡಳಿ ತಿಳಿಸಿವೆ.
ಆದಿತ್ಯನಾಥ್ ನಿನ್ನೆ ಬಲರಾಂಪುರಕ್ಕೆ ಭೇಟಿ ನೀಡಿ ಚೈತ್ರ ನವರಾತ್ರಿ ಜಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಅವರು ಇಂದು ಬೆಳಿಗ್ಗೆ ತುಳಸಿಪುರದ ದೇವಿ ಶಕ್ತಿಪೀಠ ಮಾ ಪಟೇಶ್ವರಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು ಎಂದು ವರದಿಯಾಗಿದೆ.