Sunday, July 7, 2024
Homeರಾಷ್ಟ್ರೀಯ"ಪಕ್ಕದ ಮನೆಯವರು ನಮ್ಮ ನಾಯಿ ಕದ್ದಿದ್ದಾರೆ" ಎಂದು ನ್ಯಾಯಾಧೀಶರಿಂದ ಪೊಲೀಸರಿಗೆ ದೂರು

“ಪಕ್ಕದ ಮನೆಯವರು ನಮ್ಮ ನಾಯಿ ಕದ್ದಿದ್ದಾರೆ” ಎಂದು ನ್ಯಾಯಾಧೀಶರಿಂದ ಪೊಲೀಸರಿಗೆ ದೂರು

ಲಖ್ನೋ,ಮೇ24- ತಮ್ಮ ಮನೆಯ ಸಾಕಿದ ನಾಯಿಯನ್ನು ಪಕ್ಕದ ಮನೆಯವರು ಕದ್ದಿದ್ದಾರೆ ಎಂದು ಆರೋಪಿಸಿ, ಉತ್ತರಪ್ರದೇಶದ ಬರೇಲಿ ಮೂಲದ ಸಿವಿಲ್‌ ನ್ಯಾಯಾಧೀಶರೊಬ್ಬರು ಪೊಲೀಸ್‌‍ ಠಾಣೆಗೆ ದೂರು ನೀಡಿರುವ ಪ್ರಸಂಗ ನಡೆದಿದೆ.

ನ್ಯಾಯಾಧೀಶರು ನೀಡಿದ ದೂರಿನ ಮೇರೆಗೆ ಪ್ರಾಣಿ ಹಿಂಸೆ ಕಾಯ್ದೆಯಡಿ ಪೊಲೀಸರು, ಎರಡು ಡಜನ್‌ಗೂ ಹೆಚ್ಚು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ .ತಮ ನೆರೆಮನೆಯ ಡಂಪಿ ಅಹದ್‌ ಎಂಬುವರು ನಮ್ಮ ನಾಯಿಯನ್ನು ಕದ್ದಿದ್ದಾರೆ.

ನ್ಯಾಯಾಧೀಶರ ಕುಟುಂಬವು ಬರೇಲಿಯ ಸನ್‌ಸಿಟಿ ಕಾಲೋನಿಯಲ್ಲಿ ನೆಲೆಸಿದೆ. ಕೆಲವು ದಿನಗಳ ಹಿಂದೆ ನ್ಯಾಯಾಧೀಶರ ಕುಟುಂಬ ಮತ್ತು ಅಹದ್‌ ಅವರ ಕುಟುಂಬವು ಜಗಳವಾಡಿತ್ತು. ಪ್ರಸ್ತುತ ನ್ಯಾಯಾಧೀಶರನ್ನು ಹಾರ್ಡೋಯ್‌ನಲ್ಲಿ ನಿಯೋಜಿಸಲಾಗಿದೆ.

ಮೇ 16ರ ರಾತ್ರಿ, ಅಹದ್‌ ಅವರ ಪತ್ನಿ ನ್ಯಾಯಾಧೀಶರ ನಿವಾಸಕ್ಕೆ ಹೋಗಿ ಮಾತುಕತೆ ನಡೆಸುವಂತೆ ಒತ್ತಾಯಿಸಿದ್ದರು. ನ್ಯಾಯಾಧೀಶರ ಸಾಕು ನಾಯಿ ಮಹಿಳೆ ಸೇರಿದಂತೆ ಆಕೆಯ ಮಗಳ ಮೇಲೆ ದಾಳಿ ಮಾಡಿದ್ದರಿಂದ ಕೋಪಗೊಂಡಿದ್ದಳು. ಈ ವಿಚಾರವಾಗಿ ನ್ಯಾಯಾಧೀಶರ ಕುಟುಂಬದವರು ಮತ್ತು ಮಹಿಳೆಯ ನಡುವೆ ಸುದೀರ್ಘ ವಾಗ್ವಾದ ನಡೆದಿದೆ.

ಇದೇ ಕಾಲೋನಿಯಲ್ಲಿ ವಾಸಿಸುವ ಅಹದ್‌ ಅವರ ಮಗ ಖಾದಿರ್‌ ಖಾನ್‌ ಅವರನ್ನು ಕೊಲ್ಲುವುದಾಗಿ ನ್ಯಾಯಾಧೀಶರ ಕುಟುಂಬದವರು ಬೆದರಿಕೆ ಹಾಕಿದ್ದರು. ಈ ನಡುವೆ ನ್ಯಾಯಾಧೀಶರು ಸಾಕಿದ ನಾಯಿ ನಾಪತ್ತೆಯಾಗಿದೆ. ನೆರೆಯ ಮನೆಯ ಅಹದ್‌ನೇ ತಮ ನಾಯಿ ಕದ್ದಿರುವುದಾಗಿ ಶಂಕಿಸಿ ಪೊಲೀಸರಿಗೆ ಫೋನ್‌ ಕರೆ ಮಾಡಿ ದೂರು ನೀಡಿದ್ದಾರೆ.

ಘಟನೆಯ ಬಗ್ಗೆ ತಿಳಿದ ನಂತರ, ನ್ಯಾಯಾಧೀಶರು ತಕ್ಷಣ ಲಕ್ನೋದಿಂದ ಬರೇಲಿ ಪೊಲೀಸರಿಗೆ ಕರೆ ಮಾಡಿ, ಫೋನ್‌ ಮೂಲಕ ಇಡೀ ಘಟನೆಯ ಬಗ್ಗೆ ವಿವರಿಸಿದ್ದಾ. ಈ ಬಗ್ಗೆ ದೂರು ಕೂಡ ದಾಖಲಿಸಿದ್ದರು.

ಪ್ರದೇಶ ಅಧಿಕಾರಿ ಅನಿತಾ ಚೌಹಾಣ್‌ ಅವರ ಸೂಚನೆಯಂತೆ ಕಾನೂನು ಕ್ರಮ ಕೈಗೊಂಡ ಪೊಲೀಸರು ನ್ಯಾಯಾಧೀಶರ ನಾಯಿಗಾಗಿ ಹುಡುಕಾಟ ಆರಂಭಿಸಿದ್ದಾರೆ.ಈ ಘಟನೆಯ ಬಗ್ಗೆ ಮಾಧ್ಯಮದ ಮುಂದೆ ಯಾವುದೇ ಪ್ರತಿಕ್ರಿಯೆ ನೀಡಲು ನ್ಯಾಯಾಧೀಶರ ಕುಟುಂಬ ನಿರಾಕರಿಸಿದೆ.

RELATED ARTICLES

Latest News