ಫಿರೋಜಾಬಾದ್ (ಉತ್ತರ ಪ್ರದೇಶ), ಜೂ.22– ತನ್ನ ಅತ್ತಿಗೆಯ ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿದ್ದ ಆರೋಪಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಫಿರೋಜಾಬಾದ್ ದಕ್ಷಿಣ ಪ್ರದೇಶದ ಹುಮಾಯೂನ್‌ಪುರದ ಶಿವಂ ಅಲಿಯಾಸ್ ತನು (32) ಶನಿವಾರ ರಾತ್ರಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ನಡೆದ ಸಮಯದಲ್ಲಿ ಅವನು ಒಬ್ಬಂಟಿಯಾಗಿದ್ದನು ಹೇಳಲಾಗಿದೆ.
ಕಾನ್ಸುರ್ ದೇಹತ್ ಜಿಲ್ಲೆಯ ಅಕ್ಟರ್‌ಪುರ ಪ್ರದೇಶದ ನಿವಾಸಿಯಾದ ಆರೋಪಿ, ಅತ್ತಿಗೆಯಿಂದ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಆರೋಪಕ್ಕಾಗಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೂನ್ 17 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅನಂತರ ಆತ ಖಿನ್ನತೆಗೆ ಒಳಗಾಗಿದ್ದ.
ಹುಮಾಯೂನ್ ಪುರದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಯೋಗೇಂದ್ರ ಪಾಲ್ ಸಿಂಗ್ ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಆತ್ಮಹತ್ಯೆಯ ಬಗ್ಗೆ ತನಿಖೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
- ಸಿದ್ದರಾಮಯ್ಯನವರೇ, ಗಾಂಧಿ ಕುಟುಂಬ ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಆರ್ಎಸ್ಎಸ್ ಟೀಕಿಸಬೇಡಿ : ಆರ್.ಅಶೋಕ್
- ಪೊಲೀಸರಿಂದ ತಪ್ಪಿಸಿಕೊಂಡ ಬಾಂಗ್ಲಾದೇಶದ ಗರ್ಭಿಣಿ ಕೈದಿ
- ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವು ವಿಧಿಸಲು ಬರಲ್ಲ ; ಕೇಂದ್ರ ಸರ್ಕಾರ ಎಚ್ಚರಿಕೆ
- ಆರ್ಎಸ್ಎಸ್-ಬಿಜೆಪಿ ನಡುವೆ ಯಾವುದೇ ಒಡಕಿಲ್ಲ ; ರಾಮ್ ಮಾಧವ್
- ಬೆಂಗಳೂರಿನ ಟನಲ್ ರಸ್ತೆ ನಿರ್ಮಾಣಕ್ಕೆ ಮುಗಿಬಿದ್ದ ಪ್ರತಿಷ್ಠಿತ ಸಂಸ್ಥೆಗಳು