Thursday, January 9, 2025
Homeರಾಷ್ಟ್ರೀಯ | Nationalಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ

ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ

V. Narayanan appointed new Space Secretary and ISRO Chief

ನವದೆಹಲಿ,ಜ.8- ದೇಶದ ಪ್ರತಿಷ್ಠಿತ ಇಸ್ರೊ ಸಂಸ್ಥೆಯ ಅಧ್ಯಕ್ಷರಾಗಿ ಮುಂದೆ ಹಿರಿಯ ಗಗನಯಾನಿ ಮತ್ತು ಕ್ರಯೋಜನಿಕ್‌ ಇಂಜಿನ್‌ ತಜ್ಞ ವಿ.ನಾರಾಯಣನ್‌ ನೇಮಕವಾಗಿದ್ದಾರೆ.ಇಸ್ರೊದ ಹಾಲಿ ಅಧ್ಯಕ್ಷ ವಿ.ಸೋಮನಾಥ್‌ ಅವರು ಇದೇ 14 ರಂದು ಸೇವೆಯಿಂದ ನಿವೃತ್ತರಾಗಲಿದ್ದು, ತೆರವಾಗಲಿರುವ ಈ ಸ್ಥಾನಕ್ಕೆ ಹಿರಿಯ ವಿಜ್ಞಾನಿ ನಾರಾಯಣನ್‌ ಅವರನ್ನು ಕೇಂದ್ರಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ನೂತನ ಅಧ್ಯಕ್ಷರಾಗಲಿರುವ ವಿ.ನಾರಾಯಣನ್‌ ಅವರು ಪ್ರಸ್ತುತ ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೊದ ಎಲ್‌ಪಿಎಸ್‌‍ಸಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಹಿರಿತನದ ಆಧಾರದ ಮೇಲೆ ಅವರನ್ನು ಕೇಂದ್ರಸರ್ಕಾರ ನೇಮಕ ಮಾಡಿದೆ.

ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್‌ ಸೆಂಟರ್‌ನ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ನಾರಾಯಣನ್‌ ಮುಂದಿನ ಎರಡು ವರ್ಷಗಳ ಅವಧಿಗೆ ಇಸ್ರೋದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.

ಆದಿತ್ಯ ಬಾಹ್ಯಾಕಾಶ ನೌಕೆ ಮತ್ತು ಜಿಎಸ್‌‍ಎಲ್‌ವಿಎಂಕೆ -111 ಮಿಷನ್‌ನಂತಹ ಪ್ರಮುಖ ಯೋಜನೆಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.ಇವರ ಹಿರಿತನದ ಜೊತೆಗೆ ಪರಿಣತಿ ಮತ್ತು ಸಾಧನೆಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಹಲವಾರು ಪ್ರಶಸ್ತಿಗಳನ್ನು ನೀಡಿದೆ. ಭಾರತದ ಆಸ್ಟ್ರೋನಾಟಿಕಲ್‌ ಸೊಸೈಟಿಯಿಂದ ಶ್ರೀ ಪ್ರಶಸ್ತಿ ಮತ್ತು ಐಐಟಿ ಖರಗ್‌ಪುರದಿಂದ ಡಿಸ್ಟಿಂಕ್ಷನ್‌ ಅಲ್ಹುಮ್ನೆಸ್‌‍ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

RELATED ARTICLES

Latest News