Wednesday, July 3, 2024
Homeರಾಜ್ಯವಿ.ಸೋಮಣ್ಣ ಅವರ ಕೈ ಹಿಡಿದ ಕಲ್ಪತರು ನಾಡಿನ ಜನತೆ

ವಿ.ಸೋಮಣ್ಣ ಅವರ ಕೈ ಹಿಡಿದ ಕಲ್ಪತರು ನಾಡಿನ ಜನತೆ

ತುಮಕೂರು, ಜೂ. 4- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಹಾಗೂ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಕಲ್ಪತರು ನಾಡಿನ ಮತದಾರರು ಆಶೀರ್ವದಿಸಿದ್ದಾರೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ ಗೆದ್ದಿದ್ದ ವಿ. ಸೋಮಣ್ಣನವರು ಪಕ್ಷದ ವರಿಷ್ಠರ ಮಾತಿಗೆ ಬೆಲೆಕೊಟ್ಟು ವರುಣಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹಾಗೂ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌‍ನ ಪುಟ್ಟರಂಗಶೆಟ್ಟಿ ವಿರುದ್ಧ ಸ್ಪರ್ಧಿಸಿದರು. ಆದರೆ ಅಲ್ಲಿ ಭಾರಿ ಹಿನ್ನಡೆಯಾಗಿ ಸೋಲು ಕಂಡಿದ್ದರು.

ಈ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್‌ ಆತಸ್ಥೈರ್ಯ ತುಂಬಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿ ಕಣ್ಣಕ್ಕಿಳಿಸಿತ್ತು.ತುಮಕೂರಿಗೂ ಹಾಗೂ ಸೋಮಣ್ಣ ಅವರಿಗೂ ಅವಿನಾಭ ಸಂಬಂಧವಿದ್ದು, ಕಾಂಗ್ರೆಸ್‌‍ನ ಅಭ್ಯರ್ಥಿ ಮುದ್ದಹನುಮೇಗೌಡರ ಪರವಾಗಿ ಸ್ಪರ್ಧಿಸಿ ಜಿಲ್ಲೆಯಾದ್ಯಂತ ಪ್ರತಿ ತಾಲೂಕು, ಹೋಬಳಿ, ಗ್ರಾಮಗಳಿಗೆ ಭೇಟಿ ನೀಡಿ ನಿಮ ಸೇವೆಗೆ ಒಂದು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು.

ಈ ವೇಳೆ ಹೊರಗಿನಿಂದ ಬಂದ ಸೋಮಣ್ಣ ನಮ ಕೈಗೆ ಸಿಕ್ತಾರ, ಅಭಿವೃದ್ಧಿ ಕೆಲಸ ಮಾಡುತ್ತಾರಾ ಎಂದು ವಿರೋಧಪಕ್ಷ ಕಾಂಗ್ರೆಸ್‌‍ ಅಪಪ್ರಚಾರ ಮಾಡಿತ್ತು. ಆದರೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಮಲಕ್ಕೆ ಮತ ನೀಡಿ ಆಯ್ಕೆ ಮಾಡಿದ್ದಾರೆ.

ಪ್ರಾರಂಭದಿಂದಲೂ 19 ರೌಂಡ್‌ಗಳಲ್ಲೂ ಮುದ್ದಹನುಮೇಗೌಡ ಅವರಿಗಿಂತ ಮುನ್ನಡೆ ಕಾಯ್ದುಕೊಂಡು ಬಂದಿದ್ದು, ವಿಜಯಲಕ್ಷ್ಮೀ ಸೋಮಣ್ಣ ಅವರಿಗೆ ಒಲಿದಿದ್ದಾಳೆ. ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕೇಂದ್ರದ ಮುಂಭಾಗ ಅಳವಡಿಸಲಾಗಿದ್ದ ಬೃಹತ್‌ ಎಲ್‌ಇಡಿ ಪರದೆಯ ಮೂಲಕ ಶಾಂತಚಿತ್ತವಾಗಿ ಪ್ರತಿ ರೌಂಡ್‌ನ ಫಲಿತಾಂಶವನ್ನು ಕುತೂಹಲದಿಂದ ಸೋಮಣ್ಣ ಅವರು ವೀಕ್ಷಿಸಿ ಗೆಲುವು ಸಾಧಿಸುತ್ತಿದ್ದಂತೆ ಅವರ ಮುಖವೂ ಕೂಡ ಕಮಲದಂತೆ ಅರಳಿತು.

ಸಚಿವರಿಗೆ ಮುಖಭಂಗ:
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು, ಅವರಿಗೆ ಭಾರಿ ಮುಖಭಂಗವಾಗಿದೆ. ಶತಾಯಗತಾಯ ಕಾಂಗ್ರೆಸ್‌‍ ಅಭ್ಯರ್ಥಿ ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರು ಆಗಿರುವ ಜಿ. ಪರಮೇಶ್ವರ್‌ ಹಾಗೂ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಭಾರಿ ಕಸರತ್ತು ನಡೆಸಿದ್ದರು.

ಆದರೆ ಅವರ ಪ್ರಯತ್ನಗಳು ಫಲಕೊಡಲಿಲ್ಲ. ಮತದಾರರು ಜಿಲ್ಲೆಯಲ್ಲಿ ಮತ್ತೆ ಬಿಜೆಪಿಯ ಕೈಹಿಡಿದಿದ್ದಾರೆ. ಇಲ್ಲಿಯವರೆಗೂ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನಿಂದ ಬಂದು ಸ್ಪರ್ಧಿಸಿ ಗೆದ್ದವರಿಲ್ಲ. ಆದರೆ ಸೋಮಣ್ಣ ಅವರು ರಾಜಧಾನಿಯಿಂದ ಬಂದು ಜಯ ಸಾಧಿಸಿರುವುದು ಇತಿಹಾಸವಾಗಿದೆ.

ಸಂಭ್ರಮಾಚರಣೆ:
ವಿ. ಸೋಮಣ್ಣ ಅವರು ಮುನ್ನಡೆ ಸಾಧಿಸುತ್ತಿದ್ದಂತೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಅದೇ ರೀತಿ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಲ್ಲೂ ಸಹ ಕಾರ್ಯಕರ್ತರು ಪರಸ್ಪರ ಸಿಹಿ ತಿನಿಸಿ ಸಂಭ್ರಮಾಚರಣೆ ಮಾಡಿದರು.

ಕೃತಜ್ಞತೆ:
ಹೊರಗಿನಿಂದ ಬಂದ ನನ್ನನ್ನು ಕ್ಷೇತ್ರದ ಮತದಾರರು ಗೆಲ್ಲಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

RELATED ARTICLES

Latest News