Wednesday, July 9, 2025
Homeರಾಷ್ಟ್ರೀಯ | Nationalಗುಜರಾತ್‌ : ಗಂಭೀರಾ ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು, ಎಂಟು ಮಂದಿ ಸಾವು

ಗುಜರಾತ್‌ : ಗಂಭೀರಾ ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು, ಎಂಟು ಮಂದಿ ಸಾವು

Vadodara bridge collapse: Multiple vehicles fall into Mahisagar River, 8 dead

ವಡೋದರಾ, ಜು. 9- ಗುಜರಾತ್‌ ನ ಗಂಭೀರಾ ಸೇತುವೆ ಏಕಾಏಕಿ ಕುಸಿದ ಹಿನ್ನೆಲೆಯಲ್ಲಿ ನಾಲ್ಕು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಪರಿಣಾಮ ಎಂಟು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಸೇತುವೆ ಕುಸಿದ ನಂತರ ಟ್ರಕ್ ಮತ್ತು ಟ್ಯಾಂಕರ್ ಮಹಿಸಾಗರ್ ನದಿಗೆ ಉರುಳಿದ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವುದನ್ನು ಸಚಿವ ಋಷಿಕೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಈ ಘಟನೆಯು ಆನಂದ್ ಮತ್ತು ವಡೋದರಾ ನಡುವಿನ ರಸ್ತೆ ಸಂಪರ್ಕವನ್ನು ಅಡ್ಡಿಪಡಿಸಿದ್ದು, ಮಾರ್ಗದಲ್ಲಿ ವಾಹನ ಸಂಚಾರದ ಮೇಲೆ ಪರಿಣಾಮ ಬೀರಿದೆ.

ಪೊಲೀಸರ ಪ್ರಕಾರ, ಇಂದು ಬೆಳಿಗ್ಗೆ ಗುಜರಾತ್‌ ನ ವಡೋದರಾ ಜಿಲ್ಲೆಯಲ್ಲಿ ಸೇತುವೆಯ ಒಂದು ಭಾಗ ಕುಸಿದ ನಂತರ ಕನಿಷ್ಠ ನಾಲ್ಕು ವಾಹನಗಳು ನದಿಗೆ ಉರುಳಿ ಬಿದ್ದವು ಎಂದು ಪದ್ರಾ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಚರಣ್ ತಿಳಿಸಿದ್ದಾರೆ.

ಅದೇ ರೀತಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ರಕ್ಷಿಸಲಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಪಿಟಿಐ ವರದಿ ಮಾಡಿದೆ .ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಮಹಿಸಾಗರ್ ನದಿಗೆ ನಿರ್ಮಿಸಲಾದ ಗಂಭೀರಾ ಸೇತುವೆ ಬೆಳಿಗ್ಗೆ 7.30 ರ ಸುಮಾರಿಗೆ ಕುಸಿದು ಬಿದ್ದಾಗ ಈ ಘಟನೆ ಸಂಭವಿಸಿದೆ.

ಮಹಿಸಾಗರ ನದಿಯ ಸೇತುವೆಯ ಒಂದು ಭಾಗ ಬೆಳಿಗ್ಗೆ 7.30 ರ ಸುಮಾರಿಗೆ ಕುಸಿದ ನಂತರ ಸುಮಾರು ನಾಲ್ಕು ವಾಹನಗಳು ನದಿಗೆ ಬಿದ್ದವು. ಎರಡು ಟ್ರಕ್‌ಗಳು ಮತ್ತು ಎರಡು ವ್ಯಾನ್‌ಗಳು ಸೇರಿದಂತೆ ವಾಹನಗಳು ನದಿಗೆ ಬಿದ್ದವು. ನಾವು ಇಲ್ಲಿಯವರೆಗೆ ನಾಲ್ವರನ್ನು ರಕ್ಷಿಸಿದ್ದೇವೆ ಎಂದು ಅವರು ಹೇಳಿದರು.

RELATED ARTICLES

Latest News