Sunday, September 8, 2024
Homeರಾಜ್ಯತಾಕತ್ತಿದ್ದರೆ ಇ.ಡಿ ವಿರುದ್ಧ ಸಿದ್ದರಾಮಯ್ಯ ದೂರು ನೀಡಲಿ : ಆರ್. ಅಶೋಕ್ ಸವಾಲು

ತಾಕತ್ತಿದ್ದರೆ ಇ.ಡಿ ವಿರುದ್ಧ ಸಿದ್ದರಾಮಯ್ಯ ದೂರು ನೀಡಲಿ : ಆರ್. ಅಶೋಕ್ ಸವಾಲು

ಬೆಂಗಳೂರು,ಜು.20- ಒಂದು ವೇಳೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡಿಲ್ಲ ಎನ್ನುವುದಾದರೆ ಜಾರಿ ನಿರ್ದೇಶನಾಲಯ (ಇ.ಡಿ) ವಿರುದ್ಧ ತಾಕತ್ತಿದ್ದರೆ ದೂರು ದಾಖಲಿಸಲಿ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಬಹಿರಂಗ ಸವಾಲು ಎಸೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಹಣವನ್ನು ಲೋಕಸಭೆ ಚುನಾವಣೆಗೆ ಬಳಕೆ ಮಾಡಿದೆ ಎಂದು ಇ.ಡಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ನಿರಾಕರಿಸುವುದಾದರೆ ಇ.ಡಿ ವಿರುದ್ಧ ದೂರು ದಾಖಲಿಸುವ ತಾಕತ್ತು ಇಲ್ಲವೇ ಎಂದು ಪ್ರಶ್ನೆ ಮಾಡಿದರು.

ಇ.ಡಿ ವಶದಲ್ಲಿರುವ ಮಾಜಿ ಸಚಿವ ನಾಗೇಂದ್ರ ನನ್ನ ಹೆಸರು ಬಾಯಿಬಿಟ್ಟರೆ ಬುಡಕ್ಕೆ ಬರಬಹುದು ಎಂಬ ಆತಂಕದಿಂದಲೇ ನೋಟಿಸ್ ನೀಡುವ ಮೊದಲೇ ಜಾಮೀನು ತೆಗೆದುಕೊಳ್ಳಲು ಮುಂದಾಗಿದ್ದಾರೆ.
ನನ್ನ ಹೆಸರು ಹೇಳಿ ಎಂದು ನಾಗೇಂದ್ರ ಮೇಲೆ ಇ.ಡಿಯವರು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ. ಒಬ್ಬ ಅಧಿಕಾರಿ ಕನಿಷ್ಟ ಎಂದರೂ 50 ಲಕ್ಷ ನುಂಗಬಹುದು. ನಿಗಮದ ಅಧಿಕಾರಿಗಳಾದ ಪದ್ಮನಾಭ ಮತ್ತು ಪರಶುರಾಮ ನಡೆಸಿರುವ ಸಂಭಾಷಣೆ ಬಿಡುಗಡೆಯಾದ ಮೇಲೂ ನಾಗೇಂದ್ರನನ್ನು ಸಮರ್ಥಿಸಿಕೊಳ್ಳುತ್ತಿರುವ ಸಿದ್ದರಾಮಯ್ಯನವರ ಮರ್ಮ ಎಲ್ಲರಿಗೂ ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದರು.

40 ಕೋಟಿ ಚೆಕ್ ಕೊಟ್ಟಿರುವುದು ಸುಳ್ಳೇ? ದೂರವಾಣಿ ಸಂಭಾಷಣೆ ನಡೆಸಿರುವುದು ಸುಳ್ಳೇ? ಡೆತ್‍ನೋಟ್ ಕೂಡ ಸುಳ್ಳು ಎಂದು ಹೇಳಬೇಕಿತ್ತು. ಬರೀ ಪದ್ಮನಾಭ ಎಂದು ಸಿಎಂ ಹೇಳಿದರೂ ಅಲ್ಲಿಂದ ಮುಂದಕ್ಕೆ ಹೋಗಲೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನಾವು ವಾಲ್ಮೀಕಿ ಹಗರಣದ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯನವರು ಬಿಜೆಪಿ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ. ಅ„ಕಾರಕ್ಕೆ ಬಂದು ಒಂದು ವರ್ಷವಾಯಿತು. ನಮ್ಮ ಮೇಲೆ 40% ಆರೋಪ ಮಾಡಿದ್ದೀರಿ. 15 ತಿಂಗಳು ಏನು ಮಾಡುತ್ತಿದ್ದೀರಿ? ನೀವು, ರಾಹುಲ್ ಗಾಂ„ ಡಿ.ಕೆ.ಶಿವಕುಮಾರ್ ಕಟಕಟೆಯಲ್ಲಿ ನಿಂತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಬಿಜೆಪಿ ಸರ್ಕಾರದ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಹೇಳಿದ್ದೀರಿ. ಬಂದ ಮೂರು ತಿಂಗಳಲ್ಲಿ ಅಫಿಡೆವಿಟ್ ಸಲ್ಲಿಸಿದಾಯಿತು. ಮೂರಾಯ್ತು, ಆರಾಯ್ತು, 15 ತಿಂಗಳಾಯ್ತು ವರದಿ ಎಲ್ಲಿ ಹೋಯ್ತು ಎಂದು ಪ್ರಶ್ನೆಗಳ ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯನವರೇ ನಿಮಗೆ ಉಳಿದಿರುವುದು ಕೇವಲ ಮೂರುವರೆ ವರ್ಷ ಮಾತ್ರ. ನಮ್ಮ ಮೇಲೆ ನೀವು 20 ಹಗರಣಗಳ ಆರೋಪ ಮಾಡಬಹುದು. ನಾವು ನಿಮ್ಮ ಮೇಲೆ 70 ಹಗರಣಗಳ ಸಾಕ್ಷಿ ಸಮೇತ ಬುಕ್ ಬಿಡುಗಡೆ ಮಾಡುತ್ತೇವೆ. ಇದು ಸಿಎಜಿ ವರದಿಯ ಲೆಕ್ಕಗಳೆಂದು ಅಶೋಕ್ ಪುಸ್ತಕವನ್ನು ಬಿಡುಗಡೆ ಮಾಡಿದರು.
ನಿಗಮದಲ್ಲಿರುವ ಹಣವನ್ನು ಕರ್ನಾಟಕದ ಬಾರ್‍ಗಳಿಗೆ ಹಾಕಿಸಿದರೆ ಗೊತ್ತಾಗಬಹುದೆಂಬ ಕಾರಣದಿಂದ ತೆಲಂಗಾಣದ ಬಾರ್‍ಗೆ ಹಾಕಿಸಿದ್ದೀರಿ. ಹಣವನ್ನು ಡ್ರಾ ಮಾಡಿಕೊಂಡಿದ್ದೀರಿ. ರಾಜ್ಯ ಸರ್ಕಾರವೇ ಹಣವನ್ನು ತುಂಬಬೇಕು. ಜೈಲಿನಲ್ಲಿರುವ ನಾಗೇಂದ್ರನನ್ನು ಏಕೆ ಬಿಡಿಸಿಕೊಂಡು ಬಂದಿಲ್ಲ ಎಂದು ಪ್ರಶ್ನಿಸಿದರು.

ಎಸ್‍ಐಟಿ ರಚನೆ ಮಾಡಿದ್ದೇ ಈ ಹಗರಣವನ್ನು ಮುಚ್ಚಿ ಹಾಕಲು. ಇದು ನಿಜವಾದ ಎಸ್‍ಐಟಿಯೇ ಅಲ್ಲ. ಸಿದ್ದರಾಮಯ್ಯ, ಶಿವಕುಮಾರ್, ಸುರ್ಜೆವಾಲ ಕೃಪಾಪೆÇೀಷಿತ ನಾಟಕ ಮಂಡಳಿ. ಒಂದು ತಿಂಗಳಾದರೂ ಹಗರಣದ ಪ್ರಮುಖ ಆರೋಪಿಗಳಿಗೆ ನೋಟಿಸ್ ಕೊಡಲಿಲ್ಲ. ಸಾಹೇಬ್ರು ಹೇಳಿದ ಮೇಲೆ ನಾವೇನು ಮಾಡುವುದು ಎಂದು ವಿಚಾರಣೆಯನ್ನು ಕಬೋರ್ಡ್‍ಗೆ ಹಾಕಲು ಅ„ಕಾರಿಗಳು ಮುಂದಾಗಿದ್ದರು ಎಂದು ದೂರಿದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಜೈಲಿಗೆ ಹಾಕಲಾಯಿತು. ಆದರೆ ವಾಲ್ಮೀಕಿ ಹಗರಣವನ್ನು ಮುಚ್ಚಲು ಮುಂದಾಗಿದ್ದರು. ಸಿದ್ದರಾಮಯ್ಯನವರು ಎಷ್ಟು ಹತಾಶರಾಗಿದ್ದಾರೆ ಎಂದರೆ ಸುದ್ದಿಗೋಷ್ಟಿಯಲ್ಲಿ ಕೇಂದ್ರ ಸರ್ಕಾರದ ಪ್ರಹ್ಲಾದ್ ಜೋಷಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರೇಳಿದ್ದಾರೆ. ಹಣವನ್ನು ನುಂಗಿ ನೀರು ಕುಡಿದಿರುವ ಇವರು ಈಗ ಕಂಡ ಕಂಡವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ನಾಳೆ ಭೇಟಿ: ರಾಜ್ಯದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶದಲ್ಲಿ ನಾನು ಮತ್ತು ಕುಮಾರಸ್ವಾಮಿ ನಾಳೆ ಭೇಟಿ ಕೊಡುತ್ತೇವೆ. ಅನೇಕ ಕಡೆ ಅನಾಹುತ ಸಂಭವಿಸಿದರೂ ಸಂಬಂಧಪಟ್ಟ ಸಚಿವರು ಭೇಟಿ ನೀಡಿಲ್ಲ. ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಬಂದು 15 ದಿನವಾಗಿದೆ. ಸರ್ಕಾರದ ಕತ್ತೆ ಕಾಯುತ್ತಿದೆಯೇ ಎಂದು ಪ್ರಶ್ನಿಸಿದರು.

RELATED ARTICLES

Latest News