ನವದೆಹಲಿ,ಅ.4- ಈಗಾಗಲೇ ದೇಶಾದ್ಯಂತ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ಮೂಲಕ ಪ್ರಯಾಣಿಕರಿಗೆ ಅತ್ಯಾಕರ್ಷಕ ಪ್ರಯಾಣದ ಸೌಲಭ್ಯ ಒದಗಿಸಿರುವ ರೈಲ್ವೆ ಇಲಾಖೆ ಇದೀಗ ಆಧುನಿಕ ಸೌಲಭ್ಯವುಳ್ಳ ಸ್ಲೀಪರ್ ಕೋಚ್ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲು ಮುಂದಾಗಿದೆ.
2024ರ ವೇಳೆಗೆ ದೇಶದಾದ್ಯಂತ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳನ್ನು ಪ್ರಯಾಣಿಕರಿಗೆ ಪರಿಚಯಿಸಲಾಗುವುದು. ಈಗಾಗಲೇ ಇದಕ್ಕಾಗಿ ಅಗತ್ಯ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಕೂನಲ್ಲಿ ಕೆಲವು ಸ್ಲೀಪರ್ ಕೋಚ್‍ನ ರೈಲ್ವೆ ಚಿತ್ರಗಳನ್ನು ಶೇರ್ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ಲಾಗಿದೆ. ನೂತನ ಸ್ಲೀಪರ್ ಕೋಚ್ ವಂದೇ ಭಾರತ್ ಹೊಸ ರೈಲುಗಳನ್ನು 2024ರ ವೇಳೆಗೆ ನಾವು ಪ್ರಯಾಣಿಕರ ಸೇವೆಗೆ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಇದು ಅತಿ ವೇಗ ಮತ್ತು ಹೆಚ್ಚಿನ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.
ಕಿಡಿಗೇಡಿತನ ಬಿಜೆಪಿಯವರ ಹುಟ್ಟುಗುಣ : ಸಚಿವ ರಾಮಲಿಂಗಾರೆಡ್ಡಿ
ವಂದೇ ಭಾರತ್ ಪರಿಕಲ್ಪನೆಯ ರೈಲು ಶೀಘ್ರದಲ್ಲೇ ಬರಲಿದೆ. ಈ ರೈಲುಗಳು ವಿಶಾಲವಾದ ಬರ್ತ್‍ಗಳು, ಸುಂದರವಾದ ಒಳಾಂಗಣಗಳು, ವಿಶಾಲವಾದ ಶೌಚಾಲಯಗಳು, ಮಿನಿಪ್ಯಾಂಟ್ರಿ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಅಶ್ವಿನಿ ವೈಷ್ಣವು ಹೇಳಿದ್ದಾರೆ.
ವೇಗವಾಗಿ ತಲುಪುವುದರಿಂದ ಸಮಯವಕಾಶವೂ ಉಳಿಯುವುದರ ಜೊತೆಗೆ ಆರಾಮದಾಯಕವಾಗಿಯೂ ಪ್ರಯಾಣ ಮಾಡುವ ಅವಕಾಶ ಇರುವುದರಿಂದ ಇದು ರೈಲ್ವೆ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲಿದೆ. ಪ್ರಗತಿಪರ ಮತ್ತು ಸ್ವಾವಲಂಬಿ ಭಾರತದ ಸಂಕೇತವೆನಿಸಿರುವ ಸ್ಥಳೀಯ ಹೈ ಸ್ಪೀಡ್ ರೈಲು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ, ಹಾಗೂ ಸೇವೆ ಈ ರೈಲಿನ ಹಾಲ್‍ಮಾರ್ಕ್ ಆಗಲಿದೆ.
ಸಿಕ್ಕಿಂನಲ್ಲಿ ಮೇಘಸ್ಪೋಟ, 23 ಸೇನಾ ಸಿಬ್ಬಂದಿ ನಾಪತ್ತೆ
ವಿಶ್ವದರ್ಜೆಯ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ವಂದೇ ಭಾರತ್ ಎಕ್ಸ್‍ಪ್ರೆಸ್ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆ ನೀಡುತ್ತದೆ. 2019ರಲ್ಲಿ ದೇಶದ ಮೊದಲ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಿದ್ದರು.
ಫೆಬ್ರವರಿ 15, 2019ರಂದು ನವದೆಹಲಿ ಮತ್ತು ವಾರಣಾಸಿ ನಡುವೆ ಮೊದಲ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಆರಂಭವಾಗಿತ್ತು. ಈ ರೈಲನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿತ್ತು.