Friday, November 22, 2024
Homeರಾಷ್ಟ್ರೀಯ | Nationalವಂದೇ ಭಾರತ್ ರೈಲುಗಳ ಸ್ಲೀಪರ್ ಕೋಚ್‌ಗಳ ಅನಾವರಣ

ವಂದೇ ಭಾರತ್ ರೈಲುಗಳ ಸ್ಲೀಪರ್ ಕೋಚ್‌ಗಳ ಅನಾವರಣ

Vande Bharat Sleeper Coaches Unveiled, Scheduled For Commissioning Soon

ಚನ್ನೈ ,ಅ.24- ಮೊದಲ ಬಾರಿಗೆ ದೇಶೀಯವಾಗಿ ಐಸಿಎಫ್ ರೈಲ್ವೆ ಕಾರ್ಖಾನೆಯಲ್ಲಿ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ ವಂದೇ ಭಾರತ್ ರೈಲುಗಳ ಸ್ಲೀಪರ್ ಕೋಚ್‌ಗಳನ್ನು ಅನಾವರಣಗೊಳಿಸಲಾಗಿದೆ. ವಂದೇ ಭಾರತ್ ರೈಲುಗಳ ಸ್ಲೀಪರ್ ಕೋಚ್‌ಗಳನ್ನು ಚನೈನ ವಿಲ್ಲಿವಾಕಂನಲ್ಲಿರುವ ಇಂಟೆಗ್ರಲ್ ಕೋಚ್ – ಫ್ಯಾಕ್ಟರಿಯಲ್ಲಿ ಈಗಾಗಲೇ 77 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗಿದೆ.

ಈ ಸ್ಲೀಪರ್ ಕೋಚ್‌ನ ವಂದೇ ಭಾರತ್ ರೈಲುಗಳಲ್ಲಿ ಒಟ್ಟು 823 ಪ್ರಯಾಣಿಕರು ಪ್ರಯಾಣಿಸಬಹುದು. ಈ ರೈಲಿನಲ್ಲಿ ಪ್ರಥಮ ದರ್ಜೆ ಎಸಿ ವಿಭಾಗವೂ ಇದೆ. 2ನೇ ದರ್ಜೆ ಎಸಿ ಕೋಚ್‌ಗಳಲ್ಲಿ 188 ಪ್ರಯಾಣಿಕರು ಮತ್ತು 11 ಮೂರನೇ ದರ್ಜೆಯ ಎಸಿ ಕೋಚ್‌ಗಳಲ್ಲಿ 611 ಪ್ರಯಾಣಿಕರು ಪ್ರಯಾಣಿಸಬಹುದು.

ಭಾರತದಾದ್ಯಂತ ವಂದೇ ಭಾರತ್ ರೈಲುಗಳನ್ನು ಪಂಜಾಬ್, ಉತ್ತರಪ್ರದೇಶ ಮತ್ತು ತಮಿಳುನಾಡು ಮೂರು ರಾಜ್ಯಗಳಲ್ಲಿ ತಯಾರಿಸಲಾಗುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ ಸ್ಲೀಪರ್ ಸೌಲಭ್ಯದೊಂದಿಗೆ ವಂದೇ ಭಾರತ್ ರೈಲುಗಳನ್ನು ವಿಲ್ಲಿವಕ್ಕಂ ಐಸಿಎ-ï‌ನಲ್ಲಿ ತಯಾರಿಸಲಾಗಿದೆ ಎಂದು ಐಸಿಎಫ್ ಪ್ರಧಾನ ವ್ಯವಸ್ಥಾಪಕ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.

ಚನ್ನೈ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಹಂತದ ಪರೀಕ್ಷೆಯ ನಂತರ ಈ ಸ್ಲೀಪರ್ ಕೋಚ್‌ಗಳನ್ನು ವಂದೇ ಭಾರತ್ ರೈಲುಗಳಲ್ಲಿ ಬಳಕೆಗೆ ತರಲಾಗುವುದು. ಈ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು ಗರಿಷ್ಠ 160 ಕಿಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪರೀಕ್ಷಾ ಪ್ರೋಟೋಕಾಲ್ ಸಮಯದಲ್ಲಿ 180 ಕಿಮೀ ವೇಗವನ್ನು ತಲುಪಲಾಗಿದೆ ಎಂದು ಹೇಳಿದ್ದಾರೆ.

ಸೌಲಭ್ಯಗಳು: ಈ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳನ್ನು ವಿವಿಧ ವೈಶಿಷ್ಟ್ಯಗಳೊಂದಿಗೆ ತಯಾರಿಸಲಾಗುತ್ತದೆ ಎಂದು ರೈಲ್ವೆ ಹೇಳಿಕೊಂಡಿದೆ. ಎಲ್ಲಾ ಕೋಚ್‌ಗಳು ಅಗ್ನಿಶಾಮಕ ಮತ್ತು ಪ್ರತಿ ಹಾಸಿಗೆಯ ಬಳಿ ತುರ್ತು ನಿಲುಗಡೆ ಬಟನ್ ಹೊಂದಿವೆ. ಒಂದು ಕಂಪಾರ್ಟ್ಮೆಂಟ್ ನಿಂದ ಇನ್ನೊಂದಕ್ಕೆ ಚಲಿಸಲು ಸ್ವಯಂಚಾಲಿತ ಬಾಗಿಲುಗಳಿವೆ ಮತ್ತು ಪ್ರತಿ ವಿಭಾಗವು ತುರ್ತು ಟಾಕ್ ಬ್ಯಾಕ್ ಘಟಕವನ್ನು ಹೊಂದಿದೆ. ಈ ಮೂಲಕ ಪ್ರಯಾಣಿಕರೊಂದಿಗೆ ಲೋಕೋ ಪೈಲಟ್ ಮಾತನಾಡಿ ಅವರು ಸ್ಪಂದಿಸುವ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲದೇ ಲೊಕೊ ಪೈಲಟ್ ಎಂಜಿನ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಬಹುದು.

ಪ್ರತಿ ಕಂಪಾರ್ಟ್ಮೆಂಟ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಶೌಚಾಲಯ ಸೌಲಭ್ಯಗಳು, ಚಾರ್ಜಿಂಗ್ ಕೇಬಲ್ ಮತ್ತು ಪ್ರತಿ ಹಾಸಿಗೆಯ ಬಳಿ ಸಣ್ಣ ದೀಪದ ಸೌಲಭ್ಯವಿದೆ. ಈ ಸ್ಲೀಪರ್ ಕೋಚ್ ರೈಲನ್ನು ಹಗಲು ಸಮಯಕ್ಕಿಂತ ಹೆಚ್ಚಾಗಿ ರಾತ್ರಿಯಲ್ಲಿ ದೂರದವರೆಗೆ ಪ್ರಯಾಣಿಸಲು ವಿನ್ಯಾಸಗೊಳಿಸಲಾಗಿದೆ.

ಪ್ರಾಯೋಗಿಕವಾಗಿ ಆರಂಭಿಕ ಹಂತವು ನವೆಂಬರ್ 15ರ ನಂತರ ಪೂರ್ಣಗೊಳ್ಳಲಿದ್ದು, ನಂತರ ಪಶ್ಚಿಮ ರೈಲ್ವೆ ಮತ್ತು ಮಧ್ಯ ರೈಲ್ವೆಯಲ್ಲಿ ಪ್ರಯೋಗಗಳನ್ನು ನಡೆಸಲಾಗುವುದು. ಮುಂದಿನ ವರ್ಷ ಜನವರಿ 15ರಿಂದ ವಂದೇ ಭಾರತ್ ಸ್ಲೀಪರ್ ರೈಲುಗಳಿಗೆ ಅನುಮೋದನೆ ದೊರೆಯಲಿದೆ. ಜನವರಿ ಅಂತ್ಯ ಅಥವಾ -ೆಬ್ರವರಿ ಮೊದಲ ವಾರದಲ್ಲಿ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.

ಸುರಕ್ಷತೆಗೆ ಹೆಚ್ಚಿನ ಒತ್ತು: ರೈಲುಗಳು ಪರಸ್ಪರ ಡಿಕ್ಕಿ ಹೊಡೆದರೆ ಸಂಭವಿಸುವ ದೊಡ್ಡ ಅಪಘಾತಗಳನ್ನು ತಪ್ಪಿಸಲು ಸುರಕ್ಷತಾ ರಚನೆಗಳನ್ನು ಸುಧಾರಿಸಲಾಗಿದೆ ಎಂದು ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ. ರೈಲುಗಳು ಡಿಕ್ಕಿ ಹೊಡೆದರೂ ಕೋಚ್‌ಗಳು ಒಂದಕ್ಕೊಂದು ಅಂಟಿಕೊಳ್ಳದಂತಹ ತಂತ್ರ ಜ್ಞಾನವಿದೆ. ಎಲ್ಲಾ ವಂದೇ ಭಾರತ್ ರೈಲುಗಳಂತೆ ಇದು ಕವಚ ವ್ಯವಸ್ಥೆಯನ್ನು ಹೊಂದಿದೆ. ವಂದೇ ಭಾರತ್ ಸ್ಲೀಪರ್ ರೈಲು 120 ಕೋಟಿ ವೆಚ್ಚದಲ್ಲಿ ವಿನ್ಯಾಸಗೊಳಿಸಲಾದ 16 ಕಾರ್ ಮಾದರಿಯಾಗಿದೆ.

RELATED ARTICLES

Latest News