Friday, November 7, 2025
Homeರಾಷ್ಟ್ರೀಯ | Nationalವಂದೇ ಮಾತರಂ ಭಾರತದ ಏಕತೆಯ ಸಂಕೇತ : ಪ್ರಧಾನಿ ಮೋದಿ

ವಂದೇ ಮಾತರಂ ಭಾರತದ ಏಕತೆಯ ಸಂಕೇತ : ಪ್ರಧಾನಿ ಮೋದಿ

ನವದೆಹಲಿ,ನ.7- ವಂದೇ ಮಾತರಂ ಭಾರತದ ಏಕತೆಯ ನಿಜವಾದ ಸಂಕೇತವಾಗಿದ್ದು, ಇದು ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡಿದೆ. ಇಂದು ನಾವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿರುವಾಗ, ಇದು ನಮಗೆ ಹೊಸ ಸ್ಪೂರ್ತಿ ನೀಡುತ್ತದೆ ಮತ್ತು ದೇಶದ ಜನರಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸಿದ್ದಾರೆ. ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ವರ್ಷಪೂರ್ತಿ ದೇಶಾದ್ಯಂತ ನಡೆಯಲಿರುವ ವಂದೇ ಮಾತರಂ ಸರಣಾರ್ಥ ಕಾರ್ಯಕ್ರಮದಲ್ಲಿ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಪ್ರಧಾನಿ ಮೋದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರಾಷ್ಟ್ರೀಯ ಗೀತೆಯ ಭಾವನಾತಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಸರಿಸಿದ ಅವರು, ವಂದೇ ಮಾತರಂ ಮಾಧುರ್ಯ ಅಥವಾ ಸಾಹಿತ್ಯವನ್ನು ಮೀರಿದ್ದು, ವಂದೇ ಮಾತರಂ ಒಂದು ಹಾಡಲ್ಲ, ಅದೊಂದು ಮಂತ್ರ. ಇದು ಪ್ರದೇಶಗಳು ಮತ್ತು ತಲೆಮಾರುಗಳಾದ್ಯಂತ ಜನರನ್ನು ಒಂದುಗೂಡಿಸುವ ಕಾಲಾತೀತ ಶಕ್ತಿ ಎಂದರು. ವಂದೇ ಮಾತರಂನ ಮುಖ್ಯ ಭಾವನೆ ಭಾರತ್, ಭಾರತವು ಒಂದು ರಾಷ್ಟ್ರವಾಗಿ ಹೊರಹೊಮಿತು ಮತ್ತು ಪ್ರತಿ ರತ್ನವಾಗಿಯೂ ಸಹ ಭೂತಕಾಲದ ರತ್ನವಾಗಿ ಅಮರತ್ವ ಹೊರಹೊಮಿತು ಎಂದು ಮೋದಿ ಅವರು ಬಣ್ಣಿಸಿದರು.

ಭಾರತವು ಪ್ರತಿ ಸವಾಲಿನಿಂದಲೂ ಪ್ರಬಲವಾಗಿ ಹೊರಹೊಮಿದ ರಾಷ್ಟ್ರವಾಗಿ ಹೊರಹೊಮಿತು.1937 ರಲ್ಲಿ ವಂದೇ ಮಾತರಂ ಹಾಡಿದ ನಂತರ ವಿಭಜನೆಯಾಯಿತು ಜೊತೆಗೆ ವಿಭಜನೆಯ ಬೀಜಗಳನ್ನು ಬಿತ್ತಲಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಮುಂಬರುವ ಆಚರಣೆಯ ವರ್ಷವು ವಂದೇ ಮಾತರಂ ಪ್ರತಿನಿಧಿಸುವ ಪರಂಪರೆ, ಆದರ್ಶಗಳು ಮತ್ತು ಸಾಂಸ್ಕೃತಿಕ ಶಕ್ತಿಯೊಂದಿಗೆ ರಾಷ್ಟ್ರವು ಮತ್ತೆ ಒಂದಾಗಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಹೇಳಿದರು.

ರಾಷ್ಟ್ರವ್ಯಾಪಿ ಆಚರಣೆಗಳು: ಈ ಕಾರ್ಯಕ್ರಮವು ಇಂದಿನಿಂದ ಮುಂದಿನ ನ. 7, 2026 ರವರೆಗೆ ವರ್ಷವಿಡೀ ನಡೆಯುವ ರಾಷ್ಟ್ರೀಯ ಆಚರಣೆಗೆ ಚಾಲನೆ ನೀಡಿತು, ಇದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ರಚೋದಿಸಿದ ಮತ್ತು ಇನ್ನೂ ರಾಷ್ಟ್ರೀಯ ಹೆಮೆಯನ್ನು ಸಾಕಾರಗೊಳಿಸುವ ಈ ಐತಿಹಾಸಿಕ ಹಾಡಿನ 150 ವರ್ಷಗಳನ್ನು ಗುರುತಿಸುತ್ತದೆ. ಬಂಕಿಮ್ ಚಂದ್ರ ಚಟರ್ಜಿ 1875 ರಲ್ಲಿ ನವೆಂಬರ್ 7 ರಂದು ಬಂದ ಅಕ್ಷಯ ನವಮಿಯಂದು ಈ ಹಾಡನ್ನು ರಚಿಸಿದರು. ಸ್ವಾತಂತ್ರ್ಯ ಕಾಲದಿಂದ ಇಂದಿನ ತನಕ ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಈ ಹಾಡನ್ನು ಹಾಡಲಾಗುತ್ತದೆ

RELATED ARTICLES

Latest News