ನವದೆಹಲಿ, ಜ.4 (ಪಿಟಿಐ) – ಕಳೆದ 1975 ಮತ್ತು 1998ರ ಪರಮಾಣು ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ವಿಜ್ಞಾನಿ ರಾಜಗೋಪಾಲ ಚಿದಂಬರಂ ಅವರು ಇಂದು ನಿಧನರಾಗಿದ್ದಾರೆ.ಚಿದಂಬರಂ ಅವರ ನಿಧನವನ್ನು ಅಣುಶಕ್ತಿ ಇಲಾಖೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಪರಮಾಣು ಶಸಾ್ತ್ರಸ್ತ್ರಗಳ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದ್ದ 88 ವರ್ಷದ ಚಿದಂಬರಂ ಅವರು ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಮುಂಜಾನೆ 3.20 ಕ್ಕೆ ಕೊನೆಯುಸಿರೆಳೆದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಅವರು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.ಚಿದಂಬರಂ ಅವರಿಗೆ ಕ್ರಮವಾಗಿ 1975 ಮತ್ತು 1999 ರಲ್ಲಿ ಪದಶ್ರೀ ಮತ್ತು ಪದವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.