ಬೆಂಗಳೂರು,ಜು.13-ದಕ್ಷಿಣ ಭಾರತದ ಖ್ಯಾತ ನಟ ಕೋಟ ಶ್ರೀನಿವಾಸ ರಾವ್ (83) ಅವರು ಇಂದು ನಿಧನರಾಗಿದಾರೆ.ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನಲ್ಲಿವ ಅವರ ನಿವಾಸದಲ್ಲಿ ಮುಂಜಾನೆ ವಿಧಿವಶರಾಗಿದ್ದಾರೆ.80 ವರ್ಷ ದಾಟಿದ ಮೇಲೆ ವೃದ್ಧಾಪ್ಯಸಮಸ್ಯೆ ಶುರುವಾಗಿದ್ದು ಸಿನಿಮಾ ನಟನೆ ಕಡಿಮೆಯಾಗಿತ್ತು ಅವರ ಕೊನೆಯ ಚಿತ್ರ 2023ರಲ್ಲಿ ಬಿಡುಗಡೆಯಾದ ಸುವರ್ಣ ಸುಂದರಿ ಸಾಕಷ್ಟು ಮೆಚ್ಚುಗೆ ಪಡೆದಿತ್ತು.
ಶ್ರೀನಿವಾಸ ರಾವ್ ಅವರು 1942ರ ಜುಲೈ 10ರಂದು ಕೃಷ್ಣ ಜಿಲ್ಲೆಯ ಕಂಕಿಪಡುವಿನಲ್ಲಿ ಜನಿಸಿದರು. ಅವರ ತಂದೆ ಡಾ. ಸೀತಾರಾಮಾಂಜನೇಯುಲು. ಬಾಲ್ಯದಲ್ಲಿ ತಂದೆಯಂತೆ ವೈದ್ಯನಾಗಬೇಕೆಂದು ಬಯಸಿದ್ದರೂ, ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಕಾಣಿಸಿಕೊಂಡ ನಂತರ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ನಟನೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು.
1978ರಲ್ಲಿ ಪ್ರಣಾಮ್ ಖರೀದು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಅನೇಕ ಬಗೆಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.ತೆಲುಗು ಮಾತ್ರವಲ್ಲದೇ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ಕೋಟ ಶ್ರೀನಿವಾಸ ರಾವ್ ಅವರು ನಟಿಸಿದ್ದರು.
ಕಳನಾಯಕನ ಪಾತ್ರ, ಹಾಸ್ಯ ಸೇರಿದಂತೆ ಹಲವು ಬಗೆಯಲ್ಲಿ ಅವರು ಜನರನ್ನು ರಂಜಿಸಿದ್ದರು. ಪದವಿ ಶಿಕ್ಷಣ ಪಡೆದ ನಂತರ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಸಿಕ್ಕಿತು ಆದರೆ ಅಲ್ಲಿ ತಮ ಸೇವೆ ಕೆಲವು ತಿಂಗಳು ಮಾತ್ತ.
ಆಗ ಕೋಟ ಶ್ರೀನಿವಾಸ ರಾವ್ ಅವರು ರುಕಿಣಿ ಅವರನ್ನು ವಿವಾಹವಾದರು ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಕೋಟ ಶ್ರೀನಿವಾಸ್ ಅವರ ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಹಂತದಲ್ಲಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದರು.
ಮಗನ ಅಕಾಲಿಕ ಮರಣದಿಂದ ಅವರು ತೀವ್ರ ಆಘಾತಕ್ಕೊಳಗಾಗಿದ್ದರು ಅದರಿಂದ ಹೊರಬಂದು ಹಲಾವರು ಚಿತ್ತರಗಳಲ್ಲಿ ನಟಿಸಿದ್ದರು.ಕೋಟ ಶ್ರೀನಿವಾಸ್ ರಾವ್ ಅವರು ಕೇವಲ ನಟರಲ್ಲ. ರಾಜಕೀಯಕ್ಕೂ ಪ್ರವೇಶಿಸಿ ಯಶಸ್ಸುಕಂಡಿದ್ದರು. 1999ರಿಂದ 2004ರವರೆಗೆ ವಿಜಯವಾಡ ಪೂರ್ವ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
ಕನ್ನಡದ ಲೇಡಿ ಕಮಿಷನರ್, ರಕ್ತ ಕಣ್ಣೀರು, ಲವ್, ನಮ ಬಸವ, ನಮಣ್ಣ, ಶ್ರೀಮತಿ, ಕಬ್ಜಾ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.ಈವರೆಗೆ ಸುಮಾರು 750 ಕ್ಕೂ ಹೆಚ್ಚಿ ಸಿನಿಮಾದಲ್ಲಿ ನಟಿಸಿದ ಹಿರಿಮೆ ಹೊಂದಿದ್ದರು.ಕೋಟ ಶ್ರೀನಿವಾಸ ರಾವ್ ಅವರ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ,ಚಿತ್ರರಂಗ,ರಾಜಕೀಯ ಮುಖಂಡರು ಸಂತಾಪ ಸಂತಾಪ ಸೂಚಿಸಿದ್ದಾರೆ.
- ಪೊಲೀಸ್ ಕಸ್ಟಡಿ ಸಾವು ವಿರೋಧಿಸಿ ಬೀದಿಗಿಳಿದ ವಿಜಯ್
- ಸಾಲಬಾಧೆ ತಾಳಲಾರದೆ ಒಂದೇ ಗ್ರಾಮದ ಇಬ್ಬರು ರೈತರ ಆತ್ಮಹತ್ಯೆ
- ಬೆಳಗಾವಿ : ನಡು ರಸ್ತೆಯಲ್ಲೇ ಯುವ ಗಾಯಕನ ಬರ್ಬರ ಹತ್ಯೆ
- ಕಿರು ತೆರೆ ನಟಿ ಶ್ರುತಿ ಮೇಲಿನ ಹಲ್ಲೆಗೆ ನೈಜ ಕಾರಣ ಬಿಚ್ಚಿಟ್ಟ ಪತಿ
- ಬಿಹಾರ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ..!