Sunday, September 8, 2024
Homeಮನರಂಜನೆಹುಚ್ಚು ಮನಸ್ಸು ಹದಿಹರೆಯದ ವಯಸ್ಸು - ವಿದ್ಯಾರ್ಥಿ ವಿದ್ಯಾರ್ಥಿನಿಯರೇ

ಹುಚ್ಚು ಮನಸ್ಸು ಹದಿಹರೆಯದ ವಯಸ್ಸು – ವಿದ್ಯಾರ್ಥಿ ವಿದ್ಯಾರ್ಥಿನಿಯರೇ

ದೊಡ್ಡ ದೊಡ್ಡ ಶ್ರೀಮಂತರ ಮಕ್ಕಳು ಹೋಗುವ ಶಾಲೆಯಲ್ಲಿ ಅವರೆಲ್ಲರಿಗಿಂತ ಚೆನ್ನಾಗಿ ಓದುವ ಒಂದು ಬಡ ಹೆಣ್ಣು ಮಗು ತಾನು ಓದುತ್ತಿರುವ ಶಾಲೆಯ ಕಟ್ಟಡ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದು ಸಿನಿಮಾ ನೋಡುತ್ತಿರುವ ಪ್ರೇಕ್ಷಕರಿಗೆ ಮೊದಮೊದಲು ಇದರ ತೀವ್ರತೆ ಗೊತ್ತಾಗುವುದಿಲ್ಲ. ಆದರೆ ಈ ಘಟನೆ ಗುಪ್ತ ಗಾಮಿನಿಯಂತೆ ಕಥೆಯನ್ನು ಆವರಿಸಿಕೊಂಡು ಅದೇ ಪ್ರಮುಖವಾಗುತ್ತದೆ. ಇದು ಯಾವ ಸಿನಿಮಾ ಸ್ಟೋರಿ ಲೈನ್ ಅಂತ ಗೊತ್ತಾಗಿಲ್ವ. ಈ ವಾರ ತೆರೆ ಕಂಡು ಯುವಕರನ್ನ ರಂಜಿಸುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ್ದು.

ಇನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ವಿ ಐ ಪಿ ಮಕ್ಕಳು ಸಿಗರೇಟ್, ಮಧ್ಯಪಾನ, ಡ್ರಗ್ಸ್ ,ರ್ಯಾಗಿಂಗ್,ಪಾರ್ಟಿ ಯಂತಹ ಚಟಗಳಿಗೆ ಬಿದ್ದು ಇಡೀ ಶಾಲೆಯನ್ನ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುತ್ತಾರೆ.ಅವರನ್ನ ದಂಡಿಸಲು ಶಾಲೆಯ ಆಡಳಿತವೇ ಭಯಪಡುತ್ತಿರುತ್ತದೆ. ಈ ರೀತಿಯ ಮನಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ಏನೆಲ್ಲಾ ಅವಾಂತರಗಳನ್ನು ಮಾಡುತ್ತಾರೆ, ಕೊನೆಯಲ್ಲಿ ಇವರಗೆ ಆಗುವ ಶಿಕ್ಷೆ ಏನು ಎನ್ನುವುದೇ ಸಿನಿಮಾದ ಪ್ರಮುಖ ಹೈಲೈಟ್

ನಿರ್ದೇಶಕ ಅರುಣ್ ವಿಮುಕ್ತ, ರಂಜನೆಯ ಜೊತೆಗೆ ಇಂದಿನ ಅನೇಕ ಶಾಲೆಗಳಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತರಲು ಯಶಸ್ವಿಯಾಗಿದ್ದಾರೆ. ಪ್ರಶ್ನೆ ಪತ್ರಿಕೆ ಸ್ಕ್ಯಾಮ್, ಮಾದಕ ವಸ್ತುಗಳಿಗೆ ಬಲಿಯಾಗುವ ಶಾಲಾ ಮಕ್ಕಳು, ಸಾಮಾಜಿಕ ಜಾಲತಾಣಗಳು, ಇಂದಿಗೂ ಜೀವಂತವಾಗಿರುವ ರ್ಯಾಗಿಂಗ್ ಹೀಗೆ ಅನೇಕ ವಿಷಯಗಳನ್ನು ಕಥೆಯಲ್ಲಿ ತಂದಿದ್ದಾರೆ. ಅವುಗಳನ್ನು ಯಶಸ್ವಿಯಾಗಿ ಯಾರಿಗೆ ತಲುಪಿಸಬೇಕು ಅವರಿಗೆ ತಲುಪಿಸಿ ಮನಮುಟ್ಟುವಂತೆ ಸ್ಕ್ರೀನ್ ಪ್ಲೇ ಬರ್ದಿದ್ದಾರೆ. ಕೇವಲ ಶ್ರೀಮಂತಿಕೆಯಿಂದ ಹಣವನ್ನು ಕೊಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಲದು ಅವರ ನಡವಳಿಕೆಗಳ ಮೇಲು ಅಪ್ಪ ಅಮ್ಮಂದಿರು ಗಮನವಿಟ್ಟು ತಪ್ಪು ಸರಿ ತಿಳುವಳಿಕೆಯನ್ನು ನೀಡಬೇಕು ಎಂಬ ಪಾಠದೊಂದಿಗೆ ಕಥೆ ಮುಕ್ತಾಯವಾಗುತ್ತದೆ

ಗೇಮ್ ಡಿಸೈನರ್ ಪಾತ್ರದಲ್ಲಿ ಚಂದನ್ ಶೆಟ್ಟಿ ಕಥೆಗೆ ದೊಡ್ಡ ತಿರುವನ್ನ ಕೊಡ್ತಾರೆ. ಹಾಗೆ ನಾಲ್ಕು ಪುಂಡ ವಿದ್ಯಾರ್ಥಿಗಳಾಗಿ ಮನೋಜ್, ಅಮರ್, ಮಾನಸಿ, ಭಾವನಾ ಅಪ್ಪು ಮೊದಲ ಪ್ರಯತ್ನದಲ್ಲಿ ಎಲ್ಲರಿಗೂ ಇಷ್ಟವಾಗುತ್ತಾರೆ. ಒಟ್ಟಾರೆ ಒಂದು ಕಂಟೆಂಟ್ ನೊಂದಿಗೆ ಇಡೀ ಚಿತ್ರವನ್ನು ಮನರಂಜನೆಯೊಂದಿಗೆ ಹೇಗೆ ಕೊಂಡಯ್ಯಬಹುದು ಎನ್ನುವುದಕ್ಕೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಸಾಕ್ಷಿ

RELATED ARTICLES

Latest News