Sunday, September 14, 2025
Homeಕ್ರೀಡಾ ಸುದ್ದಿ | Sportsಆರ್‌ಸಿಬಿ ತಂಡಕ್ಕೆ ಶುಭ ಕೋರಿದ ವಿಜಯ್‌ಮಲ್ಯ

ಆರ್‌ಸಿಬಿ ತಂಡಕ್ಕೆ ಶುಭ ಕೋರಿದ ವಿಜಯ್‌ಮಲ್ಯ

ಬೆಂಗಳೂರು, ಮೇ 22- ಈ ಬಾರಿ ಕಪ್‌ ನಮ್ದೆ ,ಹೊಸ ಅಧ್ಯಾಯ ಶುರು’, `ಪ್ಲೇ ಬೋಲ್ಡ್ ‘ ಎಂಬ ಘೋಷದಂತೆ ವೀರಾವೇಶದ ಹೋರಾಟ ಪ್ರದರ್ಶಿಸುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಇಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡದ ಸವಾಲು ಎದುರಿಸುತ್ತಿದ್ದು ತಂಡದ ಮಾಜಿ ಮಾಲೀಕ ವಿಜಯ್‌ ಮಲ್ಯ ಅವರು ಶುಭ ಸಂದೇಶ ಕಳುಹಿಸಿದ್ದಾರೆ.

ವಿಶ್ವದ ಅತ್ಯಂತ ಐಷಾರಾಮಿ ಲೀಗ್‌ನ ಆರಂಭದ ಸೀಸನ್‌ನಿಂದಲೂ ಬೆಂಗಳೂರು ಫ್ರಾಂಚೈಸಿ ಪರ ಆಡುತ್ತಿರುವ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಈ ಸೀಸನ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ತಂಡ ಟ್ರೋಫಿ ಗೆಲ್ಲುವ ಹುಮಸ್ಸನ್ನು ಹೆಚ್ಚಿಸಿದೆ ಎಂದು ಮಲ್ಯ ತಮ್ಮ X ಖಾತೆಯಲ್ಲಿ ಟ್ವಿಟ್‌ ಮಾಡಿದ್ದಾರೆ.

2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಆರಂಭಿಕ 7 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ ನಂತರ ನಡೆದ ಪಂದ್ಯಗಳಲ್ಲಿ ಫೀನಿಕ್‌್ಸ ಪಕ್ಷಿಯಂತೆ ಎದ್ದು ಬಂದ ಆರ್‌ಸಿಬಿ ಆಟಗಾರರು 6 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ.

`ನಾನು ಆರಂಭಿಕ ಸೀಸನ್‌ನಲ್ಲಿ ಬೆಂಗಳೂರು ತಂಡಕ್ಕೆ ಬಿಡ್‌ ಮಾಡಿದ್ದಾಗ ಹಾಗೂ ವಿರಾಟ್‌ ಕೊಹ್ಲಿ ಅವರನ್ನು ಖರೀದಿಸಿದಾಗ ನಾನು ಇದಕ್ಕಿಂದ ಸರಿಯಾದ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು. ಆದರೆ ಈಗ ಅದೇ ಮನಸ್ಸು ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ ಎಂದು ಹೇಳುತ್ತಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ತನ್ನ ಮಾಜಿ ತಂಡಕ್ಕೆ ವಿಜಯ್‌ ಮಲ್ಯ ಶುಭಕೋರಿದ್ದಾರೆ.

RELATED ARTICLES

Latest News