Thursday, November 21, 2024
Homeರಾಜ್ಯಜೀವಬೆದರಿಕೆ ಹಾಕಿದ್ರಾ ಕೇಂದ್ರ ಸಚಿವ ಹೆಚ್ಡಿಕೆ..? ಉದ್ಯಮಿಯಿಂದ ದೂರು ದಾಖಲು

ಜೀವಬೆದರಿಕೆ ಹಾಕಿದ್ರಾ ಕೇಂದ್ರ ಸಚಿವ ಹೆಚ್ಡಿಕೆ..? ಉದ್ಯಮಿಯಿಂದ ದೂರು ದಾಖಲು

Vijay Tata accuses HD Kumaraswamy, Ramesh Gowda of ₹50 crore Extortion demand and threat

ಬೆಂಗಳೂರು,ಅ.3– ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿಯವರ ವಿರುದ್ಧ ಬೆಂಗಳೂರಿನ ಪೊಲೀಸ್‌‍ ಠಾಣೆಯೊಂದರಲ್ಲಿ ಜೀವ ಬೆದರಿಕೆ ದೂರು ದಾಖಲಾಗಿದೆ. ಉದ್ಯಮಿ ವಿಜಯ್‌ ತಾತಾ ಎಂಬುವರು ದೂರು ದಾಖಲಿಸಿದ್ದಾರೆ. ವ್ಯವಹಾರಿಕವಾಗಿ ತಾವು ಮುನ್ನಡೆ ಸಾಧಿಸಿದ್ದು, ತಮಗೆ ಕೇಂದ್ರ ಸಚಿವರು ಬೆದರಿಕೆ ಹಾಕಿದ್ದಾರೆ. ತಮಗೆ 50 ಕೋಟಿ ರೂ. ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಅದೇ ಹಣಕ್ಕಾಗಿ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ದೂರಿನಲ್ಲಿ ವಿಧಾನ ಪರಿಷತ್‌ ಸದಸ್ಯ ರಮೇಶ್‌ ಗೌಡ ಅವರ ಹೆಸರನ್ನೂ ಉಲ್ಲೇಖಿಸಿರುವ ಉದ್ಯಮಿ ವಿಜಯ್‌ ಟಾಟಾ, ರಮೇಶ್‌ ಗೌಡ ಅವರೂ ಕೂಡ ತಮಿಂದ ಹಣ ಕೀಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಬ್ಬರೂ ಜನಪ್ರತಿನಿಧಿಗಳಿಂದ ತಮನ್ನು ಹಾಗೂ ತಮ ಕುಟುಂಬವನ್ನು ಕಾಪಾಡಬೇಕು. ತಮಗೆ ರಕ್ಷಣೆ ಒದಗಿಸಬೇಕು ಎಂದು ಅವರು ದೂರಿನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಅ.2ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕುಮಾರಸ್ವಾಮಿಯವರ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದ ವಿಜಯ್‌ ಟಾಟಾ, ಅದೇ ದಿನ ಅಮೃತ ಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ಖಾಸಗಿ ಮಾಧ್ಯಮವೊಂದರಲ್ಲಿ ಪ್ರಸಾರವಾದ ವಿಜಯ್‌ ಟಾಟಾ ಅವರ ಸುದ್ದಿಗೋಷ್ಠಿಯ ವಿಡಿಯೋ ಕ್ಲಿಪ್‌ನಲ್ಲಿ, ವಿಜಯ್‌ ತಾತಾ ಅವರು ನೇರವಾಗಿ ರಮೇಶ್‌ ಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದಾರೆ.

ಆ. 24ರ ರಾತ್ರಿ ತಮ ಮನೆಗೆ ಬಂದಿದ್ದ ರಮೇಶ್‌ ಗೌಡ, ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ನಿಖಿಲ್‌ ಕುಮಾರಸ್ವಾಮಿಗೆ ಚನ್ನಪಟ್ಟಣ ಟಿಕೆಟ್‌ ಫೈನಲ್‌ ಎಂದು ರಮೇಶ್‌ ಗೌಡ ಹೇಳಿದ್ದರು. ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದ್ದರು ಎಂದು ವಿಜಯ್‌ ತಾತಾ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ, ರಮೇಶ್‌ ಗೌಡರ ಮೊಬೈಲಿಗೆ ಕುಮಾರಸ್ವಾಮಿಯವರ ಫೋನ್‌ ಕಾಲ್‌ ಬಂತು. ಕೆಲ ಹೊತ್ತು ರಮೇಶ್‌ ಗೌಡರ ಜೊತೆಗೆ ಮಾತುಕತೆ ನಡೆಸಿದ ನಂತರ ತಮ ಜೊತೆಗೂ ಕುಮಾರಸ್ವಾಮಿ ಮಾತುಕತೆ ನಡೆಸಿದರು. ಆಗ ಸಂದರ್ಭದಲ್ಲಿಯೇ ಹಣಕಾಸು ಬೇಡಿಕೆ ಬಂದಿದ್ದಾಗಿ ವಿಜಯ್‌ ತಾತಾ ಅವರು ಹೇಳಿರುವಂತೆ ಭಾಸವಾಗುತ್ತದೆ.

ಅದಾದ ಬಳಿಕ ನನಗೆ ಹಣಕ್ಕಾಗಿ ಒತ್ತಾಯ ಮಾಡಲಾಯಿತು. ಆದರೆ, ನಾನು ಅಷ್ಟೊಂದು ಹಣ ನನ್ನ ಕೈಯ್ಯಲ್ಲಿ ಕೊಡಲಾಗುವುದಿಲ್ಲ. ನಾನೂ ಸ್ವಲ್ಪ ಸಮಸ್ಯೆಯಲ್ಲಿದ್ದೇನೆ ಎಂದು ತಿಳಿಸಿದೆ. ಆದರೆ, ಅವರು ನನಗೆ ಪದೇ ಪದೇ ಹಣಕ್ಕಾಗಿ ಬೇಡಿಕೆಯಿಟ್ಟು , ಕಡೆಗೆ ಬೆದರಿಕೆ ಹಾಕಿದ್ದಾರೆ ಎಂದು ವಿಜಯ್‌ ತಾತಾ ಅವರು ಆರೋಪಿಸಿದ್ದಾರೆ.

ಜೆಡಿಎಸ್‌‍ ಮುಖಂಡ ರಮೇಶ್‌ ಗೌಡ ನಮ ಮನೆಗೆ ಬಂದಿದ್ದರು. ನಿಖಿಲ್‌ ಚನ್ನಪಟ್ಟಣ ಉಪ ಚುನಾವಣೆ ನಿಲ್ಲುತ್ತಿದ್ದಾರೆ ಎಂದಿದ್ದರು. ಅದೇ ವೇಳೆ, ಹೆಚ್ಡಿ ಕುಮಾರಸ್ವಾಮಿ ಕೂಡ ದೂರವಾಣಿ ಕರೆ ಮಾಡಿದ್ದರು. ಚುನಾವಣೆಗಾಗಿ 50 ಕೋಟಿ ರೂಪಾಯಿ ಹಣ ನೀಡುವಂತೆ ನನ್ನನ್ನು ಕೇಳಿದ್ದರು. ನಾನು ಹಣ ಕೊಡಲಾಗದು ಎಂದಿದ್ದಕ್ಕೆ ಕುಮಾರಸ್ವಾಮಿ ಕೋಪಿಸಿಕೊಂಡಿದ್ದರು.

ಹಣ ಕೊಡುವುದಿಲ್ಲ ಎಂದಿದ್ದಕ್ಕೆ, ನಿಮ ಪ್ರಾಜೆಕ್ಟ್‌ ಕಂಪ್ಲೀಟ್‌ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ದೇವಸ್ಥಾನ ಕಟ್ಟಲು ರಮೇಶ್‌ ಗೌಡ ಕೂಡ 5 ಕೋಟಿ ರೂಪಾಯಿ ಕೇಳಿದ್ದರು. ತುಂಬಾ ಕಷ್ಟವಿದೆ ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಅಂದಿದ್ದೆ. 1 ವಾರದಿಂದ ರಮೇಶ್‌ ಗೌಡ ಕಾಲ್‌, ಮೆಸೇಜ್‌ ಮಾಡುತ್ತಿದ್ದರು. 2019ರ ಚುನಾವಣೆಯಲ್ಲೂ ಅವರಿಗಾಗಿ ತುಂಬಾ ಖರ್ಚು ಮಾಡಿದ್ದೆವು ಎಂದು ವಿಜಯ್‌ ಟಾಟ ಹೇಳಿದ್ದಾರೆ.

RELATED ARTICLES

Latest News