Monday, September 1, 2025
Homeರಾಜ್ಯಧರ್ಮಸ್ಥಳದ ವಿರುದ್ದ ವ್ಯವಸ್ಥಿತ ಪಿತೂರಿದಾರರನ್ನು ಮಟ್ಟ ಹಾಕಲು ವಿಜಯೇಂದ್ರ ಆಗ್ರಹ

ಧರ್ಮಸ್ಥಳದ ವಿರುದ್ದ ವ್ಯವಸ್ಥಿತ ಪಿತೂರಿದಾರರನ್ನು ಮಟ್ಟ ಹಾಕಲು ವಿಜಯೇಂದ್ರ ಆಗ್ರಹ

Vijayendra demands to eliminate systematic conspirators against Dharmasthala

ಬೆಂಗಳೂರು,ಸೆ.1- ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ವ್ಯವಸ್ಥಿತ ಷಡ್ಯಂತ್ರ ನಡೆಸಿರುವ ದುಷ್ಟಶಕ್ತಿಗಳು ಸಂಹಾರ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ಯಾವ ಶಕ್ತಿಗಳು ವ್ಯವಸ್ಥಿತ ಪಿತೂರಿ ನಡೆಸಿದ್ದಾರೋ ಅವರು ಸಂಹಾರ ಆಗಲೇಬೇಕು. ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಿಜೆಪಿ ಹೋರಾಟ ಮತ್ತಷ್ಟು ತೀವ್ರವಾಗಲಿದೆ ಎಂದು ಎಚ್ಚರಿಸಿದರು.

ಧರ್ಮಸ್ಥಳದ ವಿರುದ್ದ ಷಡ್ಯಂತ್ರ ರೂಪಿಸಿ ಅಪಪ್ರಚಾರ ಮಾಡಿದವರನ್ನು ಮಟ್ಟ ಹಾಕಬೇಕು ಎಂಬುದು ನಮ ಅಪೇಕ್ಷ. ಅಪಪ್ರಚಾರಗಳಿಗೆ ಇತಿಶ್ರೀ ಹಾಡಬೇಕು ಎಂದರು. ಕಿಡಿಗೇಡಿಗಳು ಜಾತಿ, ಧರ್ಮದ ಮೂಲಕ ತಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಇವರ ಅಪಪ್ರಚಾರದಿಂದಾಗಿ ಕೋಟ್ಯಾಂತರ ಭಕ್ತರು ಕಣ್ಣೀರು ಹಾಕ್ತಿದ್ದಾರೆ. ಇದಕ್ಕೆ ಇತಿಶ್ರೀಹಾಡಲು ಧರ್ಮಸ್ಥಳ ಚಲೋ ಹಮಿಕೊಂಡಿದ್ದೇವೆ ಎಂದು ಹೇಳಿದರು.

ಬಿಜೆಪಿಯ ಪ್ರತಿಭಟನೆಯನ್ನು ರಾಜಕೀಯ ಎಂದ ಕಾಂಗ್ರೆಸ್‌‍ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ವೇದಿಕೆಯಲ್ಲಿ ಅವರ ಆರೋಪಗಳಿಗೆ ಉತ್ತರ ಕೊಡುತ್ತೇವೆ ಎಂದು ಹೇಳಿದರು.

RELATED ARTICLES

Latest News