Wednesday, April 2, 2025
Homeಕ್ರೀಡಾ ಸುದ್ದಿ | Sports"ವಿನೇಶ್‌ ನೀನು ಚಾಂಪಿಯನ್ನರ ಚಾಂಪಿಯನ್‌" : ಧೈರ್ಯ ತುಂಬಿದ ಪ್ರಧಾನಿ ಮೋದಿ

“ವಿನೇಶ್‌ ನೀನು ಚಾಂಪಿಯನ್ನರ ಚಾಂಪಿಯನ್‌” : ಧೈರ್ಯ ತುಂಬಿದ ಪ್ರಧಾನಿ ಮೋದಿ

ನವದೆಹಲಿ,ಆ.7– ಅರ್ಹತಾ ಮಾನದಂಡಕ್ಕಿಂತಲೂ ಸಣ್ಣಪ್ರಮಾಣದ ದೇಹತೂಕ ಹೆಚ್ಚಳದಿಂದಾಗಿ ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶ್‌ ಫೋಗಟ್‌ರನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಚಾಂಪಿಯನ್ನರ ಚಾಂಪಿಯನ್‌ ಎಂದು ಬಣ್ಣಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿಯವರು ಫೋಗಟ್‌ ಪ್ರತಿಯೊಬ್ಬ ಭಾರತೀಯರಿಗೆ ಯಾವಾಗಲೂ ಹೆಮೆ ಮತ್ತು ಸ್ಫೂರ್ತಿ ಎಂದು ಹೇಳಿದ್ದಾರೆ.

ಇಂದಿನ ಹಿನ್ನೆಡೆ ನೋವು ತಂದಿದೆ. ಆದರೆ ಹತಾಶೆಯನ್ನು ವ್ಯಕ್ತಪಡಿಸಲು ಪದಗಳು ಸಾಲುವುದಿಲ್ಲ. ಅದೇ ಸಮಯದಲ್ಲಿ ಫೋಗಟ್‌ ದೃಢಚಿತ್ತವನ್ನು ಹೊಂದಿರುತ್ತಾರೆ ಎಂದು ನಾನು ಭಾವಿಸುತ್ತೇನೆ.

ಸವಾಲುಗಳನ್ನು ಎದುರಿಸುವುದು ಸದಾಕಾಲ ನಿಮ ಸ್ವಭಾವವಾಗಿತ್ತು. ದೃಢತೆಯಿಂದ ವಾಪಸ್‌‍ ಬನ್ನಿ. ನಾವು ನಿಮೊಂದಿಗಿದ್ದೇವೆ ಎಂದು ಧೈರ್ಯ ಹೇಳಿದ್ದಾರೆ.

RELATED ARTICLES

Latest News