ಪರ್ತ್, ನ.24- ಕಾಂಗರೂ ನಾಡಿನಲ್ಲಿ ನಾನು ಎಂದೆಂದಿಗೂ ಕಿಂಗ್ ಎಂಬ ಮಾತನ್ನು ವಿರಾಟ್ ಕೊಹ್ಲಿ ಮತ್ತೊಮೆ ಸಾಬೀತು ಪಡಿಸಿದ್ದಾರೆ. ಪರ್ತ್ ನಲ್ಲಿ ನಡೆಯುತ್ತಿರುವ ಟೆಸ್ಟ್ ನ ಪ್ರಥಮ ಇನಿಂಗ್‌್ಸ ನಲ್ಲಿ ಲಘುವಾಗಿ (5 ರನ್) ವಿಕೆಟ್ ಒಪ್ಪಿಸಿದ್ದ ಮಾಜಿ ನಾಯಕ ದ್ವಿತೀಯ ಇನಿಂಗ್‌್ಸ ನಲ್ಲಿ ಉತ್ತಮ ಶಾಟ್‌್ಸ ಗಳನ್ನು ಬಾರಿಸುವ ಮೂಲಕ ಪ್ರೇಕ್ಷಕರ ಮನರಂಜಿಸಿದರು.
ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದ ನಂತರ ತಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಕಿಂಗ್ ಕೊಹ್ಲಿ , ಆಸೀಸ್ ವೇಗಿ ಮಿಚೆಲ್ ಸ್ಟ್ರಾಕ್ ಅವರ ಬೌಲಿಂಗ್ ನಲ್ಲಿ ಅಪರ್ ಕಟ್ ಮೂಲಕ ಸಿಕ್ಸರ್ ಸಿಡಿಸಿದ್ದರು. ಆದರೆ ಈ ಅಕ್ರಮಣಕಾರಿ ಒಡೆತದಿಂದಾಗಿ ಚೆಂಡು ಬೌಂಡರಿ ಆಚೆ ಬೌನ್ಸ್ ಆಗಿ ಅಲ್ಲೇ ನಿಂತಿದ್ದ ಸೆಕ್ಯೂರಿಟಿ ಗಾರ್ಡ್ ಗಾಯಗೊಂಡಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಬೌಂಡರಿ ಗೆರೆ ಬಳಿಯೇ ಕುಳಿತುಕೊಂಡು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರತ್ತಲೇ ಹೆಚ್ಚು ಗಮನ ಹರಿಸಿದ್ದರಿಂದ ಚೆಂಡು ತನಗೆ ಬಡಿಯುತ್ತದೋ ಎಂಬ ಅರಿವು ಆತನಿಗೆ ಇರಲಿಲ್ಲ.
ಚೆಂಡು ಬಿದ್ದ ರಭಸಕ್ಕೆ ಸೆಕ್ಯುರಿಟಿ ಗಾರ್ಡ್ ಅಲ್ಲೇ ಕುಸಿದುಬಿದ್ದರು. ತಕ್ಷಣ ಅಲ್ಲಿದ್ದ ಫಿಸಿಯೋಗಳು ಆತನ ಬಳಿಗೆ ತೆರಳಿ ಪರೀಕ್ಷಿಸಿದರು. ಆದರೆ ಅದು ಗಂಭೀರವಾದ ಗಾಯವೆಂಬುದು ತಿಳಿಯಿತು. ಆದರೆ ಕಾವಲುಗಾರನಿಗೆ ಗಾಯವಾಗಿದ್ದರಿಂದ ವಿರಾಟ್ ಕೊಹ್ಲಿ ಕೂಡ ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥೇನ್ ಲಾಯನ್ ಅವರು ಕೂಡ ಸೆಕ್ಯುರಿಟಿ ಗಾರ್ಡ್ ನ ಆರೋಗ್ಯ ವಿಚಾರಿಸಿದರು. ಇದರಿಂದಾಗಿ ಕೆಲವು ಸಮಯಗಳ ಕಾಲ ಆಟವನ್ನು ಸ್ಥಗಿತಗೊಳಿಸಲಾಗಿತ್ತು.
ವಿರಾಟ್ ಕೊಹ್ಲಿ ಅವರು ಈ ರೀತಿಯ ಶಾಟ್ ಆಡುತ್ತಾರೆ ಎಂದು ಯಾರೂ ಅಂದಾಜಿಸಿರಲಿಲ್ಲ. ಆದರೆ ಬ್ಯಾಟ್ ಗೆ ಚೆಂಡು ಸರಿಯಾಗಿ ದೊರಕಿದ ಕಾರಣ ಅಪರ್ ಕಟ್ ಮೂಲಕ ಸಿಕ್ಸರ್ ಬಾರಿಸಿದ್ದರು. ಮೊದಲ ಇನಿಂಗ್ಸ್ ನಲ್ಲಿ ಬಹುಬೇಗ ವಿಕೆಟ್ ಒಪ್ಪಿಸಿದ್ದ ವಿರಾಟ್ ಕೊಹ್ಲಿ , ಎರಡನೇ ಇನಿಂಗ್ಸ್ ನಲ್ಲಿ ತಮ ನೈಜ ಆಟ ಪ್ರದರ್ಶಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಈ ನಡುವೆ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ತಮ ಅರ್ಧಶತಕವನ್ನು ವಿರಾಟ್ ಪೂರೈಸಿ ಅಭಿಮಾನಿಗಳ ಗಮನ ಸೆಳೆದರು.