ಬೆಂಗಳೂರು, ಅ. 25- ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಒಡಿಐ ವಿಶ್ವಕಪ್ ಟೂರ್ನಿಯ ಮುಂದಿನ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ಶತಕವನ್ನು ಸರಿಗಟ್ಟಲಿದ್ದಾರೆ ಎಂದು ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‍ನಲ್ಲಿರುವ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 103 ರನ್ ಗಳಿಸುವ ಮೂಲಕ 48ನೇ ಒಡಿಐ ಶತಕವನ್ನು ಪೂರ್ಣಗೊಳಿಸಿದ್ದರು. ನ್ಯೂಜಿಲ್ಯಾಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಚೇಸಿಂಗ್ ಮಾಸ್ಟರ್ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ ಸೆಂಚುರಿಗಳ ದಾಖಲೆಯನ್ನು ಸರಿಗಟ್ಟುತ್ತಾರೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು.
ಅದಕ್ಕೆ ತಕ್ಕಂತೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ವಿರಾಟ್ ಕೊಹ್ಲಿ 95 ರನ್ ಗಳಿಸಿದ್ದಾಗ ಸಿಕ್ಸರ್ ಬಾರಿಸಿ ಶತಕ ಸಿಡಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು, ಆದರೆ ಗ್ಲೆನ್ ಫಿಲಿಪ್ಸ್‍ಗೆ ಕ್ಯಾಚಿತ್ತು ಸಚಿನ್ ದಾಖಲೆ ಸರಿಗಟ್ಟುವ ಅವಕಾಶ ತಪ್ಪಿಸಿಕೊಂಡರು.
ಸೆಲೆಬ್ರೆಟಿಗಳಿಗೆ ಸಂಕಷ್ಟ ತಂದಿಟ್ಟ ಹುಲಿ ಉಗುರು
ಇನ್ನೆರಡು ಪಂದ್ಯಗಳಲ್ಲಿ ಕೊಹ್ಲಿ 49ನೇ ಶತಕ ಸಿಡಿಸುತ್ತಾರೆ:
2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 5 ಪಂದ್ಯಗಳಿಂದ 354 ರನ್‍ಗಳನ್ನು ಬಾರಿಸಿ ಉತ್ತಮ ಫಾರ್ಮ್‍ನಲ್ಲಿದ್ದು , ಮುಂಬರುವ ಇಂಗ್ಲೆಂಡ್ ಅಥವಾ ಶ್ರೀಲಂಕಾ ವಿರುದ್ಧ ಕೊಹ್ಲಿ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ 49 ಸೆಂಚುರಿ ದಾಖಲೆಯನ್ನು ಸರಿಗಟ್ಟಲಿದ್ದಾರೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ 50ನೇ ಶತಕ ಗಳಿಸುತ್ತಾರೆ:
ನವೆಂಬರ್ 5 ರಂದು ವಿರಾಟ್ ಕೊಹ್ಲಿ ಅವರು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅಂದು ನಡೆಯಲಿರುವ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ 50ನೇ ಒಡಿಐ ಶತಕ ಪೂರೈಸಿ ದಾಖಲೆ ನಿರ್ಮಿಸುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕೊಡಲಿದ್ದಾರೆ ಎಂದು ಸನ್ನಿ ಹೇಳಿದ್ದಾರೆ.
`ವಿರಾಟ್ ಕೊಹ್ಲಿ ಕೋಲ್ಕತ್ತಾ ಈಡನ್ ಗಾರ್ಡನ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಪಂದ್ಯದಲ್ಲಿ 50ನೇ ಒಡಿಐ ಶತಕ ಸಿಡಿಸಲಿದ್ದಾರೆ. ಅವರು ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉತ್ತಮ ಉಡುಗೊರೆ ಕೊಡಲು ಇದಕ್ಕಿಂತ ಕ್ರೀಡಾಂಗಣ ಸಿಗಲಾರದು. ಅದಕ್ಕೂ ಮುನ್ನ ನಡೆಯುವ 2 ಪಂದ್ಯಗಳಲ್ಲಿ ತಮ್ಮ 49ನೇ ಒಡಿಐ ಶತಕ ಪೂರೈಸಿ ಕೋಲ್ಕತ್ತಾ ಈಡನ್‍ಗಾರ್ಡನ್‍ಗೆ ಕೊಹ್ಲಿ ಹೋಗಲಿದ್ದು ಅಲ್ಲಿ ಶತಕ ಸಿಡಿಸಿ ಅಭಿಮಾನಿಗಳಿಂದ ಗೌರವ ಸ್ವೀಕರಿಸಲಿದ್ದಾರೆ ಎಂದಿದ್ದಾರೆ.