ಅಡಿಲೇಡ್, ಡಿ.4– ಆಸ್ಟ್ರೇಲಿಯಾದ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಕಾಂಗರೂ ಬೌಲರ್ ಗಳ ಎದೆಯಲ್ಲಿ ಭಯ ಹುಟ್ಟಿಸಿದೆ ಎಂದು ಆಸೀಸ್ ನ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ನಡೆಯಲಿದ್ದು ಈ ನಿಮಿತ್ತ ಸುದ್ದಿಗಾರರೊಂದಿಗೆ ಮೈಕಲ್ ಕ್ಲಾರ್ಕ್ ಅವರು ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
`ಪರ್ತ್ ಟೆಸ್ಟ್ ಪಂದ್ಯ ಸೋತಿರುವುದು ಒಂದು ಕಡೆ ಇರಲಿ, ಈ ಪಂದ್ಯದಲ್ಲಿ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸುವ ಮೂಲಕ ಮತ್ತೆ ಲಯ ಕಂಡುಕೊಂಡಿರುವುದು ಆಸ್ಟ್ರೇಲಿಯಾದ ಬೌಲರ್ ಗಳಿಗೆ ಹೆದರಿಕೆ ಮೂಡಿಸಿದೆ. ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತದ ಮಾಜಿ ನಾಯಕನ ಬ್ಯಾಟ್ ನಿಂದ ರನ್ ಗಳ ಹೊಳೆಯೇ ಹರಿದು ಬರಲಿದ್ದು ಲೀಡಿಂಗ್ ಸ್ಕೋರರ್’ ಆಗಲಿದ್ದಾರೆ ಎಂದು ಕ್ಲಾರ್ಕ್ ಭವಿಷ್ಯ ನುಡಿದಿದ್ದಾರೆ.
ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ ವಿರಾಟ್:
ಭಾರತದ ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರನ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ನ ಪ್ರಥಮ ಇನಿಂಗ್ಸ್ ನಲ್ಲಿ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿ ಅಭಿಮಾನಿಗಳ ನಿರಾಸೆಗೊಳಿಸಿದ್ದರು.
ಆದರೆ ಎರಡನೇ ಇನಿಂಗ್‌್ಸ್ಸ ನಲ್ಲಿ ತಮ ಎಂದಿನ ಬ್ಯಾಟಿಂಗ್ ಲಯ ಕಂಡುಕೊಂಡ ಕ್ಲಾಸ್ ಆಟಗಾರ, 8 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ಸಹಿತ ಶತಕ ಸಿಡಿಸುವ ಮೂಲಕ ತಂಡವು ಬೃಹತ್ ಮೊತ್ತ ಕಲೆ ಹಾಕಲು ಸಹಕರಿಸಿದ್ದರು. ಇದರಿಂದ ಭಾರತ 295 ರನ್ ಗಳ ಬೃಹತ್ ಗೆಲುವು ಸಾಧಿಸಲು ನೆರವಾಗಿತ್ತು ಎಂದು ಕ್ಲಾರ್ಕ್ ತಿಳಿಸಿದ್ದಾರೆ.
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಮಾರ್ನಸ್ ಲಾಬುಸೇನ್ ಅವರು ಶತಕ ಸಿಡಿಸುತ್ತಾರೆ. ಆದರೆ ಇದು ಹಗಲು ರಾತ್ರಿ ಪಂದ್ಯವಾಗಿರುವುದರಿಂದ ಆಸ್ಟ್ರೇಲಿಯಾದ ಪರ ಸ್ಟೀವನ್ ಸಿತ್ ಅವರು ಅತಿ ಹೆಚು ರನ್ ಗಳಿಸುತ್ತಾರೆ ಎಂದು ಮೈಕಲ್ ಕ್ಲಾರ್ಕ್ ತಿಳಿಸಿದ್ದಾರೆ.