Wednesday, September 11, 2024
Homeಕ್ರೀಡಾ ಸುದ್ದಿ | Sportsಶಿಖರ್‌ ಧವನ್‌ ವಿದಾಯದ ಕುರಿತು ಕೊಹ್ಲಿ ಭಾವನಾತ್ಮಕ ಸಂದೇಶ

ಶಿಖರ್‌ ಧವನ್‌ ವಿದಾಯದ ಕುರಿತು ಕೊಹ್ಲಿ ಭಾವನಾತ್ಮಕ ಸಂದೇಶ

Virat Kohli's Unmissable Post As Shikhar Dhawan

ಬೆಂಗಳೂರು, ಆ. 25– ನಿನ್ನೆ ತಮ ಸುದೀರ್ಘ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿರುವ ಟೀಮ್‌ ಇಂಡಿಯಾ ಆಟಗಾರ ಹಾಗೂ ಗೆಳೆಯ ಶಿಖರ್‌ ಧವನ್‌ಗಾಗಿ ವಿರಾಟ್‌ ಕೊಹ್ಲಿ ಭಾವನಾತಕ ಸಂದೇಶ ಕಳುಹಿ ಸಿದ್ದು, ಭಾರತೀಯ ಕ್ರಿಕೆಟ್‌ ಜಗತ್ತಿನಲ್ಲಿ ನಿಮ ಪರಂಪರೆ ಶಾಶ್ವತ ಎಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಅವರು ಬಾಲ್ಯದಿಂದಲೂ ಒಟ್ಟಿಗೆ ಕ್ರಿಕೆಟ್‌ ಮೈದಾನದಲ್ಲಿ ಕ್ರೀಸ್‌‍ ಹಂಚಿಕೊಂಡಿದ್ದರೆ, ಕೊಹ್ಲಿ ಅವರ ನಾಯಕತ್ವದಲ್ಲೇ ಧವನ್‌ ಅವರು ತಮ ಕ್ರಿಕೆಟ್‌ ಜೀವನದ ಅಂತಿಮ ಪಂದ್ಯವಾಡಿದ್ದರು.

ನಿಮ್ಮ ಪರಂಪರೆ ಶಾಶ್ವತ: ವಿರಾಟ್‌ ಕೊಹ್ಲಿ
ತಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಿಯ ಗೆಳೆಯನಿಗೆ ಸಂದೇಶ ಕಳುಹಿಸಿರುವ ಕ್ಲಾಸ್‌‍ ಆಟಗಾರ ವಿರಾಟ್‌ ಕೊಹ್ಲಿ , `ಶಿಖರ್‌ ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿ ದಾಗಿನಿಂದಲೂ ಭಯಮುಕ್ತ ಪ್ರದರ್ಶನ ನೀಡಿದ್ದರಿಂದಲೇ ನೀವು ಭಾರತ ತಂಡದ ಅತ್ಯಂತ ಪ್ರಭಾವಕಾರಿ ಆರಂಭಿಕ ಆಟಗಾರರಾಗಿ ಗುರುತಿಸಿ ಕೊಂಡಿದ್ದೀರಿ, ನೀವು ನಮನ್ನು ಉತ್ತೇಜಿಸಲು ಹಲವು ಸರಣೀಯ ಪ್ರದರ್ಶನ ನೀಡಿದ್ದೀರಿ, ಇನ್ನು ಮುಂದೆ ನಾವು ನಿಮ ತಾಳೆ, ಕ್ರೀಡಾ ಮನೋಭಾವ ಹಾಗೂ ನಿಮ ವ್ಯಕ್ತಿತ್ವ ಬಿಂಬಿಸುತ್ತಿದ್ದ ನಗುವನ್ನು ಕಳೆದುಕೊಳ್ಳಲಿದ್ದೇವೆ.

ಆದರೆ ನಿಮ ಪರಂಪರೆ ಶಾಶ್ವತವಾಗಿರುತ್ತದೆ. ನಿಮ ಅನೇಕ ಸರಣೀಯ ಪ್ರದರ್ಶನ ಹಾಗೂ ನೆನಪುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತವೆ.ಆಫ್‌ಫೀಲ್‌್ಡನ ನಿಮ ಮುಂದಿನ ಜೀವನಕ್ಕೆ ಶುಭವಾಗಲಿ ಗಬ್ಬರ್‌’ ಎಂದು ಕೊಹ್ಲಿ ತಮ ಎಕ್‌್ಸ ಗೋಡೆ ಮೇಲೆ ಬರೆದುಕೊಂಡಿದ್ದಾರೆ.

ಮೋಡಿ ಮಾಡಿದ್ದ ಧವನ್‌- ವಿರಾಟ್‌ ಜೋಡಿ:
2010ರಿಂದ ಭಾರತ ತಂಡದ ಪ್ರಮುಖ ಆಟಗಾರರಾಗಿರುವ ಶಿಖರ್‌ ಧವನ್‌ ಹಾಗೂ ವಿರಾಟ್‌ಕೊಹ್ಲಿ ಅವರು ತಮಮ ಜುಗಲ್ಬಂದಿಯಲ್ಲಿ ತಂಡಕ್ಕೆ ಹಲವು ಸರಣೀಯ ಗೆಲುವು ತಂದುಕೊಟ್ಟಿದ್ದಾರೆ. ಎದುರಾಳಿ ತಂಡದ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಬ್ಯಾಟ್ ಬೀಸುತ್ತಿದ್ದ ಈ ಜೋಡಿಯು 221 ಪಂದ್ಯಗಳಲ್ಲಿ 20,780 ರನ್‌ಗಳನ್ನು ಕಲೆಹಾಕಿದ್ದಾರೆ.

ಕೊಹ್ಲಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದರು:
ಆಫ್‌ಫೀಲ್ಡ್ ನಲ್ಲೂ ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಉತ್ತಮ ಬಾಂಧವ್ಯ ಹೊಂದಿ ದ್ದರು. ಒಮೆ ಧವನ್‌ ಅವರೇ ಫಾರ್ಮ್‌ ಕಳೆದು ಕೊಂಡಿದ್ದಾಗ , ನನ್ನ ಲಯವನ್ನು ಮರಳಿ ಪಡೆಯುವಲ್ಲಿ ನನಗೆ ನೆರವಾದ ಮೊದಲ ವ್ಯಕ್ತಿಯೇ ಕೊಹ್ಲಿ. ಅವರು ನನ್ನನ್ನು ಉತ್ತೇಜಿಸುವ ಮೂಲಕ ಫಾರ್ಮ್‌ ಕಂಡು ಕೊಳ್ಳಲು ಸೂಕ್ತ ಸಲಹೆ ನೀಡಿ ದ್ದಾರೆ ಎಂದು ಧವನ್‌ ಈ ಹಿಂದೆ ಸಂದರ್ಶನದಲ್ಲಿ ತಿಳಿಸಿದ್ದರು.

RELATED ARTICLES

Latest News