Sunday, September 15, 2024
Homeಕ್ರೀಡಾ ಸುದ್ದಿ | Sportsಮನುಭಾಕರ್‌ಗೆ ಆ ಕ್ರಿಕೆಟಿಗರೇ ಸ್ಫೂರ್ತಿಯಂತೆ

ಮನುಭಾಕರ್‌ಗೆ ಆ ಕ್ರಿಕೆಟಿಗರೇ ಸ್ಫೂರ್ತಿಯಂತೆ

Manubhakar is inspired by those cricketers

ನವದೆಹಲಿ, ಆ. 25– ಭಾರತ ಕ್ರಿಕೆಟ್‌ ರಂಗದ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಹಾಗೂ ವಿರಾಟ್‌ ಕೊಹ್ಲಿ ಅವರನ್ನು ಭೇಟಿ ಅವರ ವೃತ್ತಿ ಜೀವನದ ಅವಿಸರಣೀಯ ಕ್ಷಣಗಳ ಬಗ್ಗೆ ಮಾಹಿತಿ ಪಡೆಯಬೇಕೆಂಬ ಹೆಬ್ಬಯಕೆ ಹೊಂದಿದ್ದೇನೆ ಎಂದು ಭಾರತದ ಮಹಿಳಾ ಶೂಟರ್‌ ಮನುಭಾಕರ್‌ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ನಿಮ ಮೇಲೆ ಸಾಕಷ್ಟು ಪ್ರಭಾವ ಬೀರಿರುವ ಕ್ರೀಡಾಪಟುಗಳು ಯಾರು ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಮನುಭಾಕರ್ ತಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಉಸೇನ್‌ ಬೋಲ್ಟ್ ಸ್ಫೂರ್ತಿ:
`ಬಹುಶಃ ನನ್ನ ಮೇಲೆ ಪ್ರಭಾವ ಬೀರಿರುವ ಕೆಲವು ಕ್ರೀಡಾಪಟುಗಳ ಹೆಸರನ್ನು ಸೂಚಿಸಬಹುದು. ಅದರಲ್ಲೂ ಜಮೈಕಾದ ಓಟಗಾರ ಉಸೇನ್‌ ಬೋಲ್‌್ಟ ಅವರು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದಾರೆ. ನಾನು ಅವರ ಸಾಕಷ್ಟು ಪುಸ್ತಕಗಳು ಹಾಗೂ ಲೇಖನಗಳನ್ನು ಓದುವ ಮೂಲಕ ಅವರ ಕ್ರೀಡಾಲೋಕದ ಸಾಕಷ್ಟು ವಿಷಯ ತಿಳಿದುಕೊಂಡಿ ದ್ದೇನೆ. ಭಾರತದ ಕ್ರೀಡಾಪಟುಗಳನ್ನು ಉಲ್ಲೇಖಿಸುವು ದಾದರೆ ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಅವರೊಂದಿಗೆ ಕಾಲ ಕಳೆಯುವುದು ನಿಜಕ್ಕೂ ಹೆಮೆಯ ಸಂಗತಿ ಆಗಿದೆ’ ಎಂದು ಮನುಭಾಕರ್‌ ಹೇಳಿದ್ದಾರೆ.

ಭಾರತ ಮತ್ತಷ್ಟು ಪದಕ ಗೆಲ್ಲಲು ಸಹಕರಿಸುವೆ:
ಪ್ಯಾರಿಸ್‌‍ ಒಲಿಂಪಿಕ್‌್ಸನಲ್ಲಿ ಎರಡು ಕಂಚಿನ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿರುವ ಮನುಭಾಕರ್‌, ` ಕ್ರೀಡಾಪಟುವಾಗಿ ನಾನು ಇನ್ನೂ ಅನೇಕ ಕ್ರೀಡೆಗಳನ್ನು ಪ್ರತಿನಿಧಿಸಲು ಬಯಸುತ್ತೇನೆ. ಭಾರತವು ಒಲಿಂಪಿಕ್‌್ಸ ಅಥವಾ ಬೇರೆ ಯಾವುದೇ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಹೆಚ್ಚು ಪದಕ ಗೆಲ್ಲುವುದನ್ನು ನೋಡಲು ಬಯಸುತ್ತೇನೆ. ಅದಕ್ಕಾಗಿ ಯುವ ಅಥ್ಲೀಟ್‌ಗಳಿಗೆ ನನ್ನ ಬೆಂಬಲದೊಂದಿಗೆ ಜ್ಞಾನ ಹಾಗೂ ಅನುಭವ ಹಂಚಿಕೊಳ್ಳುತ್ತೇನೆ’ ಎಂದು ಮನುಭಾಕರ್‌ ಹೇಳಿದರು.

RELATED ARTICLES

Latest News