Friday, January 24, 2025
Homeಕ್ರೀಡಾ ಸುದ್ದಿ | Sports20 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಸೆಹ್ವಾಗ್‌ ದಂಪತಿ

20 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಸೆಹ್ವಾಗ್‌ ದಂಪತಿ

Virender Sehwag reportedly separates from wife Aarti

ಬೆಂಗಳೂರು,ಜ.24-ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ ಸೆಹ್ವಾಗ್‌ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ತಮ ಪತ್ನಿ ಆರತಿ ಆಹ್ಲಾವತ್‌ ಅವರಿಂದ 20 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಲು ಮುಂದಾಗಿದ್ದಾರೆ.

ಇನ್‌ಸ್ಟ್ರಾಗ್ರಾಮ್‌ನಲ್ಲಿ ವಿರೇಂದ್ರ ಸೆಹ್ವಾಗ್‌ ಮತ್ತು ಆರತಿ ಪರಸ್ಪರ ಅನ್‌ಫಾಲೋ ಮಾಡುವ ಮೂಲಕ ವಿವಾಹ ವಿಚ್ಛೇಧಕ್ಕೆ ಪುಷ್ಟಿ ನೀಡಿದ್ದಾರೆ. 2004ರಲ್ಲಿ ಆರತಿ ಅವರನ್ನು ವಿವಾಹವಾಗಿದ್ದ ಸೆಹ್ವಾಗ್‌ಗೆ ಆರ್ಯ ವೀರ್‌ ಮತ್ತು ವೇದಾಂತ್‌ ಎಂಬ ಪುತ್ರರಿದ್ದಾರೆ.

ವೀರೇಂದ್ರ ಸೆಹ್ವಾಗ್‌ ತಮ ಸಾಮಾಜಿಕ ಜಾಲತಾಣದಲ್ಲಿ ದೀಪಾವಳಿ ಆಚರಣೆಯ ಫೋಟೊಗಳನ್ನು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ತಮ ತಾಯಿಯೊಂದಿಗಿದ್ದಾರೆ. ಆದರೆ ಆರತಿಯವರು ಕಾಣಿಸಿಕೊಂಡಿಲ್ಲ.

ಎರಡು ವಾರಗಳ ಹಿಂದೆ ಸೆಹ್ವಾಗ್‌ ಕೇರಳದ ಪಾಲಕ್ಕಾಡ್‌ ವಿಶ್ವನಾಗ ಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದರ ಫೋಟೋಗಳನ್ನು ಕೂಡ ಇನ್‌ಸ್ಟ್ರಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲಿಯೂ ಕೂಡ ಆರತಿ ಕಾಣಿಸಿಕೊಂಡಿಲ್ಲ. ಹೀಗಾಗಿ ಸತಿ-ಪತಿ ಇಬ್ಬರೂ ವಿಚ್ಛೇದನಕ್ಕೆ ತೀರ್ಮಾನಿಸಿದ್ದಾರೆಂದು ರಾಷ್ಟ್ರೀಯ ಸುದ್ದಿ ವಾಹಿನಿ ವರದಿ ಮಾಡಿದ್ದಾರೆ.

ಈಗಾಗಲೇ ಇಬ್ಬರು ಹಲವಾರು ತಿಂಗಳನಿಂದಲೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ವೀರೇಂದ್ರ ಸೆಹ್ವಾಗ್‌ ಹಾಗೂ ಆರತಿ ಡಿವೋರ್ಸ್‌ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಕುರಿತು ವಿರೇಂದ್ರ ಸೆಹ್ವಾಗ್‌ ಅಥವಾ ಆರತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸೆಹ್ವಾಗ್‌ ಮತ್ತು ಆರತಿ ಪ್ರೀತಿಸಿ ಮದುವೆಯಾಗಿದ್ದರು. 2004ರಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ನಿವಾಸದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಇವರಿಬ್ಬರು ವಿವಾಹವಾಗಿದ್ದರು.

ಸೆಹ್ವಾಗ್‌ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿದ ನಂತರ ರಾಷ್ಟ್ರೀಯ ಡೋಪಿಂಗ್‌ ವಿರೋಧಿ ಏಜೆನ್ಸಿಯ ಡೋಪಿಂಗ್‌ ವಿರೋಧಿ ಮೇಲನವಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುವುದರ ಜೊತೆ ವಾಹಿನಿಗಳಲ್ಲಿ ಕ್ರಿಕೆಟ್‌ ನಿರೂಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

2004ರಲ್ಲಿ ವಿರೇಂದ್ರ ಸೆಹ್ವಾಗ್‌ ಹಾಗೂ ಆರತಿ ಮದುವೆ ನಡೆದಿತ್ತು. ಭಾರತ ತಂಡದ ಸ್ಫೋಟಕ ಬ್ಯಾಟ್‌್ಸಮನ್‌ ಆಗಿ ಮಿಂಚುತ್ತಿದ್ದ ಸಂದರ್ಭದಲ್ಲಿ ಸೆಹ್ವಾಗ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಸೆಹ್ವಾಗ್‌ ಮತ್ತಷ್ಟು ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರು. ಇದಾದ ಬಳಿಕ 2008ರಲ್ಲೂ ಸೆಹ್ವಾಗ್‌ ಎರಡನೇ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ್ದರು.

ಸೆಹ್ವಾಗ್‌ ದಾಂಪತ್ಯ ಜೀವನದಲ್ಲಿ ಬಿರುಕು ಅನ್ನೋ ಸುದ್ದಿ ಹಲವು ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ ತಂದಿದೆ. ಕಾರಣ ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರಲ್ಲಿ ಡಿವೋರ್ಸ್‌, ಬಿರುಕು ಹೆಚ್ಚಾಗುತ್ತಿದೆ ನಿಜ. ಆದರೆ 2000ನೇ ಇಸವಿ ಆಸುಪಾಸಿನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಕ್ರಿಕೆಟಿಗರು ಆನ್‌ ಫೀಲ್‌್ಡನಲ್ಲಿ ಮಾತ್ರವಲ್ಲ, ಆಫ್‌ ದಿ ಫೀಲ್ಡ್ ನಲ್ಲೂ ಆದರ್ಶವಾಗಿದ್ದರು.

ಇಷ್ಟೇ ಅಲ್ಲ, ಸೆಹ್ವಾಗ್‌ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ. ಸೆಹ್ವಾಗ್‌ ದಾಂಪತ್ಯ ಜೀವನದಲ್ಲಿ ಬಿರುಕು ಅನ್ನೋ ಮಾತುಗಳು ಕೇಳಿಬಂದ ಬೆನ್ನಲ್ಲೇ ಅಭಿಮಾನಿಗಳು ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News