Monday, January 6, 2025
Homeರಾಷ್ಟ್ರೀಯ | Nationalಚೀನಾದಲ್ಲಿ ವೈರಸ್‌‍ ಹಾವಳಿ, ಭಾರತ ಸರ್ಕಾರ ಅಲರ್ಟ್

ಚೀನಾದಲ್ಲಿ ವೈರಸ್‌‍ ಹಾವಳಿ, ಭಾರತ ಸರ್ಕಾರ ಅಲರ್ಟ್

Virus outbreak in China, Indian government on alert

ನವದೆಹಲಿ,ಜ.4– ಹೆಚ್‌ಎಂಪಿವಿ ಸೋಂಕು ಚೀನಾದಲ್ಲಿ ವ್ಯಾಪಕವಾಗಿದ್ದು, ಇದರ ಬೆನ್ನಲ್ಲೇ ಭಾರತದಲ್ಲೂ ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ಇಡಲಾಗಿದೆ. ಸದ್ಯಕ್ಕೆ ಭಾರತದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ಅತುಲ್‌ ಗೋಯಲ್‌, ಹೆಚ್‌ಎಂಪಿವಿ ವೈರಸ್‌‍ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಮಕ್ಕಳು ಹಾಗೂ ವೃದ್ಧರಲ್ಲಿ ಜ್ವರ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ದೇಶದಲ್ಲಿ 2024ರ ಡಿಸೆಂಬರ್‌ನಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗಿಲ್ಲ. ಪ್ರಸ್ತುತ ಪರಿಸ್ಥಿತಿ ಅಪಾಯಕಾರಿಯಾಗಿಲ್ಲ. ಒಂದೊಮೆ ಸಮಸ್ಯೆ ಉಲ್ಬಣಿಸಿದರೂ ನಮ್ಮ ಆಸ್ಪತ್ರೆಗಳಲ್ಲಿ ಅದಕ್ಕೆ ಬೇಕಾದಷ್ಟು ವ್ಯವಸ್ಥೆಗಳು ಲಭ್ಯವಿದೆ. ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಈ ವೈರಸ್‌‍ ಪ್ರಕರಣ ಪತ್ತೆಯಾಗಿಲ್ಲ. ಚಳಿಗಾಲದಲ್ಲಿ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದ ಆರೋಗ್ಯ ವಿಭಾಗ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಹೀಗಾಗಿ ಜನರು ಆತಂಕಪಡುವ ಅವಶ್ಯಕತೆ ಇಲ್ಲ.

ಚೀನಾದಲ್ಲಿ ಇನ್‌ ಫ್ಲೂಯೆನ್ಜಾ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತದಲ್ಲೂ ಇಂತಹ ಶೀತಜ್ವರ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನಿಗಾವಹಿಸಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ. ಜೊತೆಗೆ ಈ ಕುರಿತ ಮಾಹಿತಿ ನಿಯಮಿತವಾಗಿ ಪರಿಶೀಲಿಸಿ ನವೀಕರಿಸುತ್ತಿದೆ ಎಂದು ತಿಳಿಸಿದ್ದಾರೆ.

ಚೀನಾದ ಕೆಲವು ಭಾಗಗಳಲ್ಲಿ ಹ್ಯೂಮನ್‌ ಮೆಟಾ-ನ್ಯುಮೋ ವೈರಸ್‌‍ (ಎಚ್‌ಎಂಪಿವಿ) ಹರಡುವಿಕೆಯ ವರದಿಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ಆದರೆ ಈ ವಿಚಾರವಾಗಿ ಭಾರತೀಯರು ಯಾವುದೇ ಆತಂಕ ಪಡುವುದು ಬೇಡ ಎಂದು ಭಾರತೀಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾವು ದೇಶದೊಳಗೆ ಉಸಿರಾಟದ ಸಮಸ್ಯೆ ಇರುವವರ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್‌ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳವಿಲ್ಲ. ನಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕೂಡ ವರದಿಯಾಗಿಲ್ಲ. ಹಾಗಾಗಿ ಯಾವುದೇ ಅಲರ್ಟ್‌ ಬಗ್ಗೆ ಕಾರಣವೂ ಇಲ್ಲ ಎಂದು ಗೋಯೆಲ್‌ ತಿಳಿಸಿದ್ದಾರೆ.

ಅತ್ಯಂತ ಹಿರಿಯ ಮತ್ತು ಅತ್ಯಂತ ಕಿರಿಯ ವಯಸ್ಸಿನವರಲ್ಲಿ ಇದು ಸಾಮಾನ್ಯ ಜ್ವರ ರೀತಿಯ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಚಳಿಗಾಲದಲ್ಲಿ ಯಾವುದೇ ಸಂದರ್ಭದಲ್ಲಿ ಉಸಿರಾಟದ ಸೋಂಕುಗಳು ಹೆಚ್ಚಾಗುತ್ತವೆ.

ಇದಕ್ಕಾಗಿ ಸಾಮಾನ್ಯವಾಗಿ ನಮ ಆಸ್ಪತ್ರೆಗಳು ಅಗತ್ಯ ಸರಬರಾಜು ಮತ್ತು ಹಾಸಿಗೆಗಳೊಂದಿಗೆ ಸಜ್ಜಾಗಿರುತ್ತವೆ ಎಂದು ಅವರು ಅಭಯ ನೀಡಿದ್ದಾರೆ. ಯಾರಿಗಾದರೂ ಕೆಮು, ನೆಗಡಿ ಇದ್ದರೆ ಸೋಂಕು ಹರಡದಂತೆ ಇತರರೊಂದಿಗೆ ಸಂಪರ್ಕಕ್ಕೆ ಬರದಂತೆ ಉಸಿರಾಟದ ಸೋಂಕುಗಳನ್ನು ತಡೆಗಟ್ಟಲು ಬಳಸುವ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಐದು ವರ್ಷಗಳ ಹಿಂದೆ ಕೋವಿಡ್‌ ಸಂದರ್ಭದಲ್ಲೂ ಚೀನಾ ಎಲ್ಲವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ ಕೋವಿಡ್‌ ವೈರಸ್‌‍ ಜಗತ್ತಿಗೆ ಆವರಿಸಿ ವಿಶ್ವವೇ ಸ್ತಬ್ಧವಾಗಿತ್ತು. ಆಸ್ಪತ್ರೆಗಳು ಭರ್ತಿಯಾಗಿದ್ದವು. ಎಲ್ಲಾ ದೇಶಗಳು ಕೋವಿಡ್‌ ಪರಿಸ್ಥಿತಿ ಎದುರಿಸಲು ಹೆಣಗಾಡಿದ್ದವು. ಕೊರೋನಾ ಮೊದಲ ಅಲೆ, ಎರಡನೇ ಅಲೆ, ಮೂರನೇ ಅಲೆ ಹೀಗೆ ಒಂದರ ಹಿಂದೆ ಮತ್ತೊಂದರಂತೆ ವಿಶ್ವವನ್ನೇ ತತ್ತರಿಸುವಂತೆ ಮಾಡಿತ್ತು. ಇದೀಗ ಚೀನಾದಲ್ಲಿ ಕಾಣಿಸಿಕೊಂಡ ಎಚ್‌ಎಂಪಿವಿ ವೈರಸ್‌‍ ಕೋವಿಡ್‌ ರೀತಿ ಆತಂಕ ಸೃಷ್ಟಿಸಿದೆ,

RELATED ARTICLES

Latest News