ಬೆಂಗಳೂರು, ಏ.17- ಪ್ರಸಕ್ತ ಲೋಕಸಭಾ ಚುನಾವಣೆಯ ರಾಜ್ಯದ ಮೊದಲ ಹಂತದ ಮತದಾನ ನಡೆಯುವ 14 ಕ್ಷೇತ್ರಗಳಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಮತದಾರರು ಹಾಗೂ ದಿವ್ಯಾಂಗ ಮತದಾರರು ಶೇ.75.22ರಷ್ಟು ಮತದಾನವನ್ನು ಮನೆಯಿಂದ ಮಾಡಿದ್ದಾರೆ.
ಮನೆಯಿಂದ ಮತದಾನ ಮಾಡಲು 48,609 ಮತದಾರರು 12 ಡಿ ನಮೂನೆಯನ್ನು ಸಲ್ಲಿಸಿದ್ದರು. ಅವರಲ್ಲಿ ನಿನ್ನೆಯವರೆಗೆ 36,565 ಮತದಾರರು ಮನೆಯಿಂದ ಮತ ಚಲಾಯಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
85 ವರ್ಷಕ್ಕಿಂತ ಮೇಲ್ಪಟ್ಟ 27,505 ಮತದಾರರು ಅಂದರೆ ಶೇ.74.97ರಷ್ಟು ಹಿರಿಯ ಮತದಾರರು ಮನೆಯಿಂದ ಮತ ಚಲಾಯಿಸಿದ್ದಾರೆ. 36,689 ಮತದಾರರಿಗೆ ಮನೆಯಿಂದ ಮತದಾನ ಮಾಡಲು ಅನುಮೋದಿಸಲಾಗಿದೆ. ಅದೇ ರೀತಿ ಶೇ. 40ಕ್ಕಿಂತ ಹೆಚ್ಚಿನ ದಿವ್ಯಾಂಗ ಮತದಾರರು ಮನೆಯಿಂದ ಮತ ಚಲಾಯಿಸಿದ್ದಾರೆ.
9,060 ಮತದಾರರು ಮತದಾನ ಮಾಡಿದ್ದಾರೆ. ಅಂದರೆ ಶೇ.76.01ರಷ್ಟು ಮತದಾನ ಮಾಡಿದ್ದಾರೆ. 11,920 ದಿವ್ಯಾಂಗ ಮತದಾರರಿಗೆ ಮನೆಯಿಂದ ಮತದಾನ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಏಪ್ರಿಲ್ 13ರಿಂದ ಮನೆಯಿಂದ ಮತದಾನ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ನಾಳೆ ಮನೆಯಿಂದ ಮತದಾನ ಮಾಡಲು ಕಡೆಯ ದಿನವಾಗಿದೆ.