ಬೆಂಗಳೂರು, ಏ.3- ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ 2025ಅನ್ನು ಅಂಗೀಕರಿಸಿರುವುದು ಐತಿಹಾಸಿಕ ಕ್ಷಣವಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಣ್ಣಿಸಿದ್ದಾರೆ.
ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು ಐತಿಹಾಸಿಕ ವಕ್ಫ್ ವಿಧೇಯಕ ಅಂಗೀಕಾರವಾಗಿರುವುದು ಪಾರದರ್ಶಕತೆ ಹಾಗೂ ನ್ಯಾಯದ ಕಡೆಗೆ ಮಹತ್ವದ ಹೆಜ್ಜೆ ಇಟ್ಟಿರುವುದನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೂರದೃಷ್ಟಿಕೋನವನ್ನು ಕೇಂದ್ರ ಸರ್ಕಾರ ಹೊಂದಿದೆ. ಕೇಂದ್ರ ಸರ್ಕಾರವು ನ್ಯಾಯಪರತೆ ಮತ್ತು ಹೊಣೆಗಾರಿಕೆಯನ್ನು ಎತ್ತಿಹಿಡಿಯುವಸುಧಾರಣೆಗಳನ್ನು ಖಚಿತಪಡಿಸುವುದನ್ನು ಮುಂದುವರೆಸಿದಂತಾಗಿದೆ. ಈ ರೀತಿಯ ಪರಿವರ್ತನಾತಕ ನಡೆಯು ಶ್ಲಾಘನೀಯವಾಗಿದೆ ಎಂದಿದ್ದಾರೆ.