ನವದೆಹಲಿ,ಫೆ.2- ನಾಳೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಲಿದೆ. ಜಂಟಿ ಸಮಿತಿ ನಾಳೆ ಸದನದಲ್ಲಿ ವಕ್ಫ್ ಮಸೂದೆ ಮಂಡನೆ ಮಾಡಲಿದ್ದು, ವಿಪಕ್ಷಗಳು ತಮ ಕೆಲವು ಸಲಹೆಗಳನ್ನು ಸಮಿತಿ ಸೇರ್ಪಡೆ ಮಾಡಿಲ್ಲ ಎಂದು ಆರೋಪಿಸಿರುವುದರಿಂದ ಗದ್ದಲ ಏರ್ಪಡುವ ಸಾಧ್ಯತೆಗಳಿವೆ.
ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಅವರೊಂದಿಗೆ ವಕ್‌್ಫ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ವರದಿಯನ್ನು ಮಂಡಿಸಲಿದ್ದಾರೆ. ಸಮಿತಿಯ ಮುಂದೆ ನೀಡಿದ ಸಾಕ್ಷ್ಯಗಳನ್ನು ಅವರು ದಾಖಲೆಯಲ್ಲಿ ಇಡುತ್ತಾರೆ.
ಜ. 30 ರಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ವರದಿಯನ್ನು ಸಲ್ಲಿಸಲಾಯಿತು. ಅದೇ ದಿನ ಜಗದಾಂಬಿಕಾ ಪಾಲ್ ಅವರು ಅಂತಿಮ ವರದಿಯನ್ನು ಹಸ್ತಾಂತರಿಸಲು ಸಂಸತ್ತಿನಲ್ಲಿ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದರು.
ಏತನಧ್ಯೆ, ಪ್ರತಿಪಕ್ಷದ ಸದಸ್ಯ ಮತ್ತು ಕಾಂಗ್ರೆಸ್ ಸಂಸದ ಸೈಯದ್ ನಸೀರ್ ಹುಸೇನ್ ಅವರು ಮಸೂದೆಯ ಮೇಲಿನ ತಮ ಭಿನ್ನಾಭಿಪ್ರಾಯ ಟಿಪ್ಪಣಿಯ ವಿಭಾಗಗಳನ್ನು ತನಗೆ ತಿಳಿಯದೆ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ವಿರೋಧದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಅವರು ವಿವರಿಸಿದ್ದನ್ನು ನಿರಾಕರಿಸುತ್ತಾ, ಹುಸೇನ್ ತಮ ಎಕ್ಫ್ ಹ್ಯಾಂಡಲ್‌ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಜಂಟಿ ಸಮಿತಿಯ ಸದಸ್ಯನಾಗಿ, ನಾನು ಮಸೂದೆಯನ್ನು ವಿರೋಧಿಸಿ ವಿವರವಾದ ಭಿನ್ನಾಭಿಪ್ರಾಯವನ್ನು ಸಲ್ಲಿಸಿದ್ದೇನೆ. ಆಘಾತಕಾರಿ, ನನ್ನ ಭಿನ್ನಾಭಿಪ್ರಾಯದ ಟಿಪ್ಪಣಿಯ ಭಾಗಗಳನ್ನು ನನಗೆ ತಿಳಿಯದೆಯೇ ತಿದ್ದುಪಡಿ ಮಾಡಲಾಗಿದೆ! ಎಂದು ಬರೆದುಕೊಂಡಿದ್ದಾರೆ.