Thursday, November 21, 2024
Homeರಾಜಕೀಯ | Politicsಸರ್ಕಾರದ ಆಡಳಿತ ವೈಫಲ್ಯದಿಂದಲೇ ವಕ್ಫ್ ಗೊಂದಲ : ಶೆಟ್ಟರ್

ಸರ್ಕಾರದ ಆಡಳಿತ ವೈಫಲ್ಯದಿಂದಲೇ ವಕ್ಫ್ ಗೊಂದಲ : ಶೆಟ್ಟರ್

Waqf confusion due to government administration failure - Shettar

ಹುಬ್ಬಳ್ಳಿ, ಅ. 29- ಸರ್ಕಾರದ ಆಡಳಿತ ವೈಫಲ್ಯದಿಂದಲೇ ರಾಜ್ಯಾದ್ಯಂತ ವಕ್ಫ್ ಗೊಂದಲ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್‌ ಶೆಟ್ಟರ್‌ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅವ್ಯವಸ್ಥೆಗೆ ಇದು ಸ್ಪಷ್ಟ ಉದಾಹರಣೆ ಆಗಿದ್ದು, ವಕ್ಫ್ ಆಸ್ತಿ ಬಗ್ಗೆ ನೋಟಿಸ್‌‍ ಕೊಟ್ಟಿದ್ದು ರಾಜ್ಯ ಸರ್ಕಾರದ ಆಡಳಿತ ವೈಲ್ಯ ಆಗಿದ್ದು, ಇದನ್ನು ಯಾರೂ ಕೇಳದಿದ್ರೆ ಅದು ವಕ್‌್ಫ ಬೋರ್ಡ್‌ ಆಸ್ತಿ ಆಗುತ್ತಿತ್ತು. ಬೋರ್ಡ್‌ಗೆ ಆಸ್ತಿ ನೀಡುವ ಮೂಲಕ ಅಲ್ಪಸಂಖ್ಯಾತರ ತುಷ್ಟಿಕರಣ ಹೀನ ಮಟ್ಟಕ್ಕಿಳಿದಿದೆ ಎಂದು ಆರೋಪಿಸಿದರು.

ನಮ ಕಾಲದಲ್ಲಿ ಒಂದೋ ಎರಡು ಪ್ರಕರಣ ಆಗಿರಬಹುದು ಅದನ್ನು ಸ್ಥಳೀಯ ಅಧಿಕಾರಿಗಳನ್ನು ಕೇಳಬೇಕು. ರೈತರ ಹಿತಾಸಕ್ತಿ ಕಾಪಾಡಲು, ತುಷ್ಟೀಕರಣ ಖಂಡಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ ನಮ ಶೋಧನ ಕಮಿಟಿ ವರದಿ ತಯಾರಿಸಲಿ ಎಂದರು.

RELATED ARTICLES

Latest News