Thursday, April 10, 2025
Homeರಾಜ್ಯವಿಧಾನಸಭೆಯಲ್ಲಿ ಮೊದಲದಿನವೇ ವಕ್ಫ್ ಫೈಟ್, ಪ್ರತಿಪಕ್ಷಗಳ ಪ್ರತಿಭಟನೆ

ವಿಧಾನಸಭೆಯಲ್ಲಿ ಮೊದಲದಿನವೇ ವಕ್ಫ್ ಫೈಟ್, ಪ್ರತಿಪಕ್ಷಗಳ ಪ್ರತಿಭಟನೆ

Waqf fight in the assembly on the first day, opposition protests

ಬೆಳಗಾವಿ,ಡಿ.9– ವಿಧಾನಮಂಡಲದ ಆರಂಭದಲ್ಲೇ ವಕ್ಫ್ ವಿವಾದ ಪ್ರಸ್ತಾಪವಾಗಿದ್ದು, ಬಿಜೆಪಿಯ ನಾಯಕರು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರೆ, ಆಡಳಿತ ಪಕ್ಷ ಕಾಂಗ್ರೆಸ್ ಅನುಭವ ಮಂಟಪದ ಚರ್ಚೆಗೆ ಮುಂದಾಗಿತ್ತು. ಮೊದಲ ದಿನದ ಕಲಾಪದಲ್ಲೇ ಸದನ ಜಂಗಿಕುಸ್ತಿಯ ವೇದಿಕೆಯಾಗಿ ಮಾರ್ಪಟ್ಟಿತ್ತು.

ಸಭಾಧ್ಯಕ್ಷರು ಆಡಳಿತ ಪಕ್ಷದ ಮನವಿಗೆ ಗೌರವ ನೀಡಿ ಅನುಭವ ಮಂಟಪದ ಚರ್ಚೆಯನ್ನು ಕೈಗೆತ್ತಿಕೊಂಡಾಗ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮತ್ತಿತರರು, ಪಂಚಮಸಾಲಿ ಹೋರಾಟಕ್ಕೆ ರಾಜ್ಯಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು.

ಬಿಜೆಪಿಯ ಕೆಲ ಶಾಸಕರು ಇದಕ್ಕೆ ಬೆಂಬಲವಾಗಿ ಜೊತೆಯಾದರು. ಆದರೆ ಇನ್ನೂ ಕೆಲವು ಬಿಜೆಪಿ ಶಾಸಕರು ತಮ ಆಸನದಲ್ಲೇ ಕುಳಿತಿದ್ದರು. ಇದನ್ನು ಲೇವಡಿ ಮಾಡಿದ ಕಾಂಗ್ರೆಸ್ ಶಾಸಕರು ವಿರೋಧ ಪಕ್ಷದಲಿಲ್ಲೇ ಒಗ್ಗಟ್ಟಿಲ್ಲ ಎಂದು ಛೇಡಿಸಿದರು.

ಕಲಾಪದಲ್ಲಿ ಸಂತಾಪ ಸೂಚಕ ನಿರ್ಣಯ ಹಾಗೂ ಇತರ ಪ್ರಕಟಣೆಗಳ ಬಳಿಕ ವಿರೋಧಪಕ್ಷಗಳಾದ ಜೆಡಿಎಸ್-ಬಿಜೆಪಿ ಸದಸ್ಯರು ಜಂಟಿಯಾಗಿ ನಿಲುವಳಿ ಸೂಚನೆಯ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರಲ್ಲಿ ಮನವಿ ಮಾಡಿದ್ದರು.

ಸೂಚನಾ ಪತ್ರದಲ್ಲಿ ವಕ್ಫ್ ಆಸ್ತಿ ವಿವಾದ ರಾಜ್ಯಾದ್ಯಂತ ಹರಡಿದ್ದು, ರೈತರ ಜಮೀನು, ಮಠಮಂದಿರಗಳ ಜಾಗ, ಸಾರ್ವಜನಿಕರ ಆಸ್ತಿ, ಸರ್ಕಾರಿ ಕಟ್ಟಡಗಳ ಪಹಣಿಗಳಲ್ಲಿ ಏಕಾಏಕಿ ವಕ್‌್ಫ ಆಸ್ತಿ ಎಂದು ನಮೂದಾಗಿದೆ. ಇದು ಜನರಲ್ಲಿ ಆಕ್ರೋಶ ಸೃಷ್ಟಿಸಿದೆ. ಭೂ ಸುದಾರಣಾ ಕಾಯ್ದೆಯಲ್ಲಿ ಬಂದ ಜಮೀನುಗಳಲ್ಲಿ ತಲತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರು ಕೂಡ ಆತಂಕದಿಂದ ದಿನದೂಡುವಂತಾಗಿದೆ. ಸಂಬಂಧಪಟ್ಟವರಿಗೆ ಯಾವುದೇ ನೋಟೀಸ್ ನೀಡದೆ, ಅವರ ಗಮನಕ್ಕೂ ತರದೆ ಆಸ್ತಿಗಳ ಪಹಣಿಗಳಲ್ಲಿ ವಕ್‌್ಫ ಎಂದು ಹೆಸರು ನಮೂದಿಸಲಾಗಿರುತ್ತದೆ ಎಂದು ಆಕ್ಷೇಪಿಸಿದ್ದರು.

ಈಗಾಗಲೇ 21 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ವಕ್ಫ್ ತನ್ನ ಆಸ್ತಿ ಎಂದು ಹಕ್ಕು ಚಲಾಯಿಸುತ್ತಿರುವುದು ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿದೆ. ಇಲಾಖೆಯ ಸಚಿವರು ವಕ್‌್ಫ ಅದಾಲತ್ನಲ್ಲಿ ನೀಡಿದ್ದ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೇ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ದೂರಿದರು.

ಬೌದ್ಧರು, ಕ್ರೈಸ್ತರಿಗಿಲ್ಲದ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಿರುವ ಪರಿಣಾಮವೇ ಈ ಎಲ್ಲಾ ಅವಾಂತರಗಳು ಸಂಭವಿಸುತ್ತಿವೆ. ಅಕ್ರಮವಾಗಿ ಆಸ್ತಿಗಳನ್ನು ಕಬಳಿಸಲು ಹೊರಟಿರುವ ವಕ್‌್ಫ ಮಂಡಳಿಗೆ ನೀಡಿರುವ ಪರಮಾಧಿಕಾರದ ಅಧಿಸೂಚನೆಯನ್ನು ರದ್ದುಪಡಿಸುವ ಮೂಲಕ ರೈತರು, ಸಾರ್ವಜನಿಕರಲ್ಲಿ ಮೂಡಿರುವ ಆತಂಕವನ್ನು ದೂರ ಮಾಡಬೇಕು ಎಂದು ನಿಲುವಳಿ ಸೂಚನೆಯಲ್ಲಿ ಮನವಿ ಮಾಡಲಾಗಿತ್ತು.

ವಿಧಾನಸಭೆ ಕಲಾಪದಲ್ಲಿ ಪ್ರಶ್ನೋತ್ತರದ ಬಳಿಕ ಸಭಾಧ್ಯಕ್ಷರು ತಮ ಪೀಠದ ಪುನರ್ ನವೀಕರಣ ಹಾಗೂ ಅನುಭವ ಮಂಪಟದ ಮಾದರಿಗಳ ಕುರಿತು ಪ್ರಕಟಣೆಗಳನ್ನು ನೀಡುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಲೆತ್ನಿಸಿದ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಂಚಮಸಾಲಿ ಸಮುದಾಯವನ್ನು 2 ಎ ಮೀಸಲಾತಿ ವ್ಯಾಪ್ತಿಗೆ ಒಳಪಡಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ಅಡ್ಡಿ ಪಡಿಸಲಾಗಿದೆ ದೂರಿದರು. ಆಗ ಸಭಾಧ್ಯಕ್ಷರು, ಮೊದಲು ಕೆಲ ಪ್ರಕಟಣೆಗಳಿಗೆ ಅವಕಾಶ ಕೊಡಿ ಎಂದು ಸೂಚನೆ ನೀಡಿದರು.

ವಿರೋಧಪಕ್ಷದ ನಾಯಕ ಆರ್.ಅಶೋಕ್, ನಮ ನಿಲುವಳಿ ಸೂಚನೆಯ ಚರ್ಚೆಗೆ ಮೊದಲು ಅವಕಾಶ ಕೊಡಿ. ಅನುಭವಮಂಟಪ ವಿಚಾರವಾಗಿ ನಾವು ಚರ್ಚೆ ಮಾಡಲು ಸಿದ್ಧರಿದ್ದೇವೆ. ಆದರೆ ಮೊದಲು ವಕ್‌್ಫ ವಿಚಾರದ ಕುರಿತು ಚರ್ಚೆಗೆ ಅವಕಾಶ ಕೊಡಿ ಎಂದರು. ಕಾಂಗ್ರೆಸಿಗರು ಅನುಭವ ಮಂಟಪವನ್ನು ದರ್ಗಾ ಮಾಡಿಟ್ಟಿದ್ದಾರೆ ಎಂದು ಅರವಿಂದ್ ಬೆಲ್ಲದ್ ಕಿಡಿಕಾರಿದರು.
ವಿರೋಧ ಪಕ್ಷಗಳ ಮನವಿಗೆ ಸಚಿವರಾದ ಕೃಷ್ಣಭೈರೇಗೌಡ, ಶರಣಪ್ರಕಾಶ್ ಪಾಟೀಲ್, ಎಚ್.ಕೆ.ಪಾಟೀಲ್ರವರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಎಚ್.ಕೆ.ಪಾಟೀಲ್ ಬಿಜೆಪಿಯವರು ಅನುಭವ ಮಂಟಪದ ಪ್ರಾಧಾನ್ಯತೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ. ಸುವರ್ಣಸೌಧದಲ್ಲಿ ಅನುಭವ ಮಂಟಪದ ವಿಚಾರ ಚರ್ಚೆಯಾಗದೆ ಇನ್ನೆಲ್ಲಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.ಸಚಿವ ಕೃಷ್ಣಭೈರೇಗೌಡ, ವಿರೋಧಪಕ್ಷಗಳು ಕಲಾಪವನ್ನು ಹಾಳು ಮಾಡುತ್ತಿವೆ. ಎಲ್ಲಾ ವಿಚಾರಗಳ ಚರ್ಚೆಗೆ ಸರ್ಕಾರ ಸಿದ್ಧವಿದೆ, ನಿಯಮಾವಳಿ ಅನುಸಾರ ಕಲಾಪ ನಡೆಯಲಿ ಎಂದು ಆಗ್ರಹಿಸಿದರು.

ಶರಣಪ್ರಕಾಶ್ ಪಾಟೀಲ್, ಬಿಜೆಪಿಯವರು ದ್ವೇಷದ ರಾಜಕಾರಣ ಹೊರತುಪಡಿಸಿ ಬೇರೇನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.ಆಡಳಿತ ಪಕ್ಷದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಳೆಹಾನಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ ಅದರ ಚರ್ಚೆಯಾಗಬೇಕು ಎಂದರು.
ಸಭಾಧ್ಯಕ್ಷ ಯು.ಟಿ.ಖಾದರ್, ಸಕಾರಾತಕ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು, ವಿಪಕ್ಷಗಳ ಎಲ್ಲಾ ಅನುಮಾನಗಳ ಪ್ರಸ್ತಾಪಕ್ಕೆ ಸಮಯ ನೀಡಲಾಗುತ್ತದೆ. ಮೊದಲು ಪ್ರಶ್ನೋತ್ತರ ಮುಗಿಯಲಿ ಎಂದು ಸಲಹೆ ನೀಡಿದರು.

ವಿ.ಸುನಿಲ್ಕುಮಾರ್ ಪ್ರಶ್ನೋತ್ತರವನ್ನು ಬದಿಗಿರಿಸಿ, ವಕ್ಫ್ ಚರ್ಚೆಗೆ ಅವಕಾಶ ನೀಡಿ. ಬೀದರ್ನಿಂದ ಆರಂಭಗೊಂಡು ವಕ್‌್ಫ ಸಮಸ್ಯೆ ರಾಜ್ಯಾದ್ಯಂತ ವ್ಯಾಪಿಸಿದೆ ಎಂದರು. ವಿಪಕ್ಷ ನಾಯಕ ಆರ್.ಅಶೋಕ್ ಇದಕ್ಕೆ ಧ್ವನಿಗೂಡಿಸಿದರು.

ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಸಭಾಧ್ಯಕ್ಷರು ವಿರೋಧಪಕ್ಷದ ನಾಯಕರು ನನ್ನ ಬಳಿ ಮಾತನಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು ಅನಗತ್ಯವಾಗಿ ಪ್ರಚಾರಕ್ಕೊಳಗಾಗುವ ಅಗತ್ಯವಿಲ್ಲ. ಸದನದ ನಿಯಮಾವಳಿ ಪ್ರಕಾರ ಮೊದಲು ಪ್ರಶ್ನೋತ್ತರ ನಡೆಯಬೇಕು. ಎಲ್ಲರೂ ಸಹಕರಿಸಿ ಎಂದು ಆಡಳಿತ ಮತ್ತು ವಿರೋಧಪಕ್ಷದ ಸದಸ್ಯರಲ್ಲಿ ಮನವಿ ಮಾಡಿದರು.

ಈ ನಡುವೆ ಬಸನಗೌಡ ಯತ್ನಾಳ್ ಪಂಚಮಸಾಲಿ ಹೋರಾಟಕ್ಕೆ ನಿರ್ಬಂಧ ವಿಧಿಸಿರುವ ಜಿಲ್ಲಾಡಳಿತ ಆದೇಶದ ಪ್ರತಿಯನ್ನು ಸಭಾಧ್ಯಕ್ಷರಿಗೆ ಪ್ರದರ್ಶಿಸಿ ಧರಣಿಗೆ ಮುಂದಾದರು. ಕೆಲ ಶಾಸಕರು ಯತ್ನಾಳ್ಗೆ ಬೆಂಬಲವಾಗಿ ಧರಣಿಗೆ ಜೊತೆಗೂಡಿದರು. ಆರ್.ಅಶೋಕ್, ಹೋರಾಟಕ್ಕೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.ಧರಣಿ, ಗದ್ದಲ ಹೆಚ್ಚಾದಾಗ ಸಭಾಧ್ಯಕ್ಷರು ಕಲಾಪವನ್ನು ಬೋಜನ ವಿರಾಮಕ್ಕೆ ಮುಂದೂಡಿದರು.

RELATED ARTICLES

Latest News