Tuesday, September 17, 2024
Homeಬೆಂಗಳೂರುಖಾಸಗಿ ಕಂಪೆನಿಗೆ ತ್ಯಾಜ್ಯ ಗುತ್ತಿಗೆ ನೀಡಿ ಹಣ ಲಪಟಾಯಿಸುವ ಹುನ್ನಾರ ನಡೆದಿದೆ : HDK

ಖಾಸಗಿ ಕಂಪೆನಿಗೆ ತ್ಯಾಜ್ಯ ಗುತ್ತಿಗೆ ನೀಡಿ ಹಣ ಲಪಟಾಯಿಸುವ ಹುನ್ನಾರ ನಡೆದಿದೆ : HDK

ಬೆಂಗಳೂರು,ಜು.13- ಖಾಸಗಿ ಕಂಪನಿಗೆ ಬೃಹತ್ ಬೆಂಗಳೂರಿನ ಕಸ ವಿಲೇವಾರಿ ಗುತ್ತಿಗೆ ನೀಡಿ ಹಣ ಲಪಟಾಯಿಸುವ ಹುನ್ನಾರ ನಡೆದಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡಿ 30 ವರ್ಷದ ಅವಧಿಗೆ 45 ಸಾವಿರ ಕೋಟಿ ರೂ.ಗೆ ಕಸ ವಿಲೇವಾರಿಯನ್ನು ಖಾಸಗಿ ಕಂಪನಿಗೆ ನೀಡಲು ಉದ್ದೇಶಿಸಲಾಗಿದೆ. ಈ ಮೂಲಕ 10ರಿಂದ 15 ಸಾವಿರ ಕೋಟಿ ರೂ. ಲಪಟಾಯಿಸುವ ಸಂಚು ಅಡಗಿದೆ ಎಂದರು.

ಕಪ್ಪು ಪಟ್ಟಿಯಲ್ಲಿರುವ ಖಾಸಗಿ ಕಂಪನಿಗೆ ಕಸದ ಗುತ್ತಿಗೆ ನೀಡಲು ಉದ್ದೇಶಿಸಲಾಗಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮಾಡಲು ಹೊರಟಿದ್ದಾರೆ. ಅದು ಕೂಡ ಇದೇ ಕಾರಣಕ್ಕೆ ಇರಬೇಕು ಎಂದು ಆರೋಪಿಸಿದರು.

ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದರೂ ಮಣ್ಣಿಗೆ ಹೋಗುವುದು ರಾಮನಗರದಲ್ಲೇ ಎಂದು ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

RELATED ARTICLES

Latest News