Saturday, November 23, 2024
Homeರಾಷ್ಟ್ರೀಯ | Nationalಹೊಸ ಸಂಸತ್‌ ಭವನಕ್ಕೆ ನುಗ್ಗಿದ ನೀರು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ವಿಡಿಯೋ

ಹೊಸ ಸಂಸತ್‌ ಭವನಕ್ಕೆ ನುಗ್ಗಿದ ನೀರು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ವಿಡಿಯೋ

ನವದೆಹಲಿ,ಆ.1– ಹೊಸದಾಗಿ ನಿರ್ಮಿಸಲಾದ ಸಂಸತ್‌ ಭವನದಲ್ಲಿ ಮಳೆ ನೀರು ನಿಂತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಸಂಸತ್‌ ಭವನ ಹಳೆಯದಲ್ಲ, ನಿರ್ಮಾಣ ಮಾಡಿ ಸುಮಾರು ವರ್ಷಗಳು ಕಳೆದಿಲ್ಲ. ಹೀಗಿದ್ದರೂ ಇತ್ತೀಚೆಗಷ್ಟೇ ನಿರ್ಮಾಣಗೊಂಡ ಭವನದಲ್ಲಿ ಮಳೆ ನೀರು ತುಂಬಿರುವುದು ಕಂಡು ಬಂದಿದೆ.

ಈ ದೃಶ್ಯವನ್ನು ತಮಿಳುನಾಡಿನ ವಿರುದುನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌‍ ಸಂಸದ ಮಾಣಿಕ್ಕಂ ಠಾಗೋರ್‌ ಬಿ ಅವರು ತಮ ಎಕ್‌್ಸ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.1200 ಕೋಟಿ ಖರ್ಚು ಮಾಡಿ ನಿರ್ಮಿಸಿರುವ ನೂತನ ಸಂಸತ್‌ ಭವನದಲ್ಲಿ ನೀರು ಜಿನುಗುತ್ತಿದ್ದು, ಅದನ್ನು ಸಂಗ್ರಹಿಸಲು ಬಕೆಟ್‌ ಅನ್ನು ಇಡಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಮೋದಿ ಸರ್ಕಾರದಲ್ಲಿ ಹೊರಗೆ ಪೇಪರ್‌ ಸೋರುತ್ತಿದೆ, ಒಳಗೆ ಮಳೆ ನೀರು ಸೋರುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ಆಕೋಶಗೊಂಡು ಬರೆದಿದ್ದಾರೆ. ಹೊಸ ಸಂಸತ್ತಿನ ಮೇಲ್ಛಾವಣಿಯಿಂದ ಜಿನುಗುವ ಮಳೆ ನೀರು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಅಧಿಕಾರಿಗಳ ಹಣದಾಸೆಗೆ ಕಳಪೆ ಕಾಮಗಾರಿಯಿಂದ ನೂತನ ಸಂಸತ್‌ ಭವನ ಸೋರಿಕೆಯಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸ. ಸಂಸತ್‌ ಭವನದ ಕತೆ ಹೀಗಾದರೆ ಜನಸಾಮಾನ್ಯರ ಗತಿ ಏನು ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ಈ ನೀರಿನ ಸೋರಿಕೆಯು ಹೊಸ ಕಟ್ಟಡದಲ್ಲಿನ ಮುಂದಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದೆ. ನಿರ್ಮಾಣ ಪೂರ್ಣಗೊಂಡ ಕೇವಲ ಒಂದು ವರ್ಷದ ನಂತರ ಸಂಸತ್‌ ಭವನ ಮಳೆ ನೀರಿನಿಂದ ತುಂಬಿ ಹೋಗಿದೆ. ಇದರಿಂದಾಗಿ ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಮಂಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮೋದಿ ಸರ್ಕಾರ 1200 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೊಸ ಸಂಸತ್‌ ಕಟ್ಟಡದಲ್ಲಿ ಭಾರಿ ನೀರು ತುಂಬಿಕೊಂಡಿದೆ. ಕಾರಿನಲ್ಲಿ ಬಂದ ಜನಪ್ರತಿನಿಧಿಗಳು ಛತ್ರಿ ಹಿಡಿದು ಒಳಗಡೆ ಪ್ರವೇಶ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಲ್ಲದೆ ಮಳೆ ನೀರಿನಲ್ಲಿ ನಡೆದುಕೊಂಡು ಹೋಗುವ ಸ್ಥಿತಿ ನೂತನ ಸಂಸತ್‌ ಭವನದ ಮುಂದೆ ಕಂಡು ಬಂದಿದೆ. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌‍ ಕಿಡಿ ಕಾರಿದೆ.

RELATED ARTICLES

Latest News