ಬೆಂಗಳೂರು,ಆ.29- ತುಂಗಾಭದ್ರ ಜಲಾಶಯದಿಂದ ನದಿಗೆ 40 ಸಾವಿರ ಕ್ಯೂಸೆಕ್‌ನಿಂದ 70 ಸಾವಿರ ಕ್ಯೂಸೆಕ್‌ವರೆಗೂ ನೀರು ಬಿಡುವ ಸಾಧ್ಯತೆ ಇದ್ದು, ತುಂಗಾಭದ್ರ ಅಣೆಕಟ್ಟೆಯ ಕೆಳಭಾಗದಲ್ಲಿನ ನದಿಪಾತ್ರದ ಜನವಸತಿಗಳಲ್ಲಿ ಜಾಗ್ರತೆ ವಹಿಸಲು ಕೋರಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈ ಮನವಿ ಮಾಡಿದೆ.
ತುಂಗಾಭದ್ರ ಜಲಾಶಯಕ್ಕೆ ಈಗ ಬರುತ್ತಿರುವ ಒಳಹರಿವು 36 ಸಾವಿರ ಕ್ಯೂಸೆಕ್ ಆಗಿದ್ದು, ಇದು 53 ಸಾವಿರ ಕ್ಯೂಸೆಕ್‌ಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ನದಿಗೆ ನೀರು ಬಿಡುವ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.
ಒಳಹರಿವು 40 ಸಾವಿರ ಕ್ಯೂಸೆಕ್‌ಗಿಂತ 70 ಸಾವಿರ ಕ್ಯೂಸೆಕ್‌ವರೆಗೂ ಹೆಚ್ಚಾಗಬಹುದು. ಇದಕ್ಕೆ ಕಾರಣ ತುಂಗಾಜಲಾಶಯದಿಂದ 32 ಸಾವಿರ ಕ್ಯೂಸೆಕ್, ಭದ್ರ ಅಣೆಕಟ್ಟೆಯಿಂದ 11 ಸಾವಿರ ಕ್ಯೂಸೆಕ್ ಹಾಗೂ ವರದಾನದಿಯಿಂದ 9700 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಅಲ್ಲದೆ ತುಂಗಾಭದ್ರ ನದಿ ಜಲಾನಯನ ಭಾಗದಲ್ಲಿ ಮಳೆಯಾಗುತ್ತಿದ್ದು, ತುಂಗಾಭದ್ರ ಜಲಾಶಯದ ಒಳಹರಿವು 53 ಸಾವಿರ ಕ್ಯೂಸೆಕ್‌ಗೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
- ವರದಕ್ಷಿಣೆಗಾಗಿ ಸೋಸೆಗೆ ಆಸಿಡ್ ಕುಡಿಸಿ ಕೊಂದ ಧನ ಪಿಶಾಚಿಗಳು..!
- ತುಂಗಾಭದ್ರ ಜಲಾಶಯದಿಂದ ನೀರು ಬಿಡುವ ಸಾಧ್ಯತೆ, ನದಿಪಾತ್ರದ ಜನರಿಗೆ ಎಚ್ಚರಿಕೆ
- ಸ್ನಾನ ಮಾಡಲು ಹೋಗಿ ಮಯೂರಾಕ್ಷಿ ನದಿ ಪಾಲಾದ ನಾಲ್ವರು
- ದೇಶವನ್ನು ಕ್ರೀಡಾ ಶ್ರೇಷ್ಠತೆಯ ಕೇಂದ್ರ ಮಾಡುತ್ತೇವೆ ; ಪ್ರಧಾನಿ ಮೋದಿ
- ಭಾರತ ತೈಲ ಹಣ ವರ್ಗಾವಣೆ ಮಾಡುವ ಸಂಸ್ಥೆಯಾಗಿದೆ ಎಂದ ಪೀಟರ್ ನವರೊ