ಬೆಂಗಳೂರು,ಜೂ.23- ತಾವು ಮತ್ತು ತಮ ಸಹೋದರ ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಮ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಜಾರಿ ನಿರ್ದೇಶನಾಲಯದ ತನಿಖೆಗೆ ಹಾಜರಾಗಿರುವುದಕ್ಕೆ ಪ್ರತಿಕ್ರಿಯಿಸಿದರು. ನಮ ಕುಟುಂಬ ಜಾರಿ ನಿರ್ದೇಶನಾಲಯವನ್ನು ಎದುರಿಸಲು ಸಿದ್ಧರಿದ್ದೇವೆ. ನನ್ನ ಮೇಲೆ ಈ ಮೊದಲು ಇ.ಡಿ ಪ್ರಕರಣ ದಾಖಲಿಸಿತ್ತು. ನಮ ರಕ್ಷಣೆಗೆ ಯಾರೂ ಬಂದಿರಲಿಲ್ಲ. ನ್ಯಾಯಾಲಯ ನಮಗೆ ರಕ್ಷಣೆ ನೀಡಿದೆ ಎಂದಿದ್ದಾರೆ.
ಐಶ್ವರ್ಯಗೌಡ ಅವರ ವಂಚನೆ ಪ್ರಕರಣದಲ್ಲಿ ಯಾರೋ ಹೇಳಿಕೆ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಡಿ.ಕೆ.ಸುರೇಶ್ ಅವರನ್ನು ಇ.ಡಿ ಯವರು ವಿಚಾರಣೆಗೆ ಕರೆದಿದ್ದಾರೆ. ಜನಪ್ರತಿನಿಧಿಯಾಗಿದ್ದವರನ್ನು ಯಾರು ಬೇಕಾದರೂ ಬಂದು ಭೇಟಿಯಾಗಬಹುದು. ಅನಗತ್ಯವಾಗಿ ಈ ವಿಚಾರವನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಡಿ.ಕೆ.ಸುರೇಶ್ ತನಿಖೆಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಲು ಸಿದ್ಧರಿದ್ದಾರೆ ಎಂದರು.
ಶಾಸಕ ಬಿ.ಆರ್.ಪಾಟೀಲ್ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವರು ಉತ್ತರ ನೀಡಬೇಕು. ನಾನು ಏನು ಹೇಳಬೇಕೋ ಅದನ್ನು ಹೇಳಿಯಾಗಿದೆ ಎಂದರು. ಶಾಸಕರ ಗಮನಕ್ಕೆ ಬರದೆ ಅನುದಾನ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಈವರೆಗೂ ತಮ ಬಳಿ ಯಾರೂ ದೂರು ಹೇಳಿಲ್ಲ. ಹೀಗಾಗಿ ಶಾಸಕರ ಆರೋಪದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು.
- BIG NEWS : ಹೊಸಕೆರೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ನಟ ದರ್ಶನ್ ಅರೆಸ್ಟ್
- ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ದಾರರು : ಕೆ.ಹೆಚ್.ಮುನಿಯಪ್ಪ
- ಭೂಸ್ವಾಧೀನ ವೇಳೆ ಹಣ ಪಡೆದಿದ್ದರೆ ಸೂರ್ಯ ಮುಳುಗುವುದರೊಳಗೆ ಸಸ್ಪೆಂಡ್ : ಡಿಕೆಶಿ
- ಬ್ಯಾಟ್ನಿಂದ ಹೊಡೆದು ಮಗನನ್ನು ಕೊಂದಿದ್ದ ತಂದೆಗೆ ಜೀವಾವಧಿ ಶಿಕ್ಷೆ
- ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ 1090 ಅಧಿಕಾರಿಗಳು