ನವದೆಹಲಿ, ಮಾ.3- ಜೀವವೈವಿಧ್ಯವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಬದ್ಧತೆಯನ್ನು ನಾವು ಹೊಂದಿರಬೇಕು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ. ವಿಶ್ವ ವನ್ಯಜೀವಿ ದಿನದಂದು ಭೂಮಂಡಲದ ನಂಬಲಾಗದ ನೈರ್ಸರಿಕ ಜೀವವೈವಿಧ್ಯವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ 2013,ಡಿ.20, ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 68 ನೇ ಅಧಿವೇಶದಲ್ಲಿ ಮಾರ್ಚ್ 3 ಅನ್ನು ವಿಶ್ವ ವನ್ಯಜೀವಿ ದಿನವೆಂದು ಘೋಷಿಸಲಾಯಿತು ಮತ್ತು ವಿಶ್ವದ ಕಾಡು ಪ್ರಾಣಿ ಮತ್ತು ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿತು.
ಇಂದು, ವಿಶ್ವ ವನ್ಯಜೀವಿ ದಿನದಂದು, ನಮ ಗ್ರಹದ ನಂಬಲಾಗದ ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ನಮಬದ್ಧತೆಯನ್ನು ಪುನರುಚ್ಚರಿಸೋಣ ಎಂದು ಮೋದಿ ಹೇಳಿದರು.
ಪ್ರತಿಯೊಂದು ಪ್ರಾಣಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮುಂದಿನ ಪೀಳಿಗೆಗೆ ಅದರ ಭವಿಷ್ಯವನ್ನು ರಕ್ಷಿಸೋಣ,ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವ ಮತ್ತು ರಕ್ಷಿಸುವ ನಿಟ್ಟಿನಲ್ಲಿ ಭಾರತದ ಕೊಡುಗೆಗಳ ಬಗ್ಗೆ ನಾವು ಹೆಮೆಪಡುತ್ತೇವೆ ಎಂದು ಪ್ರಧಾನಮಂತ್ರಿ ಹೇಳಿದರು.