ಗುವಾಹಟಿ, ಏ. 6: ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ದುರ್ಬಲಗೊಳಿಸುವುದು ಎಂದರೆ ಜಾಗತಿಕ ನಾಯಕನ ಸ್ಥಾನವನ್ನು ಪಡೆಯುವ ಭಾರತದ ಹಾದಿಯಲ್ಲಿ ಅಸಂಖ್ಯಾತ ಅಡೆತಡೆಗಳನ್ನು ಸೃಷ್ಟಿಸುತ್ತದೆ ಎಂದು ಅಸ್ಸಾ 0 ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಬಿಜೆಪಿಯ 46 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಸೂರ್ಯ ಮತ್ತು ಚಂದ್ರ ಇರುವವರೆಗೂ ಕೇಸರಿ ಪಕ್ಷವು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯನ್ನು ದುರ್ಬಲಗೊಳಿಸುವುದು ಎಂದರೆ ಯಾವುದೇ ವ್ಯಕ್ತಿಯನ್ನು ದುರ್ಬಲಗೊಳಿಸುವುದು ಎಂದರ್ಥವಲ್ಲ. ಇದರರ್ಥ ಒಂದು ಸಿದ್ದಾಂತ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ದುರ್ಬಲಗೊಳಿಸುವುದು ಎಂದಿದ್ದಾರೆ.
ಬಿಜೆಪಿಯನ್ನು ದುರ್ಬಲಗೊಳಿಸುವುದು ಎಂದರೆ ಭಾರತವನ್ನು ವಿಶ್ವ ವೇದಿಕೆಗೆ ಕೊಂಡೊಯ್ಯುವ ಹಾದಿಯಲ್ಲಿ ಅಸಂಖ್ಯಾತ ಅಡೆತಡೆಗಳನ್ನು ಸೃಷ್ಟಿಸುವುದು ಎಂದು ಅವರು ಹೇಳಿದರು. ಮುಂಬರುವ ವರ್ಷಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಶರ್ಮಾ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೆ ಮನವಿ ಮಾಡಿದರು.
ಸೂರ್ಯ ಮತ್ತು ಚಂದ್ರ ಇರುವವರೆಗೂ ಬಿಜೆಪಿ ರಾಷ್ಟ್ರದ ಸೇವೆ ಮಾಡುತ್ತದೆ. ನಾನು ಅದೇ ರೀತಿ ಬಯಸುತ್ತೇನೆ. ರಾಷ್ಟ್ರದ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು. ಪ್ರಗತಿ ಮತ್ತು ಬೆಳವಣಿಗೆಯತ್ತ ಸಾಗುತ್ತಿರುವ ಪಕ್ಷವನ್ನು ದುರ್ಬಲಗೊಳಿಸಲು ಮತ್ತು ದೂಷಿಸಲು ಅನೇಕ ವಿಭಾಗಗಳು ಪ್ರಯತ್ನಿಸುತ್ತವೆ ಎಂದು ಶರ್ಮಾ ಹೇಳಿದರು.