Tuesday, August 26, 2025
Homeಇದೀಗ ಬಂದ ಸುದ್ದಿದಸರಾ ಗಜಪಡೆಗೆ ಎರಡನೇ ತಂಡಕ್ಕೆ ತೂಕಪರೀಕ್ಷೆ, ತಾಲೀಮು

ದಸರಾ ಗಜಪಡೆಗೆ ಎರಡನೇ ತಂಡಕ್ಕೆ ತೂಕಪರೀಕ್ಷೆ, ತಾಲೀಮು

Weight test, training for second team of Dasara elephant

ಮೈಸೂರು,ಆ.26- ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಎರಡನೇ ತಂಡದಲ್ಲಿ ಬಂದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು. ನಿನ್ನೆಯಷ್ಟೇ ಕಾಡಿನಿಂದ ಅರಮನೆ ಅಂಗಳಕ್ಕೆ ಪ್ರವೇಶ ಮಾಡಿದ ಎರಡನೇ ತಂಡದ ಐದು ಆನೆಗಳಿಗೆ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ತೂಕಮಾಪನ ಕೇಂದ್ರದಲ್ಲಿ ತೂಕ ಪರಿಶೀಲನೆ ಮಾಡಲಾಯಿತು.

ಹೇಮಾವತಿ-2440 ಕೆಜಿ, ಶ್ರೀಕಂಠ-5540 ಕೆಜಿ, ಸುಗ್ರೀವ-5545 ಕೆಜಿ, ರೂಪ-3320 ಕೆಜಿ, ಗೋಪಿ-4990 ಕೆಜಿ ತೂಕ ಹೊಂದಿವೆ.ಮೊದಲ ಹಂತದ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆಗಳ ತೂಕ ನೋಡುವುದಾದರೆ ಅಭಿಮನ್ಯು 5360 ಕೆಜಿ, ಧನಂಜಯ-5310 ಕೆಜಿ, ಕಾವೇರಿ-3010 ಕೆಜಿ, ಲಕ್ಷ್ಮಿ-3730 ಕೆಜಿ, ಭೀಮ-5465 ಕೆಜಿ, ಏಕಲವ್ಯ-5305 ಕೆಜಿ, ಮಹೇಂದ್ರ-5120 ಕೆಜಿ, ಕಂಜನ್‌-4880 ಕೆಜಿ, ಪ್ರಶಾಂತ-5110 ಕೆಜಿ ತೂಗಿವೆ.

ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಅಂಬಾರಿ ಸಂದರ್ಭದಲ್ಲಿ ಯಾವುದೇ ಸದ್ದುಗದ್ದಲದಿಂದ ವಿಚಲಿತವಾಗದಂತೆ ತರಬೇತಿ ನೀಡಲಾಗುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಲಾಗುತ್ತಿದೆ.

RELATED ARTICLES

Latest News